ಬಳ್ಳಾರಿ: ಡಿ ಗ್ರೂಪ್ ನೌಕರರನ್ನು ಕೈಬಿಟ್ಟಿರುವ ವಿಮ್ಸ್,ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿ ನಗರದ ಡಿಸಿಕಚೇರಿ ಆವರಣದಲ್ಲಿ ಜಿಲ್ಲಾ ಯುವಜನತಾದಳದಅಧ್ಯಕ್ಷ ಡಿ. ವಿಜಯಕುಮಾರ್ ನೇತೃತ್ವದಲ್ಲಿ ಡಿ.ಗ್ರೂ ಪ್ ನೌಕರರು ಮಂಗಳವಾರ ಪ್ರತಿಭಟನೆ ನಡೆಸಿದರು.
ಕಳೆದ ಎರಡು ವರ್ಷಗಳಿಂದ ಜನಸಾಮಾನ್ಯರನ್ನುಕಾಡುತ್ತಿರುವ ಮಾರಕ ಕೋವಿಡ್ ಸೋಂಕಿತರಿಗೆಚಿಕಿತ್ಸೆ ನೀಡಲು ತಾತ್ಕಾಲಿಕವಾಗಿ ಟ್ರಾಮಾಕೇರ್‌ಸೆಂಟರ್‌ನ್ನು ಬಳಸಿಕೊಂಡಿರುವ ವಿಮ್ಸ್, ಜಿಲ್ಲಾಡಳಿತ,ಆಸ್ಪತ್ರೆಯಲ್ಲಿ ಸ್ವತ್ಛತೆ ಸೇರಿ ಇನ್ನಿತರೆ ಸಣ್ಣ ಸಣ್ಣಕೆಲಸಗಳನ್ನು ಮಾಡಲು ಹೊರಗುತ್ತಿಗೆ ಆಧಾರದಲ್ಲಿ 90ಜನ ಡಿ.ಗ್ರೂಪ್ ನೌಕರರನ್ನು ತೆಗೆದುಕೊಳ್ಳಲಾಯಿತು.
ಇವರಿಗೆ ಯಾವುದೇ ನೇಮಕಾತಿ ಆದೇಶ ನೀಡದೆ,ಪಿಎಫ್, ಇಎಸ್‌ಐ ಸೌಲಭ್ಯ ಕಲ್ಪಿಸದೆ ಕೆಲಸಕ್ಕೆಕರೆದುಕೊಳ್ಳಲಾಯಿತು. ತಿಂಗಳಿಗೆ 14 ಸಾವಿರರೂ. ವೇತನ ನೀಡುವುದಾಗಿ ಹೇಳಿ ಕೇವಲ10500 ರೂ.ಗಳನ್ನು ಮಾತ್ರ ನೀಡಲಾಯಿತು.
ಯಾವುದೇ ಸೌಲಭ್ಯಗಳಿಲ್ಲದೇ ಕಡಿಮೆ ವೇತನಕ್ಕೆಹಗಲು-ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿದ್ದಡಿ.ಗ್ರೂಪ್ ನೌಕರರನ್ನು 7 ತಿಂಗಳು ಬಳಸಿಕೊಂಡಬಳಿಕ ಇದೀಗ ಕೆಲಸದಿಂದ ಕೈಬಿಡಲಾಗಿದ್ದು,ಇದು ಅತ್ಯಂತ ಖಂಡನೀಯ ಎಂದು ಪ್ರತಿಭಟನೆನೇತೃತ್ವವಹಿಸಿದ್ದ ಯುವಜನತಾದಳದಜಿಲ್ಲಾಧ್ಯಕ್ಷ ಡಿ.ವಿಜಯಕುಮಾರ್ ಅಸಮಾಧಾನವ್ಯಕ್ತಪಡಿಸಿದ್ದಾರೆ.
ಈ ಕುರಿತು ವಿಮ್ಸ್ ನಿರ್ದೇಶಕ ಗಂಗಾಧರಗೌಡರನ್ನು ಕೇಳಿದರೆ, ಕೋವಿಡ್ ಸಂದರ್ಭದಲ್ಲಿಜಿಲ್ಲಾಡಳಿತ ಜಿಲ್ಲಾ ಖನಿಜ ನಿಧಿ ಯಿಂದ ಅನುದಾನನೀಡಲಾಗುತ್ತಿತ್ತು. ಹಾಗಾಗಿ ಆಗ 90 ಜನ ಡಿಗ್ರೂಪ್ ನೌಕರರನ್ನು ಕೆಲಸಕ್ಕೆ ತೆಗೆದುಕೊಂಡುವೇತನ ನೀಡಲಾಯಿತು. ಇದೀಗ ಡಿಎಂಎಫ್‌ಅನುದಾನ ನೀಡುತ್ತಿಲ್ಲ. ಅವರಿಗೆ ವೇತನ ನೀಡಲುತೊಂದರೆಯಾಗುವುದರಿಂದ ಕೆಲಸದಿಂದಕೈಬಿಡಲಾಗಿದೆ ಎಂದು ತಿಳಿಸಿದ್ದಾರೆ. ಕೋವಿಡ್‌ಸಂದರ್ಭದಲ್ಲಿ ಪ್ರಾಣವನ್ನೇ ಪಣಕ್ಕಿಟ್ಟು ಕೋವಿಡ್‌ಸೋಂಕಿತರಿರುವ ಆಸ್ಪತ್ರೆಯಲ್ಲಿ ಕೆಲಸ ಮಾಡಿರುವಕೋವಿಡ್ ವಾರಿಯರ್‌ಗಳ ಬಗ್ಗೆ ಸ್ಥಳೀಯಶಾಸಕರು, ಸಂಸದರು, ಸಚಿವರು ಧ್ವನಿ ಎತ್ತಬೇಕು.ಟ್ರಾಮಾ ಕೇರ್ ಸೆಂಟರ್‌ನಲ್ಲಿ ಕೋಟ್ಯಾಂತರ ರೂ.ವೆಚ್ಚದ ಅತ್ಯಾಧುನಿಕ ವೈದ್ಯಕೀಯ ಯಂತ್ರಗಳು,ಪರಿಕರಗಳನ್ನು ತಂದಿಡಲಾಗಿದೆ. ಆಸ್ಪತ್ರೆಯಲ್ಲಿರೋಗಿಗಳಿಲ್ಲದೆ, ಪರಿಕರಗಳು ಬಳಕೆಯಾಗದಿದ್ದರೆಅವೆಲ್ಲವೂ ಕೆಟ್ಟುಹೋಗಲಿದೆ.
ಮೇಲಾಗಿಕಳೆದ ಎರಡು ತಿಂಗಳುಗಳಿಂದ ಟ್ರಾಮಾಕೇರ್‌ಸೆಂಟರ್ ಆಸ್ಪತ್ರೆಯೂ ಸ್ಥಗಿತಗೊಳಿಸಲಾಗಿದೆ.ಹಾಗಾಗಿ ಸ್ಥಳೀಯ ಜನಪ್ರತಿನಿ ಧಿಗಳು ಕೂಡಲೇಎಚ್ಚೆತ್ತುಕೊಂಡು ಸ್ಥಗಿತಗೊಂಡಿರುವ ಆಸ್ಪತ್ರೆಯನ್ನುಪುನಃ ಆರಂಭಿಸಬೇಕು. ಕೈಬಿಡಲಾಗಿರುವ ಡಿ ಗ್ರೂಪ್‌ನೌಕರರನ್ನು ವಾಪಸ್ ಕೆಲಸಕ್ಕೆ ತೆಗೆದುಕೊಳ್ಳಬೇಕುಎಂದವರು ಒತ್ತಾಯಿಸಿದರು.
ಬಳಿಕ ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ್ ಅವರಿಗೆ ಮನವಿಸಲ್ಲಿಸಲಾಯಿತು.ಪ್ರತಿಭಟನಯಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷಮುನ್ನಾಭಾಯಿ, ಬಾಪೂಜಿ ನಗರದ ರಾಮು, ಕ್ಯಾಂಪ್‌ಶ್ರೀನಿವಾಸ್, ಬಸವರಾಜ, ವೀರೇಶ್, ಮಂಜುನಾಥ,ಪವನ್‌ಕುಮಾರ್ ಇದ್ದರು.