Advertisement

ಕೊಂಡಯ್ಯ ಮಣಿಸಿದ ಬಿಜೆಪಿ

07:15 PM Dec 15, 2021 | Team Udayavani |

ಬಳ್ಳಾರಿ: ತೀವ್ರ ಕುತೂಹಲ ಮೂಡಿಸಿದ್ದಬಳ್ಳಾರಿ-ವಿಜಯನಗರ ಮತಕ್ಷೇತ್ರದ ವಿಧಾನ ಪರಿಷತ್‌ಚುನನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿವೈ.ಎಂ. ಸತೀಶ್‌ ಅವರು 757 ಮತಗಳಅಂತರದಿಂದ ಭರ್ಜರಿ ಜಯಗಳಿಸುವಮೂಲಕ ಮೊದಲ ಬಾರಿಗೆ ವಿಧಾನಪರಿಷತ್‌ ಪ್ರವೇಶಿಸಿದ್ದಾರೆ.

Advertisement

ಗೆಲ್ಲುವವಿಶ್ವಾಸದಿಂದ ಎರಡನೇ ಬಾರಿಗೆಸ್ಪ ರ್ಧಿಸಿದ್ದ ಕಾಂಗ್ರೆಸ್‌ ಅಭ್ಯರ್ಥಿಕೆ.ಸಿ. ಕೊಂಡಯ್ಯ ಕೇವಲ1902 ಮತಗಳನ್ನು ಪಡೆದುಪರಾಭವಗೊಂಡಿದ್ದು, ಈ ಮೂಲಕಫಲಿತಾಂಶದ ಕುತೂಹಲಕ್ಕೆ ತೆರೆಬಿದ್ದಿದೆ.ನಗರದ ಸರ್ಕಾರಿ ಪಾಲಿಟೆಕ್ನಿಕ್‌ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯನಡೆಯಿತು. ನಿಗದಿತ ಸಮಯಬೆಳಗ್ಗೆ 8 ಗಂಟೆಗೆ ಮತಪೆಟ್ಟಿಗೆಗಳನ್ನುಭದ್ರಪಡಿಸಿದ್ದ ಸ್ಟ್ರಾಂಗ್‌ ರೂಮ್‌ಗಳನ್ನು ತೆರೆಯಿತಾದರೂ, ಎಲ್ಲಮತಪೆಟ್ಟಿಗೆಗಳಲ್ಲಿನ ಮತಪತ್ರಗಳನ್ನು ಡ್ರಮ್‌ನಲ್ಲಿ ಹಾಕಿ ಮಿಕ್ಸ್‌ ಮಾಡಿ ತೆಗೆದು 500 ಬಂಡಲ್‌ಗಳನ್ನಾಗಿ ಮಾಡುವಲ್ಲಿ ಒಂದಷ್ಟು ತಡವಾಯಿತು.

ನಂತರ10.45 ಗಂಟೆಗೆ ಎರಡು ಕೊಠಡಿಗಳಲ್ಲಿ ವ್ಯವಸ್ಥೆ ಮಾಡಿದ್ದ 10 ಟೇಬಲ್‌ಗ‌ಳಲ್ಲಿ ಪ್ರತಿ ಟೇಬಲ್‌ಗ‌ಳಲ್ಲಿ 500 ಮತಗಳಂತೆಎಣಿಕೆ ಮಾಡಲಾಯಿತು. ಎಣಿಕೆಯಲ್ಲಿ ಬಿಜೆಪಿಅಭ್ಯರ್ಥಿ ವೈ.ಎಂ. ಸತೀಶ್‌ ಅವರು 2659 ಮತಗಳನ್ನುಪಡೆದು ಪ್ರತಿಸ್ಪ ರ್ಧಿ ಕಾಂಗ್ರೆಸ್‌ನ ಕೆ.ಸಿ. ಕೊಂಡಯ್ಯ(1902) ಅವರಿಗಿಂತ 757 ಮತಗಳ ಅಂತರದಿಂದಜಯಗಳಿಸಿದ್ದಾರೆ ಎಂದು ಜಿಲ್ಲಾ ಧಿಕಾರಿ, ಜಿಲ್ಲಾಚುನಾವಣಾಧಿ ಕಾರಿ ಪವನ್‌ಕುಮಾರ್‌ ಮಾಲಪಾಟಿಘೋಷಣೆ ಮಾಡಿದರು.

ವಿಧಾನ ಪರಿಷತ್‌ಗೆ ಕಳೆದಡಿ.10ರಂದು ಮತದಾನನಡೆದಿದ್ದು, ಅವಳಿ ಜಿಲ್ಲೆಗಳಲ್ಲಿ4663 ಮತಗಳ ಪೈಕಿ 4654ಜನರು ಹಕ್ಕು ಚಲಾಯಿಸಿದ್ದರು.ಇದರಲ್ಲಿ ಶೇ.50ಕ್ಕೂ ಹೆಚ್ಚು ಅಂದರೆ2284 ಮತಗಳನ್ನು ಪಡೆದವರುಜಯಗಳಿಸುವರು. ಆದರೆ, ಬಿಜೆಪಿಅಭ್ಯರ್ಥಿ ವೈ.ಎಂ.ಸತೀಶ್‌ ಅವರು,ಮೊದಲ ಪ್ರಾಶಸ್ತÂದಲ್ಲೇ 2659ಮತಗಳನ್ನು ಪಡೆದು ಜಯಗಳಿಸಿದ್ದಾರೆ.ಪರಾಜಿತ ಅಭ್ಯರ್ಥಿ ಕಾಂಗ್ರೆಸ್‌ನಕೆ.ಸಿ. ಕೊಂಡಯ್ಯ 1902, ಪಕ್ಷೇತರಅಭ್ಯರ್ಥಿಗಳಾದ ಎನ್‌.ಗಂಗಿರೆಡ್ಡಿ4, ಸಿ.ಎಂ.ಮಂಜುನಾಥ ಸ್ವಾಮಿ 4ಮತಗಳನ್ನು ಪಡೆದಿದ್ದು, 87 ಮತಗಳುತಿರಸ್ಕೃತಗೊಂಡಿವೆ. ಚುನಾವಣೆ, ಎಣಿಕೆಕಾರ್ಯಕ್ಕೆ ನಿಯೋಜಿಸಲಾಗಿದ್ದ ತಹಶೀಲ್ದಾರ್‌,ಚುನಾವಣಾ ಸಿಬ್ಬಂದಿ ನಿಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next