Advertisement

ಅನ್ನದಾತನ ಕೈಹಿಡಿದ ಚೆಂಡು ಹೂ

02:59 PM Oct 12, 2021 | Team Udayavani |

ಸಿರುಗುಪ್ಪ: ತಾಲೂಕಿನ ರಾರಾವಿ ಗ್ರಾಮದ ರೈತ ಚಂದ್ರಶೇಖರ್‌ಅರ್ಧ ಎಕರೆ ಜಮೀನಿನಲ್ಲಿ ಚೆಂಡು ಹೂ ಬೆಳೆ ಬೆಳೆದಿದ್ದುಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದು ದಸರಾ ಹಬ್ಬದಅಂಗವಾಗಿ ಬಳ್ಳಾರಿ ಮತ್ತು ಸಿರುಗುಪ್ಪದ ವ್ಯಾಪಾರಿಗಳುರೈತನ ಜಮೀನಿಗೆ ತೆರಳಿ ಹೂವನ್ನು ಖರೀದಿಸಲು ಮುಂದಾಗಿದ್ದಾರೆ.

Advertisement

ಕಳೆದ ಮೂರು ವರ್ಷಗಳಿಂದಲೂ ಚೆಂಡು ಹೂ ಮತ್ತುಸೇವಂತಿಗೆ ಹೂವನ್ನು ದಸರಾ ಮತ್ತು ದೀಪಾವಳಿ ಸಂದರ್ಭಕ್ಕೆಕಟಾವು ಬರುವಂತೆ ಬೆಳೆಯನ್ನು ಬೆಳೆಯುತ್ತಿರುವುದರಿಂದ ರೈತನು ತನ್ನ ಅರ್ಧ ಎಕರೆ ಚೆಂಡು ಹೂವಿನ ಬೆಳೆಬೆಳೆಯಲು ರೂ. 10 ಸಾವಿರ ವೆಚ್ಚವಾಗುತ್ತಿದ್ದು, ಬೆಳೆಬೆಳೆಯಲು ವೆಚ್ಚವಾದ ಹಣ ತೆಗೆದು ರೂ. 30ರಿಂದ40 ಸಾವಿರ ಆದಾಯ ಗಳಿಸುತ್ತಿದ್ದಾನೆ.

ಅರ್ಧ ಎಕರೆಗೆ8ರಿಂದ 10 ಕ್ವಿಂಟಲ್‌ ಇಳುವರಿ ಪಡೆಯುತ್ತಿದ್ದು, ಒಂದುಕ್ವಿಂಟಲ್‌ ಹೂವಿಗೆ ರೂ.5 ಸಾವಿರದಂತೆ ಮಾರಾಟಣಮಾಡುತ್ತಿದ್ದು, ಮಾರುಕಟ್ಟೆಯಲ್ಲಿ ಚೆಂಡುಹೂವಿಗೆದಸರಾ ಮತ್ತು ದೀಪಾವಳಿ ಸಂದರ್ಭದಲ್ಲಿ ಹೆಚ್ಚಿನ ಬೇಡಿಕೆ ಇರುತ್ತದೆ.ಆದ್ದರಿಂದ ಬಳ್ಳಾರಿ ಮತ್ತು ಸಿರುಗುಪ್ಪದ ಹೂವಿನವ್ಯಾಪಾರಿಗಳು ರೈತನ ಹೊಲಕ್ಕೆ ಬಂದು ಹೂವನ್ನು ಖರೀದಿಸುತ್ತಿರುವುದರಿಂದ ರೈತನಿಗೆ ಮಾರುಕಟ್ಟೆಗೆ ಹೂವನ್ನುಸಾಗಿಸುವ ವೆಚ್ಚ ಉಳಿಯುತ್ತದೆ.

ಹೂವನ್ನು ಕಟಾವುಮಾಡಿದ ನಂತರ ವ್ಯಾಪಾರಿಗಳು ತೂಕ ಮಾಡಿಕೊಂಡುತಮ್ಮದೇ ವಾಹನದಲ್ಲಿ ಸಾಗಿಸುತ್ತಾರೆ.ತೋಟಗಾರಿಕೆ ಬೆಳೆಯಲ್ಲಿ ಬರುವ ಹೂವಿನ ಬೆಳೆಗೆ ನಮ್ಮತಾಲೂಕಿನಲ್ಲಿ ಹೆಚ್ಚಿನ ರೈತರು ಆಸಕ್ತಿ ತೋರಿಸುತ್ತಿಲ್ಲ. ಆದರೆರೈತ ಚಂದ್ರಶೇಖರ್‌ ಕಳೆದ ಮೂರು ವರ್ಷಗಳಿಂದ ಚೆಂಡುಹೂ, ಸೇವಂತಿಗೆ ಹೂವನ್ನು ಬೆಳೆದು ಉತ್ತಮ ಆದಾಯಪಡೆದು ಇತರೆ ರೈತರಿಗೆ ಮಾದರಿಯಾಗಿದ್ದಾನೆ.

ಆರ್‌.ಬಸವರೆಡ್ಡಿ ಕರೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next