Advertisement

ಯುವಸಮೂಹದ ಸಾಧನೆಗೆ ಸ್ವಾಮಿ ವಿವೇಕಾನಂದರೇ ಆದರ್ಶ

07:31 PM Jan 13, 2022 | Team Udayavani |

ಬಳ್ಳಾರಿ: ಗೂಗಲ್‌ ಸಿಇಒ ಸುಂದರ್‌ ಪಿಚೈ,ಮೈಕ್ರೋಸಾಫ್ಟ್‌ನ ಸತ್ಯ ನಾದೆಲ್ಲ ಮೊದಲಾದಭಾರತೀಯ ಯುವವರ್ಗ ಇಂದು ವಿಶ್ವದ ಅಗ್ರಕಂಪನಿಗಳ ಸಾರಥ್ಯ ವಹಿಸಿರುವುದಕ್ಕೆ ವಿವೇಕಾನಂದರತತ್ವಾದರ್ಶಗಳೇ ಕಾರಣ ಎಂದು ಭೌತಶಾಸ್ತ್ರ ವಿಭಾಗದಪ್ರಾಧ್ಯಾಪಕರು ಮತ್ತು ಐಕ್ಯೂಎಸಿ ನಿರ್ದೇಶಕ ಪ್ರೊ| ಜೆ.ತಿಪ್ಪೇರುದ್ರಪ್ಪ ಅಭಿಪ್ರಾಯ ಪಟ್ಟರು.

Advertisement

ಇಲ್ಲಿನ ವಿಜಯನಗರ ಶ್ರೀ ಕೃಷ್ಣದೇವರಾಯವಿವಿಯಲ್ಲಿ ವಿದ್ಯಾರ್ಥಿ ಕಲ್ಯಾಣ ಘಟಕದ ವತಿಯಿಂದಬುಧವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ159ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.ಯುವಕರಿಂದ ಮಾತ್ರ ದೇಶದ ವಿಕಸನ ಸಾಧ್ಯಎಂದು ವಿವೇಕಾನಂದರು ಹೇಳಿದ್ದರು.

ವೇದ ಮತ್ತುಯೋಗವನ್ನು ಪ್ರಪಂಚದೆಲ್ಲೆಡೆ ಹರಡಿದ ಕೀರ್ತಿವಿವೇಕಾನಂದರಿಗೆ ಸಲ್ಲುತ್ತದೆ. ಸ್ವಾತಂತ್ರÂ ಸಂಗ್ರಾಮದಲ್ಲಿಏಳು, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರುಎಂದು ದೇಶದ ಯುವಕರಿಗೆ ಸ್ವಾಮಿ ವಿವೇಕಾನಂದರುಕರೆ ನೀಡಿದ್ದರು ಎಂದು ಅವರು ಸ್ಮರಿಸಿದರು.ಯುವಜನತೆಯು ವಿವೇಕಾನಂದರ ಗುಣಗಳಾದಕರುಣೆ, ನಿರ್ಭಿಡತೆ, ಬುದ್ಧಿಮತ್ತೆ, ಜವಾಬ್ದಾರಿತನ,ಜ್ಞಾನಾರ್ಜನೆ, ಪ್ರಶ್ನಿಸುವ ಕಲೆ, ಏಕಾಗ್ರತೆಯನ್ನುಮೈಗೂಡಿಸಿಕೊಂಡರೆ ಎಂಥ ಸಾಧನೆಯನ್ನಾದರುಮಾಡಬಹುದು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವಿವಿ ಕುಲಪತಿ ಪ್ರೊ| ಸಿದ್ದುಪಿ ಆಲಗೂರ ಮಾತನಾಡಿ, ಭಾರತೀಯ ಸಂಸ್ಕೃತಿ,ಹಿಂದುತ್ವದ ಮಹತ್ವವನ್ನು ಎಲ್ಲೆಡೆ ಪಸರಿಸಿದ ಕೀರ್ತಿಸ್ವಾಮಿ ವಿವೇಕಾನಂದರಿಗೆ ಸಲ್ಲಬೇಕು. ಸ್ವ ಹಿತಾಸಕ್ತಿಗಿಂತಸಮಾಜ, ದೇಶಕ್ಕೆ ಕೊಡುಗೆ ನೀಡಿದಾಗ ಮಹಾನ್‌ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯ. ಪ್ರತಿಯೊಬ್ಬರುವಿವೇಕಾನಂದರ ಆದರ್ಶ, ಚಿಂತನೆ ಅಳವಡಿಸಿಕೊಂಡುತಮ್ಮ ಉಜ್ವಲ ಭವಿಷ್ಯ ಹಾಗೂ ಭವ್ಯ ರಾಷ್ಟ್ರ ನಿರ್ಮಾಣಕ್ಕೆಮಾದರಿಯಾಗಬೇಕು ಎಂದು ಕರೆ ನೀಡಿದರು.ಕುಲಸಚಿವ ಪ್ರೊ| ಎಸ್‌.ಸಿ. ಪಾಟೀಲ್‌, ಕುಲಸಚಿವ(ಮೌಲ್ಯಮಾಪನ) ಪ್ರೊ|ಶಶಿಕಾಂತ್‌ ಉಡಿಕೇರಿ, ವಿತ್ತಾಧಿಕಾರಿ ಡಾ| ಕೆ.ಸಿ. ಪ್ರಶಾಂತ್‌ ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next