ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕು ಕುರೇಕುಪ್ಪ ಪುರಸಭೆ ಚುನಾವಣೆಗೆ ನಾಮಪತ್ರಸಲ್ಲಿಸಲು ಬುಧವಾರ ಕೊನೆ ದಿನವಾಗಿದ್ದರಿಂದಪುರಸಭೆಯ 7 ವಾರ್ಡ್‌ಗಳಲ್ಲಿ ಜೆಡಿಎಸ್‌ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.
1 ನೇ ವಾರ್ಡ್‌ನಿಂದ ಸಂಡೂರು ವಿಧಾನಸಭಾಕ್ಷೇತ್ರದ ತಾಲೂಕು ಅಧ್ಯಕ್ಷ ಕುರೇಕುಪ್ಪ ಸೋಮಪ್ಪಮತ್ತು 17 ನೇ ವಾರ್ಡ್‌ಗೆ ಶೀನಪ್ಪ ನಾಮಪತ್ರಸಲ್ಲಿಸಿದರು.ಅಲ್ಲದೆ, 2, 3, 4, 5 ಮತ್ತು 6ನೇ ವಾರ್ಡ್‌ಸೇರಿದಂತೆ ಒಟ್ಟು 7 ವಾರ್ಡ್‌ಗಳಲ್ಲಿ ಜೆಡಿಎಸ್‌ಅಭ್ಯರ್ಥಿಗಳು ಸ್ಪ ರ್ಧಿಸಲು ಜಿಲ್ಲಾಧ್ಯಕ್ಷ ಮೀನಹಳ್ಳಿತಾಯಣ್ಣ, ರಾಜ್ಯ ಉಪಾಧ್ಯಕ್ಷ ಮುನ್ನಾಬಾಯಿಸಮಕ್ಷಮದಲ್ಲಿ ತಮ್ಮ ಉಮೇದುವಾರಿಕೆಯನ್ನು ಚುನಾವಣಾಧಿಕಾರಿಗೆ ಸಲ್ಲಿಸಿದರು.
ಬಳಿಕ ಮಾತನಾಡಿದ ಜಿಲ್ಲಾಧ್ಯಕ್ಷ ಮೀನಹಳ್ಳಿತಾಯಣ್ಣ, ಕುರೇಕುಪ್ಪ ಪುರಸಭೆಗೆ 7 ವಾರ್ಡ್‌ಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಈಪೈಕಿ 6 ಅಭ್ಯರ್ಥಿಗಳ ಗೆಲುವು ಖಚಿತ ಎಂದುವಿಶ್ವಾಸ ವ್ಯಕ್ತಪಡಿಸಿದರು.ರಾಜ್ಯದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಆಗಿದ್ದ ವೇಳೆ 42 ಸಾವಿರ ಕೋಟಿ ರೂ. ರೈತರಸಾಲ ಮನ್ನಾ ಮಾಡಿದ್ದರು. ಅಲ್ಲದೆ, ಅವರಜನಪರ ಕಾರ್ಯಕ್ರಮಗಳು ಜನರ ಮನಸ್ಸಿನಲ್ಲಿಇನ್ನೂ ಜೀವಂತವಾಗಿವೆ.
ಈ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಯಾವುದೇಆಸೆ ಆಮಿಷಗಳಿಗೆ ಮತದಾರರು ಒಳಗಾಗದೇಜೆಡಿಎಸ್ ಬೆಂಬಲಿಸಲಿದ್ದಾರೆ ಎಂದು ತಿಳಿಸಿದರು.ಕುರುಗೋಡು ಪುರಸಭೆಯಲ್ಲಿ ಜೆಡಿಎಸ್‌ನ7 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಅಲ್ಲಿಎರಡರಿಂದ ಮೂರು ವಾರ್ಡ್‌ಗಳಲ್ಲಿ ಗೆಲುವುಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ಜಿಲ್ಲಾ ಮುಖಂಡ ಲಾಲ್ ಸ್ವಾಮಿ,ಚಾಗನೂರು ನಾಗರಾಜ್, ಮಿಲ್ಲರ್‌ಪೇಟೆಹೊನ್ನೂರಸ್ವಾಮಿ (ವಂಡ್ರಿ), ಪಕ್ಷದ ಸಂಡೂರುತಾಲೂಕು ಪ್ರಧಾನ ಕಾರ್ಯದರ್ಶಿ ಹುಸೇನ್‌ಪೀರಾ ದೊಡ್ಡಮನಿ, ಮೀನಹಳ್ಳಿ ಬಸಪ್ಪ, ಯುವಜನತಾದಳ ಜಿಲ್ಲಾಧ್ಯಕ್ಷ ಡಿ.ವಿಜಯಕುಮಾರ್,ಹಾಜಿಬಾಬಾ ಖಾನ್, ಶೇûಾವಲಿ, ಪುಷ್ಪಾ, ಜಯಲಕ್ಷಿ¾ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.