Advertisement

ದೇಗುಲಗಳಲ್ಲಿ ವೈಕುಂಠ ಏಕಾದಶಿ ಸಂಭ್ರಮ

01:39 PM Jan 14, 2022 | Team Udayavani |

ಬಳ್ಳಾರಿ: ವೈಕುಂಠ ಏಕಾದಶಿ ಹಿನ್ನೆಲೆ ನಗರ ಸೇರಿದಂತೆಜಿಲ್ಲೆಯ ಪ್ರಸಿದ್ಧ ವೆಂಕಟೇಶ್ವರ ದೇಗುಲ ಸೇರಿದಂತೆನಾನಾ ದೇಗುಲಗಳಲ್ಲಿ ಗುರುವಾರ ವಿಶೇಷ ಪೂಜೆ,ಅರ್ಚನೆ ಸೇರಿ ನಾನಾ ಪೂಜೆಗಳು ವಿಜೃಂಭಣೆಯಿಂದನಡೆದವು.ನಗರದ ಸತ್ಯನಾರಾಯಣ ಪೇಟೆ ವೆಂಕಟೇಶ್ವರದೇಗುಲ, ಪಟೇಲ್‌ನಗರ ಬಡಾವಣೆಯ ಲಕ್ಷಿ ¾àವೆಂಕಟೇಶ್ವರ ದೇಗುಲ, ಲಕ್ಷಿ ¾à ನರಸಿಂಹ ದೇಗುಲ,ಯಂತ್ರೋದ್ಧಾರಕ ಪ್ರಾಣದೇವರ ದೇಗುಲ, ಶನೈಶ್ಚರದೇವಾಲಯ, ರಾಘವೇಂದ್ರ ಸ್ವಾಮಿ ಶ್ರೀಮಠ,ಶ್ರೀಮದುತ್ತರಾ ಮಠದಲ್ಲಿ ವೈಕುಂಠ ಏಕಾದಶಿ ನಿಮಿತ್ತಗುರುವಾರ ವಿವಿಧ ಪೂಜೆಗಳು ವಿಜೃಂಭಣೆಯಿಂದನಡೆದವು.

Advertisement

ನಗರದ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿಬೆಳಗ್ಗೆ ವಿಶೇಷ ಪೂಜೆ, ಅಲಂಕಾರ, ಮಹಾ ನೈವೇದ್ಯ,ಮಹಾ ಮಂಗಳಾರತಿ ಸೇರಿದಂತೆ ನಾನಾ ಪೂಜೆಗಳುನೆರವೇರಿದವು. ದೇಗುಲದ ಪ್ರಧಾನ ಅರ್ಚಕವಾದಿರಾಜ್‌ ಆಚಾರ್ಯ ಅವರು ಪೂಜೆಗಳನ್ನುನೆರವೇರಿಸಿದರು.

ಈ ಸಂದರ್ಭದಲ್ಲಿ ದೇಗುಲದ ಟ್ರಸ್ಟಿಗಳಾದಎಂ.ವೆಂಕಟ ರಾಘವೇಂದ್ರ ಅವರು ಮಾತನಾಡಿ,ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಶ್ರೀ ವೆಂಕಟೇಶ್ವರದರ್ಶನಕ್ಕೆ ಪ್ರಸಕ್ತ ವರ್ಷ ಕೊರೊನಾ ಅಡ್ಡಿಯಾಗಿದೆ.ಪವಿತ್ರ ದಿನವಾದ ಇಂದು ಭಕ್ತರು ವೆಂಕಟೇಶ್ವರನದರ್ಶನ ಪಡೆಯಬೇಕು ಎನ್ನುವ ಅಪೇಕ್ಷೆ ಎಲ್ಲರಿಗೂಇರಲಿದೆ. ಆದರೆ ಪ್ರಸಕ್ತ ವರ್ಷ ಕೋವಿಡ್‌-19 ಹಿನ್ನೆಲೆಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದು ಭಕ್ತರಿಗೆ ಹಾಗೂನಮಗೂ ನಾನಾ ರೀತಿ ತೊಂದರೆಯಾಗಿದೆ. ಎರಡೂಡೋಸ್‌ ಲಸಿಕೆ ಕಡ್ಡಾಯ, ಅದೂ ಸರ್ಟಿμಕೇಟ್‌ಹಾಜರುಪಡಿಸಬೇಕು.

ಐವತ್ತು ಜನರಿಗೆ ಮಾತ್ರ ಪ್ರವೇಶಎನ್ನುವುದು ಸೇರಿ ನಾನಾ ಷರತ್ತುಗಳನ್ನು ವಿ ಧಿಸಲಾಗಿದೆ.ಈ ಹಿನ್ನೆಲೆ ದೇವರಿಗೆ ವಿಶೇಷ ಪೂಜೆ, ಅಲಂಕಾರಸೇರಿದಂತೆ ನಾನಾ ಪೂಜೆಗಳನ್ನು ನೆರವೇರಿಸಲಾಗಿದ್ದು,ಭಕ್ತರಿಗೆ ಹೊರಗಿನಿಂದಲೇ ದರ್ಶನಕ್ಕೆ ವ್ಯವಸ್ಥೆಮಾಡಲಾಗಿದೆ ಎಂದರು.ಭಕ್ತರಿಗೆ ಪ್ರಸಾದ: ನಗರದ ಪಟೇಲ್‌ ನಗರ ಬಡಾವಣೆಶ್ರೀ ಲಕ್ಷಿ ¾à ವೆಂಕಟೇಶ್ವರ ದೇಗುಲದಲ್ಲಿ ವೈಕುಂಠ ಏಕಾದಶಿನಿಮಿತ್ತ ಗುರುವಾರ ವಿವಿಧ ಪೂಜೆಗಳು ನೆರವೇರಿದವು.ದೇಗುಲದ ಅಧ್ಯಕ್ಷ ಸೋಮಪ್ಪ ಯಾದವ್‌ ಅವರುಭಕ್ತರಿಗೆ ಪ್ರಸಾದ ವಿತರಿಸಿದರು. ಈ ಸಂದರ್ಭದಲ್ಲಿದೇಗುಲದ ಪ್ರಧಾನ ಅರ್ಚಕ ಶ್ರೀನಿವಾಸ್‌ ಆಚಾರ್‌,ಪಾಲಿಕೆ ಸದಸ್ಯರಾದ ಮುಲ್ಲಂಗಿ ನಂದೀಶ್‌, ವಿವೇಕ್‌ವಿಕ್ಕಿ, ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next