Advertisement

ಹಿಜಾಬ್‌; ಕಾಲೇಜು ಮುಂಭಾಗ ಸಿಸಿ ಟಿವಿ ಅಳವಡಿಕೆ

08:02 PM Feb 20, 2022 | Team Udayavani |

ಬಳ್ಳಾರಿ: ನಗರದ ಸರಳಾದೇವಿ ಸರ್ಕಾರಿ ಪ್ರಥಮದರ್ಜೆ ಪದವಿ ಕಾಲೇಜಿನಲ್ಲಿ ಕಳೆದ ನಾಲ್ಕು ದಿನಗಳಿಂದನಡೆಯುತ್ತಿರುವ ಹಿಜಾಬ್‌ ವಿವಾದ ತಣ್ಣಗಾಗಿರುವಬೆನ್ನಲ್ಲೇ ಕೆಲ ವಿದ್ಯಾರ್ಥಿನಿಯರು ಶನಿವಾರ ಗುಂಪು ಸೇರಿವಿವಾದ ಸೃಷ್ಟಿಗೆ ವಿಫಲ ಯತ್ನನಡೆಸಿದ್ದಾರೆ.

Advertisement

ಇದರಿಂದಎಚ್ಚೆತ್ತ ಪ್ರಾಚಾರ್ಯರು, ಕಾಲೇಜು ಮುಂಭಾಗದಲ್ಲಿಸಿಸಿ ಟಿವಿ ಅಳವಡಿಸಿ, ವಿವಾದ ಸೃಷ್ಟಿಸಲು ಬರುವವರಪತ್ತೆಗೆ ಮುಂದಾಗಿದ್ದಾರೆ.ನಗರದ ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆಪದವಿ ಕಾಲೇಜಿನಲ್ಲಿ ಕಳೆದ ನಾಲ್ಕು ದಿನಗಳಿಂದಹಿಜಾಬ್‌ ವಿವಾದ ನಡೆಯುತ್ತಿದೆ. ಹೈಕೋರ್ಟ್‌ಆದೇಶ ಹಿನ್ನೆಲೆಯಲ್ಲಿ ಕಾಲೇಜು ಸಿಬ್ಬಂದಿಗಳುಹಿಜಾಬ್‌ ತೆಗೆಯುವಂತೆ ಸೂಚಿಸಿದ್ದಾರೆ. ಇದಕ್ಕೆಒಪ್ಪಿದ ಕೆಲ ವಿದ್ಯಾರ್ಥಿನಿಯರು ಕಾಲೇಜೊಳಗೆಹೋದರೆ, ವಿರೋಧಿ ಸಿದ ಕೆಲ ವಿದ್ಯಾರ್ಥಿನಿಯರುತಮ್ಮ ಪೋಷಕರು, ಬೆಂಬಲಿತ ಯುವಕ ಸಂಘಟನೆಗಳನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಮಧ್ಯಪ್ರವೇಶಿಸಿದ ಕಾಲೇಜು ಪ್ರಾಚಾರ್ಯರು, ಪೊಲೀಸರು,ಮುಸ್ಲಿಂ ಮುಖಂಡರು ಮಧ್ಯಪ್ರವೇಶಿಸಿ ವಿವಾದವಿಕೋಪಕ್ಕೆ ತಿರುಗಂತೆ ಇತ್ಯರ್ಥಪಡಿಸಿ, ಪರಿಸ್ಥಿತಿಯನ್ನುಶಾಂತಗೊಳಿಸಿದ್ದಾರೆ.ಇಷ್ಟೆಲ್ಲ ನಡೆದರೂ, ಕೆಲ ಮುಸ್ಲಿಂ ವಿದ್ಯಾರ್ಥಿನಿಯರುಶನಿವಾರ ಪುನಃ ವಿನಾಕಾರಣ ಗೊಂದಲ ಸೃಷ್ಟಿಸಲುಮುಂದಾಗಿದ್ದಾರೆ. ಪಕ್ಕದ ಮುನಿಸಿಪಲ್‌ ಕಾಲೇಜುಮೈದಾನದಲ್ಲಿ 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರುಜಮಾಯಿಸಿ, ಹಿಜಾಬ್‌ ತೆಗೆಯುವಂತೆ ಲಿಖೀತರೂಪದಲ್ಲಿ ನೀಡುವಂಗೆ ಪ್ರಾಚಾರ್ಯರನ್ನು ಕೇಳಲು ಚರ್ಚಿಸಿದ್ದಾರೆ.

ಮೂವರು ವಿದ್ಯಾರ್ಥಿನಿಯರು ಹೋಗಿಪ್ರಾಚಾರ್ಯರನ್ನು ಲಿಖೀತ ರೂಪದಲ್ಲಿ ನೀಡುವಂತೆಯೂಕೇಳಿದ್ದಾರೆ. ಇದಕ್ಕೆ ಒಪ್ಪದ ಪ್ರಾಚಾರ್ಯ ಪೊÅ.ಹೇಮಣ್ಣ, ನೀಡಲಾಗದು. ಸರ್ಕಾರ, ನ್ಯಾಯಾಲಯಹೇಳಿದಂತೆ ಕೇಳುವವರು ನಾವು. ಅಷ್ಟೇ ಹೊರತು,ಲಿಖೀತ ರೂಪದಲ್ಲಿ ಕಾಲೇಜಿನ ಲೆಟರ್‌ ಹೆಡ್‌ನ‌ಲ್ಲಿಏನನ್ನೂ ನೀಡಲಾಗದು ಎಂದು ಸ್ಪಷ್ಟಪಡಿಸಿದ್ದಾರೆ.

ಈ ವೇಳೆ ಮಧ್ಯಪ್ರವೇಶಿಸಿ ಪೊಲೀಸರು, ಹಿಜಾಬ್‌ ತೆಗೆದುಕಾಲೇಜು ಒಳಗಾದರು ಹೋಗಿ ಇಲ್ಲ ಮನೆಗಾದರೂಹೋಗಿ ಎಂದು ತಿಳಿಸಿದ್ದಾರೆ. ಇದಕ್ಕೆ ವಿರೋಧವ್ಯಕ್ತಪಡಿಸಿದ ವಿದ್ಯಾರ್ಥಿನಿಯರು, ಹಿಜಾಬ್‌ ತೆಗೆಯದೆಕಾಲೇಜು ಎದುರಲ್ಲೇ ಕೂತು ಓದುತ್ತೇವೆ ಎಂದಿದ್ದಾರೆ.ಇದರಿಂದ ಎಚ್ಚೆತ್ತ ಪೊಲೀಸರು, ವಿದ್ಯಾರ್ಥಿನಿಯರನ್ನುಮನೆಗೆ ವಾಪಸ್‌ ಕಳುಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next