Advertisement
ಜನರಕುಂದುಕೊರತೆಗಳನ್ನು ಆಲಿಸಿ ಸಾಧ್ಯವಾದಲ್ಲಿಸ್ಥಳದಲ್ಲೇ ಪರಿಷ್ಕರಿಸಲಿದ್ದಾರೆ. ಬಳ್ಳಾರಿ ಜಿಲ್ಲಾಧಿ ಕಾರಿ ಪವನ್‌ಕುಮಾರ್‌ಮಾಲಪಾಟಿ, ಸಹಾಯಕ ಆಯುಕ್ತರು,ತಹಶೀಲ್ದಾರ್‌ರು ಅ. 16ರಂದು ಬೆಳಗ್ಗೆ10 ಗಂಟೆಗೆ ತಾಲೂಕಿನ ರೂಪನಗುಡಿ,ಶಿಡಿಗಿನಮೊಳ ಗ್ರಾಮಗಳಿಗೆ ಭೇಟಿ ನೀಡಲಿದ್ದಾರೆ.
Related Articles
Advertisement
ಇನ್ನು ಗ್ರಾಮದಲ್ಲಿಜನಸಂಖ್ಯೆಗೆ ಅನುಗುಣವಾಗಿ ಸ್ಮಶಾನಇದೆಯೇ ಅಥವಾ ಇಲ್ಲವೇ ಎಂಬ ಬಗ್ಗೆಪರಿಶೀಲಿಸುವುದು, ಒಂದು ವೇಳೆ ಸ್ಮಶಾನಕ್ಕೆಜಮೀನು ಅಗತ್ಯವಿದ್ದಲ್ಲಿ ಮೊದಲಿಗೆಸರ್ಕಾರಿ ಜಮೀನನ್ನು ಗುರುತಿಸುವುದುಸರ್ಕಾರಿ ಜಮೀನು ಲಭ್ಯವಿಲ್ಲದೇ ಇದ್ದಲ್ಲಿಖಾಸಗಿ ಜಹಮೀನನ್ನು ಗುರುತಿಸಿಪ್ರಸ್ತಾವನೆ ಸಲ್ಲಿಸಿ ಕ್ರಮ ಕೈಗೊಳ್ಳಲಾಗುತ್ತದೆ.
ಗ್ರಾಮದಲ್ಲಿ ಆಶ್ರಯ ಯೋಜನೆಗೆ ಅವಶ್ಯಕತೆಇದ್ದಲ್ಲಿ ಲಭ್ಯ ಜಮೀನನ್ನು ಗುರುತಿಸಿಕಾಯ್ದಿರುವುದು, ಸರ್ಕಾರಿ ಜಮೀನುಹಾಗೂ ಸಾರ್ವಜನಿಕ ಉದ್ದೇಶಗಳಿಗೆಕಾಯ್ದಿರಿಸಿರುವ ಜಮೀನುಳನ್ನುಅಕ್ರಮವಾಗಿ ಒತ್ತುವರಿಯಾಗಿದ್ದಲ್ಲಿ ಅಂಥಜಮೀನುಗಳನ್ನು ಗುರುತಿಸಿ ತೆರವುಗೊಳಿಸಲುಕ್ರಮ ಕೈಗೊಳ್ಳಲಾಗುವುದು.
ಮತದಾರರ ಪಟ್ಟಿಯಲ್ಲಿ ಹೆಸರುಸೇರಿಸಲು ಅರ್ಜಿ ಸ್ವೀಕರಿಸುವುದು,ಬರ/ಪ್ರವಾಹ ಇದ್ದಲ್ಲಿ ಕುಡಿವ ನೀರುಸೌಲಭ್ಯ ಒದಗಿಸುವುದು, ಹದ್ದು ಬಸ್ತು,ಪೋಡಿ, ಪೋಡಿ ಮುಕ್ತಗ್ರಾಮ, ದರಕಾಸ್ತುಪೋಡಿ, ಕಂದಾಯ ಗ್ರಾಮಗಳ ರಚನೆಸೇರಿದಂತೆ ಇನ್ನಿತರೆ ಹಲವು ಸಮಸ್ಯೆಗಳನ್ನುಅ ಧಿಕಾರಿಗಳು ಆಲಿಸಿ ಇತ್ಯರ್ಥಕ್ಕೆ ಕ್ರಮಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಡಳಿತಪ್ರಕಟಣೆಯಲ್ಲಿ ತಿಳಿಸಿದೆ.
ಬೆಳಗ್ಗೆ 10ಗಂಟೆಯಿಂದ ಸಂಜೆ 5 ಗಂಟೆವರೆಗೆ ಜನರಕುಂದುಕೊರತೆ ಸಭೆ ನಡೆಯಲಿದ್ದು, ನಂತರಗ್ರಾಮೀಣ ಪ್ರತಿಭೆ ಮತ್ತು ಕಲೆಯನ್ನುಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಾಂಸ್ಕೃತಿಕಕಾರ್ಯಕ್ರಮ ನಡೆಯಲಿದೆ.