Advertisement

ಅಂತಿಮ ವರ್ಷದ ಪರೀಕ್ಷೆ ಮುಂದೂಡಲು ಪಟ್ಟು

01:21 PM Jan 30, 2022 | Team Udayavani |

ಬಳ್ಳಾರಿ: ವೈದ್ಯಕೀಯ ವಿದ್ಯಾರ್ಥಿಗಳ ಅಂತಿಮವರ್ಷದ ಪರೀಕ್ಷೆಗಳನ್ನು ಮುಂದೂಡುವಂತೆಆಗ್ರಹಿಸಿ ನೂರಾರು ವೈದ್ಯಕೀಯವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಒಂದು ವರ್ಷಪಠ್ಯಕ್ರಮಗಳು ನಡೆಯಬೇಕಿತ್ತು.

Advertisement

ಆದರೆ ಕೋವಿಡ್‌ ಹಿನ್ನೆಲೆ ಅವರಿಗೆ ಕೇವಲ ಏಳುತಿಂಗಳಷ್ಟೇ ತರಗತಿಗಳು ನಡೆದಿವೆ. ಒಂದೆಡೆಸಂಪೂರ್ಣವಾಗಿ ತರಗತಿಗಳು ನಡೆಯದಕಾರಣ ಪಠ್ಯಕ್ರಮ ಪೂರ್ಣಗೊಂಡಿಲ್ಲ.ಅವಶ್ಯಕ ಕ್ಲಿನಿಕಲ್‌ ಪೋಸ್ಟಿಂಗ್‌ ನಡೆದಿಲ್ಲ.ಅಲ್ಲದೇ ಈ ವಿದ್ಯಾರ್ಥಿಗಳು ಕೋವಿಡ್‌ 2ನೇ ಅಲೆ ಸಂದರ್ಭದಲ್ಲಿ ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡಿ ಸೇವೆ ಸಲ್ಲಿಸಿದ್ದಾರೆ.

ಪ್ರಸ್ತುತ ಒಮಿಕ್ರಾನ್‌ ಸೋಂಕಿತರ ಸಂಖ್ಯೆತೀವ್ರಗತಿಯಲ್ಲಿ ಏರುತ್ತಿದೆ. ಆದರೆಇದ್ಯಾವುದನ್ನು ಪರಿಗಣಿಸದ ಆರ್‌ಜಿಯುಎಚ್‌ಎಸ್‌ ಇದೇ ಫೆಬ್ರವರಿ 22ರಿಂದ ಪರೀûಾವೇಳಾಪಟ್ಟಿಯನ್ನು ಪ್ರಕಟಿಸಿರುವುದು ಅತ್ಯಂತ ಅಮಾನವೀಯ.

ಇದು ಅಂತಿಮ ವರ್ಷದವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಆತಂಕಮೂಡಿಸಿದ್ದು, ತೀವ್ರವಾದ ಒತ್ತಡಕ್ಕೊಳಗಾಗಿಭವಿಷ್ಯದ ಬಗ್ಗೆ ಆತಂಕಕ್ಕೀಡಾಗಿದ್ದಾರೆಎಂದು ಪ್ರತಿಭಟನಾಕಾರರು ಅಸಮಾಧಾನವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆಯಿಂದರಾಜ್ಯದಾದ್ಯಂತ ಮೆಡಿಕಲ್‌ ವಿದ್ಯಾರ್ಥಿಗಳನಡುವೆ ಗೂಗಲ್‌ ಫಾರ್ಮ್ ಮೂಲಕಸರ್ವೇ ಮಾಡಲಾಗಿದೆ.

ಸರ್ವೇಯಲ್ಲಿ4500 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಈಪ್ರಕಾರ ಶೇಕಡಾ 95ರಷ್ಟು ವಿದ್ಯಾರ್ಥಿಗಳುಪರೀಕ್ಷೆಗಳನ್ನು ಮುಂದೂಡಬೇಕೆಂದುಆಗ್ರಹಿಸಿದ್ದಾರೆ. ಈ ಹಿನ್ನೆಲೆ ಆರೋಗ್ಯವ್ಯವಸ್ಥೆಗೆ ಬೆನ್ನೆಲುಬಾಗಿರುವ ವೈದ್ಯಕೀಯವಿದ್ಯಾರ್ಥಿಗಳ ಭವಿಷ್ಯದ ಕಾಳಜಿಯೊಂದಿಗೆಆರ್‌ಜಿಯುಎಚ್‌ಎಸ್‌ ಅಂತಿಮ ವರ್ಷದಪರೀಕ್ಷೆಗೆ ಅಚ್ಚುಕಟ್ಟಾಗಿ ತಯಾರಾಗಲುಅಗತ್ಯವಿರುವಷ್ಟು ಕಾಲಾವಕಾಶ ಒದಗಿಸಿ,ನಂತರದಲ್ಲಿ ಪರೀಕ್ಷೆಯ ವೇಳಾಪಟ್ಟಿಯನ್ನುನಿಗದಿಪಡಿಸಬೇಕು ಎಂದು ಎಐಡಿಎಸ್‌ಓಈ ಮೂಲಕ ಆಗ್ರಹಿಸುತ್ತದೆ. ಎಐಡಿಎಸ್‌ಒಕಾರ್ಯದರ್ಶಿ ಜೆ.ಪಿ. ರವಿಕಿರಣ್‌ಸೇರಿ ವೈದ್ಯಕೀಯ ವಿದ್ಯಾರ್ಥಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next