Advertisement

11 ಟನ್‌ ಪ್ಲಾಸ್ಟಿಕ್‌ ಸಂಗ್ರಹಿಸಿ

01:54 PM Sep 28, 2021 | Team Udayavani |

ಬಳ್ಳಾರಿ: ಸ್ವತ್ಛ ಭಾರತ ಆಂದೋಲನದಅಂಗವಾಗಿ ಅ. 1ರಿಂದ 31ರವರೆಗೆಜಿಲ್ಲೆಯಾದ್ಯಂತ ಒಂದು ಬಾರಿ ಬಳಕೆ ಮಾಡಬಹುದಾದ 11 ಟನ್‌ ಪ್ಲಾಸ್ಟಿಕ್‌ಗಳನ್ನು ಸಂಗ್ರಹಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಸಮಿತಿಯೊಂದನ್ನು ರಚಿಸಿ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿ ಪವವಕುಮಾರ ಮಾಲಪಾಟಿ ಅ ಧಿಕಾರಿಗಳಿಗೆಸೂಚನೆ ನೀಡಿದರು.

Advertisement

ನಗರದ ಜಿಲ್ಲಾ ಧಿಕಾರಿಗಳ ಕಚೇರಿಯಲ್ಲಿಸೋಮವಾರ ನಡೆದ ನೆಹರು ಯುವಕೇಂದ್ರದ ಯುವ ಕಾರ್ಯಕ್ರಮಗಳಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಜಿಲ್ಲಾನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಮತ್ತು ಜಿಪಂ ಅಧಿ ಕಾರಿಗಳು,ನೆಹರು ಯುವಕೇಂದ್ರದ ಅ ಧಿಕಾರಿಗಳುಹಾಗೂ ಇನ್ನಿತರೆ ಅ ಧಿಕಾರಿಗಳ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ 11 ಸಾವಿರ ಕೆಜಿಒಂದು ಬಾರಿ ಬಳಕೆ ಮಾಡಬಹುದಾದ ಪ್ಲಾಸ್ಟಿಕ್‌ ಸಂಗ್ರಹಿಸಬೇಕು ಎಂದು ಅವರು ತಿಳಿಸಿದರು.

ಕ್ಯಾಚ್‌ ದೀ ರೇನ್‌ ಹಾಗೂ ಜಲಸಂರಕ್ಷಣೆಗೆಸಂಬಂ ಧಿಸಿದಂತೆ ಸುದೀರ್ಘ‌ವಾಗಿ ಚರ್ಚಿಸಿದಜಿಲ್ಲಾಧಿ ಕಾರಿ ಪವನಕುಮಾರ ಮಾಲಪಾಟಿ ಅವರು ಜಲಸಂರಕ್ಷಣೆ ಮತ್ತು ನೀರಿನಮಿತ ಬಳಕೆಗೆ ಸಂಬಂಧಿಸಿದಂತೆ ಹೆಚ್ಚಿನಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು. ಇದೇಸಂದರ್ಭದಲ್ಲಿ ಡಿಸಿ ಮಾಲಪಾಟಿ ಅವರುನೆಹರು ಯುವ ಕೇಂದ್ರದ 2020-21ರಕ್ರಿಯಾಯೋಜನೆಗೆ ಅನುಮೋದನೆ ನೀಡಿದರು.

ನೆಹರು ಯುವ ಕೇಂದ್ರದಿಂದ ನೀಡಲಾಗುವ ಬೆಸ್ಟ್‌ ಯುಥ್‌ ಕ್ಲಬ್‌ ಅವಾಡ್‌ìಗೆ ಸಂಬಂಧಿ ಸಿದಂತೆಯೂ ಸಭೆಯಲ್ಲಿಚರ್ಚಿಸಲಾಯಿತು.ಈ ಸಂದರ್ಭದಲ್ಲಿ ನೆಹರು ಯುವ ಕೇಂದ್ರದ ಅಧಿ ಕಾರಿ ಮಾಂಟು ಪಾತರ್‌, ಜಿಲ್ಲಾಕೌಶಲ್ಯ ಅಭಿವೃದ್ಧಿ ಅಧಿಕಾರಿ ಪಿ.ಎಸ್‌. ಹಟ್ಟಪ್ಪ,ಕ್ಷೇತ್ರ ಜನಸಂಪರ್ಕ ಕಾರ್ಯಾಲಯದಉಪನಿರ್ದೇಶಕ ಜಿ.ಡಿ. ಹಳ್ಳಿಕೇರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿ ಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next