Advertisement

ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸಿ

03:38 PM Feb 13, 2022 | Team Udayavani |

ಬಳ್ಳಾರಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣಇಲಾಖೆ ಮಂತ್ರಾಲಯ, ಕರ್ನಾಟಕ ಸರ್ಕಾರಮತ್ತು ವಿಮ್ಸ್‌ ಸಂಯುಕ್ತ ಆಶ್ರಯದಲ್ಲಿ ಪ್ರಧಾನಮಂತ್ರಿಸ್ವಸ್ಥ Â ಸುರûಾ ಯೋಜನೆಯಡಿ ನಿರ್ಮಿಸಲಾಗಿರುವಟ್ರಾಮಾ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿಟ್ರಾಮಾಕೇರ್‌ ಸೇವೆಗಳಿಗೆ ಸಾರಿಗೆ, ಜಿಲ್ಲಾ ಉಸ್ತುವಾರಿಸಚಿವ ಬಿ.ಶ್ರೀರಾಮುಲು ಶನಿವಾರ ಚಾಲನೆನೀಡಿದರು.

Advertisement

ಬಳಿಕ ಮಾತನಾಡಿದ ಅವರು, ಈ ಸೂಪರ್‌ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಟ್ರಾಮಾಕೇರ್‌ ಸೇವೆಗಳುಆರಂಭವಾಗುತ್ತಿರುವುದು ಸಂತಸದ ವಿಷಯ. ವೈದ್ಯರುಮತ್ತು ವೈದ್ಯಕೀಯ ಸಿಬ್ಬಂದಿ ಚಿಕಿತ್ಸೆಗೆ ಆಗಮಿಸುವರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸಿ ಮತ್ತುಸಮರ್ಪಕವಾದ ಚಿಕಿತ್ಸೆ ನೀಡುವುದರ ಮೂಲಕಅವರನ್ನು ಗುಣಮುಖರನ್ನಾಗಿ ಮಾಡಬೇಕುಎಂದರು.

ವೈದ್ಯರು ಹಾಗೂ ಸಿಬ್ಬಂದಿಗೆ ಸರ್ಕಾರ ಎಲ್ಲಸೌಲಭ್ಯಗಳನ್ನು ಕಲ್ಪಿಸಿದೆ ಎಂದ ಸಚಿವರು, ಆಸ್ಪತ್ರೆವಿವಿಧ ವಿಭಾಗಗಳ ಮುಖ್ಯಸ್ಥರ(ಎಂಡಿಗಳ)ಸಭೆಯಲ್ಲಿ ಕಡ್ಡಾಯವಾಗಿ ಆಸ್ಪತ್ರೆಯಲ್ಲಿದ್ದುಕೊಂಡುರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಬೇಕು.ಹಾಜರಿ ಹಾಕಿ ಖಾಸಗಿ ಕ್ಲಿನಿಕ್‌ಗಳಿಗೆ ತೆರಳಿದರೇ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಸೂಚನೆ ನೀಡಲಾಗಿದೆ.

ರೋಗಿಗಳಿಗೆ ಔಷಧಗಳನ್ನು ಹೊರಗಡೆ ತರುವಂತೆಖಾಸಗಿ ಚೀಟಿ ನೀಡಿದರೇ ಕ್ರಮ ಕೈಗೊಳ್ಳಬೇಕಾಗುತ್ತದೆಎಂದು ತಿಳಿಸಲಾಗಿದೆ ಎಂದರು.ಆಸ್ಪತ್ರೆಯಲ್ಲಿ ವೈದ್ಯರು, ನರ್ಸ್‌ಗಳ ಕೊರತೆಯಿದ್ದು,ಮುಂದಿನ ದಿನಗಳಲ್ಲಿ ಭರ್ತಿ ಮಾಡಿಕೊಳ್ಳಲಾಗುವುದು.ಆಯುಷ್ಮಾನ್‌ ಕಾರ್ಡ್‌ಗಳನ್ನು ಬಡವರಿಗೆ ಒದಗಿಸುವಕೆಲಸ ಮಾಡುವಂತೆ ಅಧಿ ಕಾರಿಗಳಿಗೆ ತಿಳಿಸಿದ ಅವರು,2008-09ರ ಸಂದರ್ಭದಲ್ಲಿ ಈ ಸೂಪರ್‌ ಸ್ಪೇಷಾಲಿಟಿಆಸ್ಪತ್ರೆಗೆ ಭೂಮಿಪೂಜೆ ನೆರವೇರಿಸಿದ್ದೆವು.

ಈಗ ನನ್ನಕೈಯಲ್ಲಿಯೇ ಸೇವೆಗಳಿಗೆ ಉದ್ಘಾಟನೆಯಾಗುತ್ತಿರುವುದುಖುಷಿ ತಂದಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಗ್ರಾಮೀಣ ಶಾಸಕ ಬಿ.ನಾಗೇಂದ್ರಮಾತನಾಡಿ, ಈ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಬರಲುಮಾಜಿ ಸಚಿವ ಜಿ. ಜನಾರ್ಧನರೆಡ್ಡಿ ಹಾಗೂ ಜಿಲ್ಲಾಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಅವರುಪ್ರಮುಖರು. ಜನಪ್ರತಿನಿಧಿಗಳ ಇಚ್ಛಾಶಕ್ತಿಯಿಂದಮಾತ್ರ ಇಂಥ ಕಟ್ಟಡಗಳು ತಲೆಎತ್ತಲು ಸಾಧ್ಯ. ಉತ್ತಮಕಾರ್ಯಕ್ಕೆ ಎಲ್ಲರೂ ಪûಾತೀತವಾಗಿ ಕೈಜೋಡಿಸುವುದರಮೂಲಕ ಬಳ್ಳಾರಿ ಜಿಲ್ಲೆ ಅಭಿವೃದ್ಧಿ ಮಾಡೋಣಎಂದರು.

Advertisement

ವಿಮ್ಸ್‌ ನಿರ್ದೇಶಕ ಡಾ| ಗಂಗಾಧರಗೌಡಪ್ರಾಸ್ತಾವಿಕವಾಗಿ ಮಾತನಾಡಿ, ಆಸ್ಪತ್ರೆಯಲ್ಲಿ 6ಮಾಡರ್ನ್ ಒಟಿಗಳು, ಎರಡು ಕನ್ವೆನÒನ್‌ಗಳಿವೆ.ಟ್ರಾಮಾಕೇರ್‌ ಆಸ್ಪತ್ರೆಯಲ್ಲಿ ಆಥೋìಪೆಡಿಕ್‌ (ಹಸ್ತಿಚಿಕಿತ್ಸಾ ವಿಭಾಗ), ನ್ಯೂರೋಸರ್ಜರಿ (ನರರೋಗಚಿಕಿತ್ಸಾ ವಿಭಾಗ), ಪ್ಲಾಸ್ಟಿಕ್‌ ಸರ್ಜರಿ (ಸ್ವರೂಪ ಚಿಕಿತ್ಸಾವಿಭಾಗ), ಅರವಳಿಕೆ ಶಾಸ್ತ್ರ ವಿಭಾಗಗಳ ಸೇವೆಗಳನ್ನುಆರಂಭಿಸಲಾಗುತ್ತಿದೆ. ಎಲ್ಲ ರೀತಿಯ ಅತ್ಯಾಧುನಿಕಸೌಲಭ್ಯಗಳನ್ನು ಈ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆಹೊಂದಿದ್ದು, ಸೇವೆಗಳು ಆರಂಭವಾಗುವುದರಿಂದಬಳ್ಳಾರಿ ಸೇರಿದಂತೆ ರಾಜ್ಯ ಹಾಗೂ ಆಂಧ್ರಪ್ರದೇಶ,ತೆಲಂಗಾಣ ಜನರಿಗೆ ಅನುಕೂಲ ಪಡೆಯಲಿದ್ದಾರೆಎಂದರು.

ಈ ಸಂದರ್ಭದಲ್ಲಿ ನಗರ ಶಾಸಕ ಜಿ. ಸೋಮಶೇಖರ್‌ರೆಡ್ಡಿ, ಕರ್ನಾಟಕ ಸಫಾಯಿ ಕರ್ಮಚಾರಿ ಅಭಿವೃದ್ಧಿನಿಗಮದ ಅಧ್ಯಕ್ಷ ಹನುಮಂತಪ್ಪ, ಬುಡಾ ಅಧ್ಯಕ್ಷ ಪಿ.ಪಾಲನ್ನ, ಜಿಲ್ಲಾಧಿ ಕಾರಿ ಪವನಕುಮಾರ ಮಾಲಪಾಟಿ,ಎಸ್ಪಿ ಸೈದುಲು ಅಡಾವತ್‌, ಮಾಜಿ ಸಂಸದ ಸಣ್ಣಫಕೀರಪ್ಪ, ಜೆ.ಶಾಂತಾ, ಮಾಜಿ ಶಾಸಕ ಸುರೇಶಬಾಬು,ಮಹಾನಗರ ಪಾಲಿಕೆ ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next