ಬಳ್ಳಾರಿ: ಕೋವಿಡ್ ಸೋಂಕು ನಡುವೆಯೂನಗರದ ಆರಾಧ್ಯ ದೈವ ಶ್ರೀ ಕೋಟೆ ಮಲ್ಲೇಶ್ವರಸ್ವಾಮಿಯ ಮಡಿ ತೇರು, ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಕ್ತಿ, ಶ್ರದ್ಧೆ, ಸಡಗರಸಂಭ್ರಮದಿಂದ ಬುಧವಾರ ನಡೆಯಿತು. ಭಕ್ತರುಹೂ ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.
ನಗರದ ತೇರು ಬೀದಿಯಲ್ಲಿ ಪ್ರತಿವರ್ಷದಂತೆಸಿಂಗರಿಸಿ ನಿಲ್ಲಿಸಲಾಗಿದ್ದ ರಥಕ್ಕೆ ಭಕ್ತರು ಬೃಹತ್‌ಹೂ ಮಾಲೆಗಳನ್ನು ತಂದು ಹಾಕಿದರು.ತೇರಿನಲ್ಲಿ ಮಲ್ಲೇಶ್ವರ ಸ್ವಾಮಿಯನ್ನುಪ್ರತಿಷ್ಠಾಪಿಸದ ಮೇಲೆ ತೇರನ್ನು ಮೇಳ, ತಮಟೆ,ಡೊಳ್ಳು ವಾದನಗಳ ಮೂಲಕ ಒಂದಿಷ್ಟು ದೂರದವರೆಗೆ ಎಳೆದು ಸ್ವಸ್ಥಾನಕ್ಕೆ ತಂದು ನಿಲ್ಲಿಸಲಾಯಿತು.
ಪೊಲೀಸರು ಬಂದೋಬಸ್ತು ಒದಗಿಸಿದ್ದರು.ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಆದೇಶದಂತೆ ಸಂಜೆ ನಡೆಯಬೇಕಿದ್ದ ಮಲ್ಲೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ರದ್ದು ಮಾಡಲಾಗಿದ್ದು,ಬೆಳಗ್ಗೆಯೇ ಒಂದಷ್ಟು ದೂರದವರೆಗೆ ಎಳೆದುವಾಪಸ್ ಸ್ವಸ್ಥಳಕ್ಕೆ ತಂದು ನಿಲ್ಲಿಸಲಾಯಿತು.ಭಕ್ತರು ಬಂದು ನಿಂತಿರುವ ರಥಕ್ಕೆ ತೆಂಗಿನಕಾಯಿಹಣ್ಣು ಅರ್ಪಿಸಿ ಭಕ್ತಿ ಸಮರ್ಪಿಸಿದರು.
ಜಿಲ್ಲಾಉಸ್ತುವಾರಿ ಸಚಿವ ಬಿ.ಶ್ರೀರಾಮುಲು, ಮಾಜಿಸಚಿವ ಜನಾರ್ದನರೆಡ್ಡಿ, ಶಾಸಕ ಜಿ.ಸೋಮಶೇಖರರೆಡ್ಡಿಯವರು, ಮಡಿತೇರಿಗೆ ವಿಶೇಷ ಪೂಜೆ ಸಲ್ಲಿಸಿಭಕ್ತಿ ಸಮರ್ಪಿಸಿದರು. ಬಳಿಕ ರಥೋತ್ಸವಕ್ಕೆ ಚಾಲನೆನೀಡಿದರು. ಬುಡಾ ಅಧ್ಯಕ್ಷ ಪಿ.ಪಾಲಣ್ಣ. ಪಾಲಿಕೆಸದಸ್ಯರು, ಮಾಜಿ ಸದಸ್ಯ ವಿ.ಎಸ್. ಮರಿದೇವಯ್ಯ,ಮೊದಲಾದವರು ಪಾಲ್ಗೊಂಡಿದ್ದರು.
ಇನ್ನು ಕೋಟೆ ಪ್ರದೇಶದಲ್ಲಿರುವ ಮಲ್ಲೇಶ್ವರಸ್ವಾಮಿ ದೇವಸ್ಥಾನವನ್ನು ಜಾತ್ರೆ ಅಂಗವಾಗಿವಿಶೇಷವಾಗಿ ಅಲಂಕರಿಸಲಾಗಿದೆ. ವಿಶೇಷಪೂಜೆ ಮಾಡಿದ ಭಕ್ತರು ಆಗಮಿಸಿ ದರ್ಶನಪಡೆಯುತ್ತಿದ್ದಾರೆ.