Advertisement

ಚುನಾವಣಾ ಆಯೋಗದಿಂದ ಮತದಾರರ ಜಾಗೃತಿ

04:06 PM Feb 25, 2022 | Team Udayavani |

ಬಳ್ಳಾರಿ: ಭಾರತ ಚುನಾವಣಾ ಆಯೋಗವುರಾಷ್ಟ್ರೀಯ ಮತದಾರರ ಜಾಗೃತಿ ನಿಮಿತ್ತ “ನನ್ನಮತ ನನ್ನ ಭವಿಷ್ಯ- ಒಂದು ಮತದ ಶಕ್ತಿ’ ಎಂಬಘೋಷವಾಕ್ಯದಡಿ ಐದು ವಿಭಾಗಗಳಲ್ಲಿ ವಿವಿಧಸ್ಪರ್ಧೆಗಳನ್ನು ಏರ್ಪಡಿಸಿದ್ದು, ಮಾ.15ರ ವರೆಗೆನಡೆಯಲಿರುವ ಸ್ಪರ್ಧೆಗಳಲ್ಲಿ ಯುವಕರು,ವೃತ್ತಿಪರರು ಸೇರಿ ಎಲ್ಲರೂ ಭಾಗವಹಿಸಬಹುದಾಗಿದೆಎಂದು ಜಿಪಂ ಸಿಇಒ ಕೆ.ಆರ್‌. ನಂದಿನಿ ಹೇಳಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಗುರುವಾರ ಸುದ್ದಿಗೋಷ್ಠಿಯಲ್ಲಿ ಅವರುಮಾತನಾಡಿದರು.ರಸಪ್ರಶ್ನೆ, ಘೋಷವಾಕ್ಯ ಬರೆಯುವುದು,ಗಾಯನ, ವೀಡಿಯೊ ತಯಾರಿಕೆ ಮತ್ತು ಭಿತ್ತಿಚಿತ್ರವಿನ್ಯಾಸ ಸೇರಿ ಒಟ್ಟು ಐದು ವಿಭಾಗಗಳಲ್ಲಿ ಸ್ಪರ್ಧೆಗಳುನಡೆಯಲಿವೆ. ಮೊದಲ ರಾಷ್ಟಿÅàಯ ಮತದಾರರಜಾಗೃತಿ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಳ್ಳಾರಿಜಿಲ್ಲೆಯ ಹವ್ಯಾಸಿ ವ್ಯಕ್ತಿಗಳು, ವೃತ್ತಿಪರರು, ಸಂಸ್ಥೆಗಳು,ಸಾರ್ವಜನಿಕರು ಭಾಗವಹಿಸಬೇಕು ಎಂದು ಅವರುಮನವಿ ಮಾಡಿದರು.

ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಲ್ಲಿ, ಸಾಮಾಜಿಕಮಾಧ್ಯಮ ವೇದಿಕೆ, ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಸಂಸ್ಥೆಗಳುಭಾಗವಹಿಸಬೇಕು ಎಂದು ಕೋರಿದ ಅವರು,ಈ ಸ್ಪರ್ಧೆಗಳಲ್ಲಿ ಭಾಗವಹಿಸುವುದರ ಮೂಲಕಅತ್ಯಾಕರ್ಷಕ ನಗದು ಬಹುಮಾನಗಳನ್ನು ಗೆಲ್ಲಬೇಕುಎಂದು ತಿಳಿಸಿದರು.

ಜಿಲ್ಲೆಯ ವಿದ್ಯಾರ್ಥಿಗಳು, ಸಂಸ್ಥೆ, ಸಾರ್ವಜನಿಕರು,ಬ್ಯಾಂಕ್‌ಗಳು, ಕೈಗಾರಿಕಾ ಸ್ಥಳಗಳಲ್ಲಿ, ಪೋಸ್ಟ್‌ ಆμàಸ್‌,ರೈಲ್ವೆ ನಿಲ್ದಾಣ, ಸರ್ಕಾರಿ ಕಚೇರಿಗಳಲ್ಲಿ ಹಾಗೂಸಾರ್ವಜನಿಕ ಸ್ಥಳಗಳಲ್ಲಿ ರಾಷ್ಟ್ರೀಯ ಮತದಾರರಜಾಗೃತಿ ಸ್ಪರ್ಧೆಯ ಪೋಸ್ಟರ್‌ಗಳನ್ನು ಅಂಟಿಸುವುದರಮೂಲಕ ಹೆಚ್ಚಿನ ಸ್ಪರ್ಧಾರ್ಥಿಗಳು ಭಾಗವಹಿಸುವಂತೆನೋಡಿಕೊಳ್ಳಲಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next