ಬಳ್ಳಾರಿ: ವಿವಿಧ ಪದವಿ ಕಾಲೇಜುಗಳಂತೆ ನಗರದಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಪದವಿಕಾಲೇಜು ಸಹ ಪರೀಕ್ಷಾ ಶುಲ್ಕಕ್ಕೆ ವಿನಾಯಿತಿನೀಡಬೇಕೆಂದು ಆಗ್ರಹಿಸಿ ನಗರದ ಜಿಲ್ಲಾಧಿಕಾರಿಕಚೇರಿ ಎದುರು ಎಐಡಿಎಸ್‌ಒ ಸಂಘಟನೆಯಿಂದಗುರುವಾರ ಪ್ರತಿಭಟನೆ ನಡೆಯಿತು.ಸರಳಾದೇವಿ ಸತೀಶ್ಚಂದ್ರ ಅಗರ್ವಾಲ್ ಸರ್ಕಾರಿಪ್ರಥಮ ದರ್ಜೆ ಕಾಲೇಜಿನ ಪದವಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು 150ರೂ.ಗಳನ್ನು ಮಾತ್ರವಿದ್ಯಾರ್ಥಿಗಳಿಂದ ಕಟ್ಟಿಸಿಕೊಳ್ಳಬೇಕಿದ್ದ ಕಾಲೇಜಿನಪರೀûಾಂಗ ವಿಭಾಗವು ಬಿಎ 1050 ರೂ,ಬಿ.ಕಾಂ 1150 ರೂ, ಮತ್ತು ಬಿ.ಎಸ್ಸಿ 1200 ರೂ.ಗಳನ್ನು ಪರೀûಾ ಶುಲ್ಕವನ್ನಾಗಿ ವಿದ್ಯಾರ್ಥಿಗಳಿಂದಕಟ್ಟಿಸಿಕೊಂಡು ಕೋವಿಡ್ ಸಂಕಷ್ಟದಲ್ಲಿರುವ ಬಡ,ಗ್ರಾಮೀಣ ವಿದ್ಯಾರ್ಥಿಗಳಿಗೆ ಗಾಯದ ಮೇಲೆಬರೆ ಎಳೆಯುತ್ತಿದೆ ಎಂದು ಪ್ರತಿಭಟನಾಕಾರರುಆರೋಪಿಸಿದ್ದಾರೆ.
ಸರ್ಕಾರಿ ಕಾಲೇಜಿನಲ್ಲಿ ಓದಲು ಬರುವವರೆಲ್ಲರೂಅತ್ಯಂತ ಬಡ ವಿದ್ಯಾರ್ಥಿಗಳಾಗಿರುತ್ತಾರೆ.ಆರ್ಥಿಕವಾಗಿ ಹಿಂದುಳಿದವರಾಗಿರುವುದರಿಂದಅವರಿಗೆ ಸಾವಿರಾರು ರೂ. ಶುಲ್ಕ ಕಟ್ಟಲುಆಗುವುದಿಲ್ಲ. ಆದ್ದರಿಂದಲೇ ವಾರ್ಷಿಕ ಆದಾಯ2 ಲಕ್ಷಕ್ಕಿಂತ ಕಡಿಮೆಯಿರುವ ವಿದ್ಯಾರ್ಥಿಗಳಿಗೆ ಶುಲ್ಕವಿನಾಯಿತಿ ನಿಡಲಾಗುತ್ತಿದೆ.
ಆದರೆ, ಸರಳಾದೇವಿಕಾಲೇಜಿನಲ್ಲಿ ಈ ಶುಲ್ಕ ವಿನಾಯಿತಿ ನೀಡದೆಯೇಸಂಪೂರ್ಣ ಶುಲ್ಕವನ್ನು ವಿದ್ಯಾರ್ಥಿಗಳಿಂದಕಟ್ಟಿಸಿಕೊಳ್ಳಲಾಗುತ್ತಿದೆ. ಇದು ಸಾವಿರಾರು ಬಡವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆಯಾಗಿದ್ದು, ತಮ್ಮಶಿಕ್ಷಣಕ್ಕಾಗಿ ಸರ್ಕಾರಿ ಕಾಲೇಜುಗಳ ಮೇಲೆಯೇಅವಲಂಬಿತವಾಗಿರುವ ಇಂತಹ ವಿದ್ಯಾರ್ಥಿಗಳಿಗೆಪರೀûಾ ಶುಲ್ಕ ಭರಿಸಲಾಗದೆ ವಿದ್ಯಾಭ್ಯಾಸಕ್ಕೆ ಕುತ್ತುಬರುತ್ತದೆ.
ಈ ಕುರಿತು ಇದೇ ತಿಂಗಳು ಫೆ.1 ರಂದುಕಾಲೇಜಿನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದಾಗಕಾಲೇಜಿನ ಪ್ರಾಂಶುಪಾಲರು, ಸಮಾಜ ಕಲ್ಯಾಣಇಲಾಖೆ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಮತ್ತುಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳಿಂದಕಾಲೇಜಿಗೆ ಬರಬೇಕಿದ್ದ ಶುಲ್ಕ ವಿನಾಯಿತಿ ಪಡೆಯುವವಿದ್ಯಾರ್ಥಿಗಳ ಪರೀûಾ ಶುಲ್ಕವು ಕಳೆದ ವರ್ಷದಿಂದಬರುತ್ತಿಲ್ಲವಾದ್ದರಿಂದ ನಾವು ವಿದ್ಯಾರ್ಥಿಗಳಿಂದಕಟ್ಟಿಸಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.