ಬಳ್ಳಾರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತಶಾಂತಿಧೂತ ಏಸುಕ್ರಿಸ್ತನ ಜನ್ಮದಿನಾಚರಣೆಶ್ರದ್ಧೆ ಭಕ್ತಿ, ಸಡಗರ ಸಂಭ್ರಮಗಳಿಂದ ಶನಿವಾರಆಚರಿಸಲಾಯಿತು.ಕ್ರಿಸ್‌ಹಬ್ಬದ ನಿಮಿತ್ತ ನಗರದ ಪ್ರಸಿದ್ಧ ಮೇರಿಮಾತಾಚರ್ಚ್, ಸಿಎಸ್‌ಐ ಚರ್ಚ್ ಸೇರಿ ಹಲವು ಚಚ್ìಗಳನ್ನು ಸುಣ್ಣಬಣ್ಣಗಳನ್ನು ಬಳಿಯಲಾಗಿತ್ತು.
ಚಿಕ್ಕಚಿಕ್ಕ ವಿದ್ಯುದ್ದೀಪ, ವಿವಿಧ ಬಣ್ಣದ ಅಲಂಕಾರಿಕಹೂವುಗಳಿಂದ ಅಲಂಕರಿಸುವ ಮೂಲಕ ಚಚ್ìಗಳಲ್ಲಿ ಹಬ್ಬದ ವಾತಾವರಣ ಕಂಗೊಳಿಸುವಂತೆಸಡಗರ, ಸಂಭ್ರಮ ಕಂಡುಬಂತು.ಡಿ. 24ರಂದು ಮಧ್ಯರಾತ್ರಿ ಬಾಲಏಸುಕ್ರಿಸ್ತನು ಜನ್ಮತಾಳಿದನು. ಅಂದಿನಿಂದಕ್ರಿಸ್‌ಮಸ್ ಹಬ್ಬವನ್ನು ಆಚರಿಸಲಾಗುತ್ತದೆ.ಏಸುಕ್ರಿಸ್ತ ಎಂದರೆ ಎಲ್ಲರ ಸುಖವನ್ನುಬಯಸುವವನು, ಶಾಂತಿ ಸಮಾಧಾನವನ್ನು,ಪ್ರತಿಭೆಗಳನ್ನು ಹಂಚುವವನು, ಮನುಷ್ಯರಪಾಪಗಳನ್ನು ಸಹ ಕ್ಷಮಿಸಿ, ಕತ್ತಲಿಂದ ಬೆಳಕಿನೆಡೆಗೆಕೊಂಡೊಯ್ಯುವವನು ಏಸುಕ್ರಿಸ್ತನಾಗಿದ್ದಾನೆ.
ಅವನು ಜಯಂತಿಯನ್ನು ಕ್ರಿಸ್‌ಮಸ್ ಹಬ್ಬವನ್ನಾಗಿಪ್ರತಿವರ್ಷ ಡಿ. 25ರಂದು ಶ್ರದ್ಧೆ ಭಕ್ತಿ, ಸಡಗರ,ಸಂಭ್ರಮದಿಂದ ಆಚರಿಸಲಾಗುತ್ತದೆ ಎಂದು ಬಳ್ಳಾರಿಪ್ರಾಂತದ ಧರ್ಮಾಧ್ಯಕ್ಷರ ಪಿಆರ್‌ಒ ಐವನ್‌ಪಿಂಟೋತಿಳಿಸಿದರು.ಕ್ರಿಸ್‌ಮಸ್ ಹಬ್ಬವನ್ನು ಪ್ರತಿವರ್ಷ ಡಿ. 24ರಂದುಮಧ್ಯರಾತ್ರಿಯಿಂದಲೇ ಆಚರಿಸಲಾಗುತ್ತದೆ.
ಡಿ.24ರಂದು ಮಧ್ಯರಾತ್ರಿ 12 ಗಂಟೆಗೆ ಕ್ರಿಸ್ತ ಜಯಂತಿಯವಿವಿಧ ಗೀತೆಗಳನ್ನು ಹಾಡಲಾಗುತ್ತದೆ. ಕೊನೆಯಲ್ಲಿಮಹೋನ್ನತ ಗೀತೆಯನ್ನು ಹಾಡಿ ಅಂದು ರಾತ್ರಿಕೊನೆಗೊಳಿಸಿ, ಮರುದಿನ ಡಿ. 25ರಂದು ಬೆಳಗ್ಗೆಆಚರಿಸಲಾಗುತ್ತದೆ. ಎಲ್ಲ ಚರ್ಚ್‌ಗಳಲ್ಲಿ ಬೆಳಗ್ಗೆಯೇಕ್ರಿಸ್ತನಿಗೆ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕಸಾರ್ವಜನಿಕರು ಸಹ ಚರ್ಚ್‌ಗಳಿಗೆ ತೆರಳಿ ಮೇಣದಬತ್ತಿ ಹಚ್ಚಿ ಪ್ರಾರ್ಥನೆ ಸಲ್ಲಿಸುವ ಮೂಲಕ ಭಕ್ತಿಸಮರ್ಪಿಸಿದರು.
ನಂತರ ಮನೆಗಳಿಗೆ ತೆರಳಿ ಹಬ್ಬದನಿಮಿತ್ತ ಸಿದ್ಧಪಡಿಸಲಾಗಿದ್ದ ಸಿಹಿ ತಿನಿಸಿನೊಂದಿಗೆಬೂರಿಭೋಜನ ಸವೆದರೆ, ಇನ್ನು ಕೆಲವರುಅನ್ಯಧರ್ಮಗಳ ಸ್ನೇಹಿತರನ್ನು, ನೆರೆಹೊರೆಯವರನ್ನುಮನೆಗೆ ಆಹ್ವಾನಿಸಿ ಅವರೊಂದಿಗೆ ಹಬ್ಬದಭೋಜನವನ್ನು ಸವೆಯುವ ಮೂಲಕ ಕ್ರಿಸ್‌ಮಸ್‌ನ್ನು ಆಚರಿಸಿದರು.