ಬಳ್ಳಾರಿ: ನಗರದ ಪ್ರತಿಷ್ಠಿತ ಸರಳಾದೇವಿ ಸರ್ಕಾರಿ ಪ್ರಥಮದರ್ಜೆ (ಸ್ವಾಯತ್ತ) ಪದವಿ ಕಾಲೇಜಿನಲ್ಲಿ ಅಕ್ರಮದ ಆರೋಪಕೇಳಿಬರುತ್ತಿದೆ. ಕಾಲೇಜಿನ ಹಳೆಯ ಕಟ್ಟಡದಲ್ಲಿ ಚೆನ್ನಾಗಿಸುಸಜ್ಜಿತವಾಗಿರುವ ನೆಲಹಾಸು (ಫ್ಲೋರಿಂಗ್) ಟೈಲ್ಸ್‌ನ್ನು ಒಡೆದು,ಗ್ರಾನೈಟ್ ಹಾಕುವ ಕಾಮಗಾರಿ ಭರದಿಂದ ಸಾಗಿರುವುದು ಈಆರೋಪಕ್ಕೆ ಪುಷ್ಠಿ ನೀಡುವಂತಾಗಿದೆ.ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ (ಸ್ವಾಯತ್ತ)ಪದವಿ ಕಾಲೇಜು ರಾಜ್ಯದಲ್ಲೇ ಅತಿಹೆಚ್ಚು ವಿದ್ಯಾರ್ಥಿಗಳನ್ನುಹೊಂದಿದೆ.
ಬಿಎ, ಬಿಕಾಂ, ಬಿ.ಎಸ್‌ಸಿ ಸ್ನಾತಕ ಮತ್ತು ಎಂಎರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಎಂ.ಕಾಂ ಸ್ನಾತಕೋತ್ತರ ವಿಭಾಗಗಳನ್ನುಹೊಂದಿರುವ ಕಾಲೇಜಿನಲ್ಲಿ ಸುಮಾರು 5400ಕ್ಕೂ ಹೆಚ್ಚುವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಸಂಖ್ಯೆ ಹೆಚ್ಚಿದ ಹಿನ್ನೆಲೆಯಲ್ಲಿ ಜಾಗದ ಕೊರತೆ ಎದುರಿಸುತ್ತಿದ್ದಕಾಲೇಜಿಗೆ ಪಕ್ಕದ ಮುನಿಸಿಪಲ್ ಕಾಲೇಜು ಮೈದಾನದಿಂದ ಸ್ವಲ್ಪಜಾಗವನ್ನು ಪಡೆದು ಹೆಚ್ಚುವರಿವಾಗಿ ನೂತನ ಕಟ್ಟಡಗಳನ್ನು ಸಹನಿರ್ಮಿಸುತ್ತಿದ್ದು, ಕಾಮಗಾರಿ ಇನ್ನು ಪ್ರಗತಿ ಹಂತದಲ್ಲಿದೆ.
ಇದುಪೂರ್ಣಗೊಳ್ಳುವ ಮುನ್ನವೇ 30 ವರ್ಷಕ್ಕೂ ಹೆಚ್ಚು ಹಳೆಯಕಾಲೇಜಿನ ಮೂಲ ಕಟ್ಟಡದಲ್ಲಿ ಹೊಸದಾಗಿ ಗ್ರಾನೈಟ್ ಹಾಕಲುಸುಸಜ್ಜಿತವಾಗಿದ್ದ ನೆಲಹಾಸು ಟೈಲ್ಸ್‌ಗಳನ್ನು ಡ್ರಿಲ್‌ಯಂತ್ರದಿಂದಒಡೆದು ಹಾಕಿ ಸರ್ಕಾರದ ಹಣವನ್ನು ಪೋಲು ಮಾಡುತ್ತಿರುವುದುಅಕ್ರಮದ ಆರೋಪಕ್ಕೆ ಪುಷ್ಠಿ ನೀಡುತ್ತಿದೆ.ಹೆಸರೇಳಲು ಇಚ್ಚಿಸದ ಉಪನ್ಯಾಸಕರು, ಸಿಬ್ಬಂದಿ ಹೇಳುವಂತೆಕಾಲೇಜಿನಲ್ಲಿ ಹಲವಾರು ಕೊರತೆಗಳು ಇವೆ. ತರಗತಿಗಳಲ್ಲಿವಿದ್ಯಾರ್ಥಿಗಳಿಗೆ ಕೂಡಲು ಸಮರ್ಪಕ ಆಸನಗಳು ಇಲ್ಲ.
ನೂತನಕಟ್ಟಡದಲ್ಲಿ ನಿರ್ಮಿಸಲಾಗುತ್ತಿರುವ ಗ್ರಂಥಾಲಯ ಕೊಠಡಿಯಲ್ಲಿವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲವಾಗುವ ರೀತಿಯಲ್ಲಿಹಲವು ಸೌಲಭ್ಯಗಳನ್ನು ಕಲ್ಪಿಸಬೇಕಾಗಿದೆ. ಇವೆಲ್ಲವನ್ನು ಬಿಟ್ಟು, 30ವರ್ಷಗಳ ಹಳೆಯ ಕಟ್ಟಡದಲ್ಲಿ ಚೆನ್ನಾಗಿರುವ ನೆಲಹಾಸು ಟೈಲ್Õಗಳನ್ನು ಒಡೆದು, ಹೊಸದಾಗಿ ಗ್ರಾನೈಟ್ ಹಾಕುವುದು ಎಷ್ಟು ಸರಿ?ಎಂದು ಪ್ರಶ್ನಿಸಿರುವ ಅವರು, ಈ ಹಣವನ್ನು ಇನ್ಯಾವುದಕ್ಕಾದರೂಬಳಸಬಹುದಿತ್ತಲ್ಲಾ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವೆಂಕೋಬಿ ಸಂಗನಕಲ್ಲು