Advertisement

ಅರೆ ಮಾಜಿ ಸೈನಿಕರಿಗೂ ಸೌಲಭ್ಯ ಲಭಿಸಲಿ

05:27 PM Jan 02, 2022 | Team Udayavani |

ಬಳ್ಳಾರಿ: ಮಾಜಿ ಸೈನಿಕರು, ಪ್ಯಾರಾ ಮಿಲಿಟರಿ ಮಾಜಿಸೈನಿಕರ ನಡುವಿನ ತಾರತಮ್ಯವನ್ನು ಹೋಗಲಾಡಿಸುವಸಲುವಾಗಿ ಕಲ್ಯಾಣ ಕರ್ನಾಟಕ ಭಾಗದ ಪ್ಯಾರಾಮಿಲಿಟರಿ ಮಾಜಿ ಸೈನಿಕರ ಸಂಘವನ್ನು ಅಸ್ತಿತ್ವಕ್ಕೆತರಲಾಗಿದೆ ಎಂದು ನೂತನ ಕಲ್ಯಾಣ ಕರ್ನಾಟಕಪ್ಯಾರಾ ಮಿಲಿಟರಿ ಮಾಜಿ ಸೆ„ನಿಕರ ಸಂಘದ ಅಧ್ಯಕ್ಷವೆಂಕಟೇಶ್ವರ ರಾವ್‌ ಹೇಳಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಶನಿವಾರಸುದ್ದಿಗೋಷ್ಠಿಯಲ್ಲಿಮಾತನಾಡಿದಅವರು,ಕೇಂದ್ರದಲ್ಲಿಭೂಸೇನೆ, ವಾಯು ಸೇನೆ ಮತ್ತು ಜಲಸೇನೆಗಳಲ್ಲಿಕರ್ತವ್ಯ ನಿರ್ವಹಿಸಿ ನಿವೃತ್ತಿಯಾದ ಮಾಜಿ ಸೈನಿಕರಿಗೆಕೇಂದ್ರದಿಂದ ಹಲವು ಸೌಲಭ್ಯಗಳು ಲಭಿಸುತ್ತವೆ.ಇಷ್ಟು ವರ್ಷ ಪ್ರತ್ಯೇಕವಾಗಿ ಬೇರೆ ಬೇರೆಯಿದ್ದಮಾಜಿ ಸೈನಿಕರು, ಅರೆ ಸೈನಿಕರನ್ನು ಇಬ್ಬರನ್ನೂಈಚೆಗೆ ಕೇಂದ್ರ ಸರ್ಕಾರ ಒಂದೇ ಎಂದು ಪರಿಗಣಿಸಿ,ಒಂದೇ ವೇದಿಕೆಯಲ್ಲಿ ತರಲಾಗಿದೆ.

ಹಾಗಾಗಿಜಿಲ್ಲಾಮಟ್ಟದಲ್ಲೂ ಮಾಜಿ ಸೈನಿಕರು, ಅರೆ ಸೈನಿಕರನ್ನುಒಂದೇ ವೇದಿಕೆಯಡಿ ತರುವ ಉದ್ದೇಶದಿಂದಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳಲ್ಲಿನಪ್ಯಾರಾ ಮಿಲಿಟರಿ ಮಾಜಿ ಸೈನಿಕರನ್ನು ಒಗ್ಗೂಡಿಸಿ ಈಸಂಘವನ್ನು ರಚಿಸಿ ಅಸ್ತಿತ್ವಕ್ಕೆ ತಲಾಗಿದೆ. ಮಾಜಿ ಸೈನಿಕರಯಾವುದೇ ಸಮಸ್ಯೆಗಳಿದ್ದರೂ ಒಗ್ಗೂಡಿ ಹೋರಾಟಮಾಡಲಾಗುವುದು ಎಂದವರು ತಿಳಿಸಿದರು.ಅರೆ ಸೈನಿಕರ ಸಾಮಾಜಿಕ, ನಾಗರಿಕ ಶೈಕÒ‌ಣಿಕಮತ್ತು ಆರ್ಥಿಕದ ಹಿತರಕÒ‌ಣೆ ಮತ್ತು ಸರ್ವಾಂಗೀಣಪ್ರಗತಿಗೆ ಪ್ರಯತ್ನಿಸಲಾಗುವುದು. ಇಂತಹ ಗಂಭೀರಸಮಸ್ಯೆಗಳು ಪರಿಹಾರವಾಗುವ ನಿಟ್ಟಿನಲ್ಲಿ ಸಂಘವನ್ನುಸ್ಥಾಪನೆ ಮಾಡಿದ್ದೇವೆ ಎಂದು ತಿಳಿಸಿದರು.

ಕಲ್ಯಾಣಕರ್ನಾಟಕ ಭಾಗದ ಬಳ್ಳಾರಿ, ವಿಜಯನಗರ,ರಾಯಚೂರು, ಕೊಪ್ಪಳ, ಯಾದಗಿರಿ, ಕಲುಬುರಿಗಿ,ಬೀದರ್‌ ಜಿಲ್ಲೆಯಲ್ಲಿನ ಸಿಆರ್‌ಎಫ್‌, ಬಿಎಸ್‌ಎಫ್‌,ಸಿಐಎಸ್‌ಎಫ್‌, ಐಟಿಬಿಪಿ, ಎಸ್‌ಎಸ್‌ಬಿ, ಎಎಸ್‌ಎಸ್‌ಎಂ, ಆರ್‌ಐಎಫ್‌ಎಲ್‌ಇನ ಮಾಜಿ ಅರೇ ಯೋಧರುಸದಸ್ಯತ್ವ ಪಡೆದುಕೊಳ್ಳಬೇಕು. ಸದಸ್ಯತ್ವ ಪಡೆಯಲು8722994467, 7044791395, 9483220888,9462173526ಗೆ ಕರೆ ಮಾಡಬಹುದು ಎಂದುಅವರು ಕೋರಿದರು.ಕೈಗಾರಿಕೆಗಳಿಗೆ ಭದ್ರತಾ ಸಿಬ್ಬಂದಿಗಳಾಗಿ ಅರೆ ಮಾಜಿಸೈನಿಕರನ್ನು ನೇಮಿಸಿಕೊಳ್ಳಬೇಕು.

ವಿದ್ಯಾರ್ಥಿಗಳಲ್ಲಿದೇಶ ಪ್ರೇಮ, ರಾಷ್ಟ್ರಗೀತೆ, ರಾಷ್ಟ್ರಲಾಂಛನ ಇನ್ನಿತರೆವಿಷಯಗಳ ಕುರಿತು ಉಚಿತವಾಗಿ ಅರಿವು, ಜಾಗೃತಿಮೂಡಿಸಲು ಅರೆ ಮಾಜಿ ಸೈನಿಕರು ಸಿದ್ಧವಾಗಿದ್ದು,ಪ್ರತಿ ಶಾಲಾ-ಕಾಲೇಜುಗಳಲ್ಲಿ ವಾರಕ್ಕೊಂದುಅಥವಾ ತಿಂಗಳಿಗೊಮ್ಮೆ ಒಂದು ತರಗತಿ ನೀಡಿಅವಕಾಶ ಕಲ್ಪಿಸಬೇಕು ಎಂದ ಅವರು, ಪ್ರಸ್ತುತಆಧುನಿಕ ದಿನಗಳಲ್ಲಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕಪರೀಕ್ಷೆ ಬರೆಯಲು ಶಕ್ತರಿದ್ದಾರೆ. ಆದರೆ ಸೈನ್ಯಕ್ಕೆಸೇರಲು ಮುಖ್ಯವಾಗಿ ಬೇಕಾದ ದೈಹಿಕ ಸಾಮರ್ಥ್ಯಹೊಂದುವಲ್ಲಿ ವಿಫಲರಾಗಿದ್ದಾರೆ. ಹಾಗಾಗಿಉಚಿತವಾಗಿ ತರಬೇತಿ ನೀಡಿ, ಸೈನ್ಯಕ್ಕೆ ಸೇರಲು ಆಸಕ್ತಯುವಕರ ಪಡೆಯನ್ನು ಸಿದ್ಧಪಡಿಸಲಾಗುವುದುಎಂದು ವಿವರಿಸಿದರು.ಇದೇ ವೇಳೆ ಈಚೆಗೆ ಕರ್ನಾಟಕ ಪ್ರಸ್‌ ಕೌನ್ಸೆಲಿಂಗ್‌ನಿಂದ ಪ್ರಶಸ್ತಿ ಪಡೆದ ಹಿರಿಯ ಜಿಲ್ಲಾ ವರದಿಗಾರಸಿದ್ದರಾಮಪ್ಪ ಸಿರಿಗೇರಿ ಅವರನ್ನು ಸಂಘದಿಂದಸನ್ಮಾನಿಸಲಾಯಿತು. ಸುದ್ದಿಗೋಷ್ಠಿಯಲ್ಲಿ ಸಂಘದಗೌರವಾಧ್ಯಕ್ಷ ವಿರೂಪಾಕ್ಷಯ್ಯ, ಬಸವರಾಜಸ್ವಾಮಿ,ಈಶಾರೆಡ್ಡಿ, ಮುತ್ತಯ್ಯಸ್ವಾಮಿ, ಪ್ರಹ್ಲಾದರೆಡ್ಡಿ ಸೇರಿಹಲವರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next