ಬಳ್ಳಾರಿ: ನಗರ ಹೊರವಲಯದ ಅಂದ್ರಾಳ್‌ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಎದುರುಗಡೆ ಬಳ್ಳಾರಿ ಜಿಲ್ಲೆಯ ನೋಂದಾಯಿತಕಟ್ಟಡ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಸೋಮವಾರ ಹಮ್ಮಿಕೊಳ್ಳಲಾಯಿತು.
ಜಿಲ್ಲಾಡಳಿತ, ಜಿಪಂ, ಕಾರ್ಮಿಕ ಇಲಾಖೆ,ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣಕಾರ್ಮಿಕರ ಕಲ್ಯಾಣ ಮಂಡಳಿ ಸಂಯುಕ್ತಆಶ್ರಯದಲ್ಲಿ ಮೆ|| ಬ್ಲೋಸಂ ಆಸ್ಪತ್ರೆಯಸಹಯೋಗದಲ್ಲಿ ಆಯೋಜಿಸಲಾಗಿದ್ದ ಶಿಬಿರವನ್ನುಮಹಾನಗರ ಪಾಲಿಕೆ ಸದಸ್ಯ ಶ್ರೀನಿವಾಸ್ ಮೋತ್ಕರ್‌ಉದ್ಘಾಟಿಸಿದರು. ಬಳಿಕ ಶಿಬಿರವನ್ನು ಉದ್ಘಾಟಿಸಿಮಾತನಾಡಿದರು.
ಶಿಬಿರದಲ್ಲಿ ನೋಂದಾಯಿತಕಟ್ಟಡ ಕಾರ್ಮಿಕರಿಗೆ ದೈಹಿಕಪರೀಕ್ಷೆ, ಲಿವರ್ ಕಾರ್ಯಪರೀಕ್ಷೆ, ಆಡಿಯೋಮೇಟ್ರಿಸ್ಕ್ರೀನ್ ಟೆಸ್ಟ್, ದೃಷ್ಟಿ ತಪಾಸಣೆಪರಿಕ್ಷೆ, ಸಿಬಿಸಿ ಪರೀಕ್ಷೆ, ಇಎಸ್‌ಆರ್ ಪರೀಕ್ಷೆ, ರಕ್ತದಲ್ಲಿ ಸಕ್ಕರೆಪ್ರಮಾಣ ಪರೀಕ್ಷೆ, ಕಿಡ್ನಿ ಕಾರ್ಯ ಪರೀಕ್ಷೆ, ಲಿಪಿಡ್‌ಪ್ರೊಪೈಲ್‌ಲ್ ಪರೀಕ್ಷೆ, ಮಲೇರಿಯಾ ಪ್ಯಾರಸೈಟ್‌ಪರೀಕ್ಷೆ, ಮೂತ್ರ ಪರೀಕ್ಷೆ, ಟಿ3,ಟಿ4 ಮತ್ತು ಟಿಎಸ್‌ಎಚ್,ಸೆರಮ್ ಐರನ್, ಸೆರಮ್‌ಮ್ಯಾಗ್ನೇಶಿಯಂ, ಜಿಜಿಟಿಪಿಪರೀಕ್ಷೆ, ರಕ್ತದ ಗುಂಪುಪರೀಕ್ಷೆ,ಸಿಆರ್‌ಪಿ ಕ್ವಾಂಟಿಟಿವ್ ಪರೀಕ್ಷೆ,ಸೆರಮ್ ಫೆರಿಟಿನ್ ಪರೀಕ್ಷೆ, ಎಚ್‌ಐವಿ, ಹೈಪಟೈಟಿಸ್ ಬಿ ಮತ್ತು ಸಿ, ವಿಡಿಆರ್‌ಎಲ್,ಕೋವಿಡ್ ಆರ್‌ಟಿಪಿಸಿಆರ್ ಪರೀಕ್ಷೆಗಳು ಸೇರಿದಂತೆಇನ್ನಿತರ ಪರೀಕ್ಷೆಗಳನ್ನು ನಡೆಸಲಾಯಿತು.
ಶಿಬಿರದಲ್ಲಿ ಪಾಲ್ಗೊಂಡಿದ್ದ ನೋಂದಾಯಿತಕಟ್ಟಡ ಕಾರ್ಮಿಕರೆಲ್ಲರಿಗೂ ಉಚಿತ ಆರೋಗ್ಯತಪಾಸಣೆಯನ್ನು ನುರಿತ ತಜ್ಞ ವೈದ್ಯರ ತಂಡಮಾಡಿತು. 60ಕ್ಕೂ ಹೆಚ್ಚು ನೋಂದಾಯಿತ ಕಟ್ಟಡಕಾರ್ಮಿಕರು ತಪಾಸಣೆ ಮಾಡಿಸಿಕೊಂಡರು.ಕಾರ್ಮಿಕ ಇಲಾಖೆಯ ಕಾರ್ಮಿಕಅ ಧಿಕಾರಿಗಳಾದ ಕಮಲ್ ಷಾ ಅಲ್ತಾಫ್ ಅಹ್ಮದ್‌ಅವರು ಮಾತನಾಡಿ, ನೋಂದಾಯಿತ ಕಟ್ಟಡಕಾರ್ಮಿಕರಿಗೆ ವಿವಿಧ ರೀತಿಯ ಆರೋಗ್ಯತಪಾಸಣೆಗಳನ್ನು ಮೇ ಬ್ಲೋಸಂ ಆಸ್ಪತ್ರೆಯಸಹಯೋಗದಲ್ಲಿ ಇಲಾಖೆಯು ಕೈಗೊಂಡಿದ್ದು,ನೋಂದಾಯಿತ ಕಟ್ಟಡ ಕಾರ್ಮಿಕರುಇದರ ಸದುಪಯೋಗ ಪಡೆದುಕೊಳ್ಳಬೇಕುಎಂದರು.
ಶಿಬಿರದಲ್ಲಿ ಮೆ| ಬ್ಲೋಸಂ ಆಸ್ಪತ್ರೆಯಮುಖ್ಯಸ್ಥ ರಾಜೇಶ್, ಕಾರ್ಮಿಕ ಇಲಾಖೆಯಕಾರ್ಮಿಕ ಅ ಕಾರಿಗಳಾದ ಕಮಲ್ ಷಾಅಲ್ತಾಫ್ ಅಹ್ಮದ್, ಮಾರಿಕಾಂಬ ಹುಲಿಕೋಟಿ,ಕಾರ್ಮಿಕ ಇಲಾಖೆಯ ಸಿಬ್ಬಂದಿ ವರ್ಗದವರು,ಬಾಲಕಾರ್ಮಿಕ ಯೋಜನಾ ನಿರ್ದೇಶಕ ಮೌನೇಶಮತ್ತಿತರರು ಇದ್ದರು.