Advertisement

ಉಪ್ಪಾರ ಪ್ರತಿಭಾ ಪುರಸ್ಕಾರ ನಾಡಿದ್ದು

09:05 PM Dec 24, 2021 | Team Udayavani |

ಬಳ್ಳಾರಿ: ರಾಜ್ಯ ಉಪ್ಪಾರ ಮಹಾಸಭಾದಿಂದಡಿ.26 ರಂದು ಧಾರವಾಡ ಮಯೂರಆದಿತ್ಯ ರೆಸಾರ್ಟ್‌ನಲ್ಲಿ ರಾಜ್ಯದ ಮಟ್ಟದಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನುಹಮ್ಮಿಕೊಳ್ಳಲಾಗಿದ್ದು, ಸಮುದಾಯದಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದು ಮಹಾಸಭಾ ರಾಜ್ಯ ಉಪಾಧ್ಯಕ್ಷ ಸಿದ್ದೇಶ್‌ಕುಮಾರ್‌ ಹೇಳಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಗುರುವಾರಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,2020-2021ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಶೇ.80 ಕ್ಕಿಂತಹೆಚ್ಚು ಅಂಕ ಗಳಿಸಿದ್ದ ಸಮುದಾಯದವಿದ್ಯಾರ್ಥಿ- ವಿದ್ಯಾರ್ಥಿನಿಯರಿಂದರಾಜ್ಯಾದ್ಯಂತ 1437 ಅರ್ಜಿಗಳು ಆನ್‌ಲೈನ್‌ಮೂಲಕ ಸಲ್ಲಿಕೆಯಾಗಿವೆ. ಈ ಪೈಕಿ ಬಳ್ಳಾರಿಜಿಲ್ಲೆಯಿಂದಲೂ 48 ಅರ್ಜಿಗಳು ಬಂದಿದ್ದು,ಎಲ್ಲ ಪ್ರತಿಭಾವಂತ ವಿದ್ಯಾರ್ಥಿಗಳಿಗೂ,ಪುಸ್ತಕ, ಪೆನ್ನು, ಮೆಡಲ್‌ನ್ನು ನೀಡಿ ಸನ್ಮಾನಿಸಿಪೊÅàತ್ಸಾಹಿಸಲಾಗುವುದು.

ಜತೆಗೆ ಮಾಹಿತಿಕೊರತೆಯಿಂದ ಆನ್‌ಲೈನ್‌ನಲ್ಲಿ ಸಲ್ಲಿಕೆಯಾಗದವಿದ್ಯಾರ್ಥಿಗಳಿಂದಲೂ ಅವರ ಅಂಕಪಟ್ಟಿ ಸೇರಿಹಲವು ದಾಖಲೆಗಳನ್ನು ವಾಟ್ಸ್‌ಆ್ಯಪ್‌ನಲ್ಲೇತರಿಸಿಕೊಂಡು ಅಂತಹ ವಿದ್ಯಾರ್ಥಿಗಳಿಗೂಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಗುವುದುಎಂದವರು ವಿವರಿಸಿದರು.ಮಹಾಸಭಾದಿಂದ ಬಡತನರೇಖೆಗಿಂತ ಕೆಳಗಿರುವ ಕುಟುಂಬಗಳಿಂದಮಕ್ಕಳನ್ನು ದತ್ತು ಪಡೆಯಲಾಗುತ್ತದೆ.ಈಗಾಗಲೇ 15 ಮಕ್ಕಳನ್ನು ದತ್ತು ಪಡೆದುಶಿಕ್ಷಣ ಕೊಡಿಸಲಾಗುತ್ತಿದ್ದು, 8 ವಿದ್ಯಾರ್ಥಿಗಳುಪಿಯುಸಿ, ಉಳಿದವರು ಬಿ.ಕಾಂ ವ್ಯಾಸಂಗಮಾಡುತ್ತಿದ್ದಾರೆ.

ಮಹಾಸಭಾದಿಂದಸಮುದಾಯದ ಆಸಕ್ತ ವಿದ್ಯಾರ್ಥಿಗಳಿಗೆಕೆಎಎಸ್‌, ಪಿಎಸ್‌ಐ ಸ್ಪರ್ಧಾತ್ಮಕ ಪರೀಕ್ಷೆಗಳಿಗೆತರಬೇತಿ ಕೊಡಿಸಲಾಗುತ್ತಿದೆ ಎಂದುತಿಳಿಸಿದರು.ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ರಾಜ್ಯದಎಲ್ಲ ಜಿಲ್ಲೆಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು,ಅವರ ಪೋಷಕರು ಸಾವಿರಾರು ಸಂಖ್ಯೆಯಲ್ಲಿಆಗಮಿಸಲಿದ್ದಾರೆ.

ಭಗೀರಥ ಪೀಠದಗುರುಗಳಾದ ಪುರುಷೋತ್ತಮಾನಂದಸ್ವಾಮೀಜಿಗಳು, ಉಪ್ಪಾರ ಸಮಾಜದ ಸರ್ವಪೂಜ್ಯರು, ರಾಜಕೀಯ ಮುಖಂಡರು,ಸಮಾಜದ ಹಿರಿಯರು, ಮಹಿಳಾಮುಖಂಡರು ಮತ್ತು ಯುವ ನಾಯಕರನ್ನುಆಹ್ವಾನಿಸಲಾಗಿದ್ದು, ಎಲ್ಲರೂ ಆಗಮಿಸಿಯಶಸ್ವಿಗೊಳಿಸಬೇಕೆಂದು ಕೋರಿದಅವರು, ಶೀಘ್ರದಲ್ಲೇ ಬಳ್ಳಾರಿ ನಗರದಲ್ಲೂಜಿಲ್ಲಾ ಮಟ್ಟದ ಸಮ್ಮೇಳನ ಆಯೋಜಿಸಿ,ಆಗಲೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆಸನ್ಮಾನಿಸಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಭಗೀರಥಉಪ್ಪಾರ ಸಂಘದ ಪ್ರಧಾನಕಾರ್ಯದರ್ಶಿ ದುರುಗೇಶ್‌, ಯುವಕಸಂಘದ ಅಧ್ಯಕ್ಷ ಯು.ಆದಿತ್ಯ, ನಗರ ಅಧ್ಯಕ್ಷಶ್ರೀರಾಮ, ಯುವ ಮುಖಂಡ ರವಿಕುಮಾರ್‌,ಬಸವರಾಜ, ಚರಕುಂಟೆ ಈರಣ್ಣ, ಕೃಷ್ಣಪ್ಪ,ಮಲ್ಲಪ್ಪ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next