ಬಳ್ಳಾರಿ: ನಗರದ ಸರಳಾದೇವಿ ಸರ್ಕಾರಿ ಪ್ರಥಮದರ್ಜೆ ಪದವಿ ಕಾಲೇಜಿನಲ್ಲಿ ಬುಧವಾರಆರಂಭವಾಗಿದ್ದ ಹಿಜಾಬ್ ವಿವಾದ ಗುರುವಾರವೂಮುಂದುವರೆದಿದ್ದು, ಇಲ್ಲಿನ ಎಎಸ್‌ಎಂ ಕಾಲೇಜಿಗೂಕಾಲಿಟ್ಟಿತು. ಕಾಲೇಜಿನ ಪ್ರಾಚಾರ್ಯರು, ಪೊಲೀಸರು,ಮುಸ್ಲಿಂ ಮುಖಂಡರು ಮಧ್ಯಪ್ರವೇಶಿಸುವ ಮೂಲಕಪರಿಸ್ಥಿತಿಯನ್ನು ತಿಳಿಗೊಳಿಸಿ, ಪ್ರತಿಭಟನೆ ನಡೆಸುತ್ತಿದ್ದವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಚದುರಿಸಿದರು.
ನಗರದ ಸರಳಾದೇವಿ ಸರ್ಕಾರಿ ಪ್ರಥಮದರ್ಜೆ ಪದವಿ ಕಾಲೇಜಿನಲ್ಲಿ ಆಂತರಿಕ ಪರೀಕ್ಷೆಗಳುನಡೆಯುತ್ತಿರುವ ಹಿನ್ನೆಲೆಯಲ್ಲಿ ಗುರುವಾರವೂಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರಲ್ಲಿಕೆಲವರು ಹಿಜಾಬ್ ತೆಗೆಯಲು ಒಪ್ಪಿ ಪರೀಕ್ಷೆಬರೆಯಲು ಒಳಗೆ ತೆರಳಿದರೆ, ಕೆಲವರು ನಿರಾಕರಿಸಿದಕೆಲ ವಿದ್ಯಾರ್ಥಿನಿಯರನ್ನು ಗೇಟ್ ಹೊರಗೆತಡೆಯಲಾಯಿತು. ಕಾಲೇಜು ಹೊರಗುಳಿದಸುಮಾರು 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆಪೋಷಕರು, ವಿವಿಧ ಸಂಘಟನೆಗಳ ಯುವಕರುಸಾಥ್ ನೀಡಿದ ಹಿನ್ನೆಲೆಯಲ್ಲಿ ದಿಢೀರ್ ಪ್ರತಿಭಟನೆನಡೆಸಿ, ಕಾಲೇಜು ಪ್ರಾಚಾರ್ಯರ ವಿರುದ್ಧ ವಿವಿಧಘೋಷಣೆಗಳನ್ನು ಕೂಗಿದರು. ಹೈಕೋರ್ಟ್‌ನೀಡಿರುವ ಮಧ್ಯಂತರ ಆದೇಶದ ಪ್ರತಿಯನ್ನುತೋರಿಸುವಂತೆ ಪಟ್ಟು ಹಿಡಿದರು.ಈ ವೇಳೆ ಮಧ್ಯ ಪ್ರವೇಶಿಸಿ ಪೊಲೀಸರುಮತ್ತು ಪ್ರತಿಭಟನಾಕಾರರ ನಡುವೆ ಕೆಲಹೊತ್ತುವಾಗ್ವಾದ ನಡೆಯಿತು.
ವಿಕೋಪಕ್ಕೆ ತಿರುಗುವಪರಿಸ್ಥಿತಿ ನಿರ್ಮಾಣವಾಯಿತು. ಯುವಕರನ್ನುಬಂಧಿ ಸಲು ಪೊಲೀಸರು ಸಜ್ಜಾಗುತ್ತಿದ್ದಂತೆ ಮುಸ್ಲಿಂಸಮುದಾಯದ ಮುಖಂಡರು, ವಕೀಲರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಈನಡುವೆ ಪ್ರಾಚಾರ್ಯ ಹೇಮಣ್ಣ ಅವರು, ಹೈಕೋರ್ಟ್‌ಆದೇಶದ ಪ್ರತಿಯನ್ನು ತಂದು ವಿದ್ಯಾರ್ಥಿನಿಯರುಅವರ ಬೆಂಬಲಿತ ಪೋಷಕರು, ಪ್ರತಿಭಟನಾಕಾರರಿಗೆವಿವರಿಸಿ ಮನವರಿಕೆ ಮಾಡಿಕೊಟ್ಟರು. ಮುಸ್ಲಿಂಮುಖಂಡರು ಸಹ ಕಾನೂನು ಎಲ್ಲರಿಗೂ ಒಂದೆ.ನಾವು ಈ ರೀತಿ ಮಾಡುವುದು ತಪ್ಪು. ನಾವು ಸಹಕಾನೂನಾತ್ಮಕವಾಗಿ ಹೋರಾಟ ಮಾಡೋಣ ಎಂದುಮನವರಿಕೆ ಮಾಡಿಕೊಟ್ಟರು.
ಇದರಿಂದ ಪರಿಸ್ಥಿತಿತಿಳಿಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲರನ್ನೂಚದುರಿಸಿ ವಾಪಸ್ ಕಳುಹಿಸಿದರು.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದಮುಸ್ಲಿಂ ಮುಖಂಡರು, ವಕೀಲರಾದ ಮಹ್ಮದ್‌ಯೂಸೂಫ್, ಮಹ್ಮದ್ ಅಲಿ ಮುಲ್ಕಿ, ರೋಷನ್‌ಬಾಷಾ ಅವರು, ಹಿಜಾಬ್ ಸಂಬಂಧ ಹೈಕೋರ್ಟ್‌ಮಧ್ಯಂತರ ಆದೇಶ ಹೊರಡಿಸಿದೆ. ಕಾನೂನುಎಲ್ಲರಿಗೂ ಒಂದೇ. ನಾವು ಕಾನೂನು ಹೊರತಾಗಿಲ್ಲ. ಯಾರಿಗೂ ಅನ್ಯಾಯ ಆಗಬಾರದು.
ಪರೀಕ್ಷೆಯಿಂದಹೊರಗುಳಿದ ವಿದ್ಯಾರ್ಥಿನಿಯರಿಗೆ ಪರ್ಯಾಯವ್ಯವಸ್ಥೆ ಮಾಡುವುದಾಗಿ ಪ್ರಾಚಾರ್ಯರುಭರವಸೆ ನೀಡಿದ್ದಾರೆ. ಬಳ್ಳಾರಿ ಶಾಂತವಾಗಿದೆ. ಎಲ್ಲಧರ್ಮದವರು ಸೌಹಾರ್ದಯುತವಾಗಿದ್ದಾರೆ. ಹಾಗೆಇರಬೇಕು ಎಂದು ಕೋರುತ್ತೇವೆ. ಬಳ್ಳಾರಿಯಲ್ಲಿಈವರೆಗೂ ಕೋಮುಗಲಭೆ ನಡೆದಿಲ್ಲ. ನಾವೆಲ್ಲರೂಚೆನ್ನಾಗಿದ್ದೇವೆ. ಹಿಜಾಬ್ ಒಂದು ರಾಜಕೀಯಅಜೆಂಡಾ ಎಂಬುದು ಎಲ್ಲರಿಗೂ ಗೊತ್ತು. ಈವಿವಾದರಿಂದ ಸಾಮಾನ್ಯ ವರ್ಗದ ಜನರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದು ತಿಳಿಸಿದರು.
ಕಾಲೇಜು ಪ್ರಾಚಾರ್ಯ ಪ್ರೊ| ಹೇಮಣ್ಣಮಾತನಾಡಿ, ಆಂತರಿಕ ಪರೀಕ್ಷೆ ಬರೆಯಲು ಎಲ್ಲರಂಗೆಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿಗೆ ಬಂದಿದ್ದರು.ಈ ಪೈಕಿ 60ಕ್ಕೂ ಹೆಚ್ಚು ವಿದ್ಯಾರ್ಥಿನಿಯರುಹಿಜಾಬ್ ತೆಗೆಯಲು ಒಪ್ಪಿ ಒಳಬಂದು ಪರೀಕ್ಷೆಗೆಹಾಜರಾಗಿದ್ದಾರೆ. ನಿರಾಕರಿಸಿದ 20ಕ್ಕೂ ಹೆಚ್ಚುವಿದ್ಯಾರ್ಥಿನಿಯರು ಹೊರಗೆ ಉಳಿದಿದ್ದಾರೆ. ಅವರಿಗೆಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದುತಿಳಿಸಿದರು.