ಬಳ್ಳಾರಿ: ರಾಜ್ಯದಲ್ಲಿ ಬಿಜೆಪಿಸರ್ಕಾರ ಇರುವುದರಿಂದ ವಿಧಾನಪರಿಷತ್ ಚುನಾವಣೆಯಲ್ಲಿಬಳ್ಳಾರಿ ಜಿಲ್ಲೆಯಲ್ಲೂಬಿಜೆಪಿಯವರು ಹಣದ ಹೊಳೆಹರಿಸಿರಬಹುದು ಎಂದುಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ಕೊಂಡಯ್ಯಆರೋಪಿಸಿದರು.
ನಗರದ ಜಿಪಂ ಕಚೇರಿ ಆವರಣದಲ್ಲಿಮತದಾನಕ್ಕೂ ಮುನ್ನ ಸುದ್ದಿಗಾರರೊಂದಿಗೆಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಸರ್ಕಾರದ ಆಡಳಿತವಿದೆ. ಹಣವಿದ್ದು,ಶ್ರೀಮಂತರೂ ಆಗಿದ್ದಾರೆ. ಹಾಗಾಗಿವಿಧಾನ ಪರಿಷತ್ ಚುನಾವಣೆಯಲ್ಲಿಹೆಚ್ಚು ಹಣದ ಹೊಳೆ ಹರಿಸಿರಬಹುದು.ವಿಧಾನ ಪರಿಷತ್ ಬುದ್ಧಿವಂತರ ಕ್ಷೇತ್ರ.ಇಲ್ಲಿ ಹಣದ ಪ್ರಭಾವ ಇರಬಾರದು, ಇದೆ.ಇದಕ್ಕೆ ಚುನಾವಣಾ ಆಯೋಗದಲ್ಲಿನಲೋಪದೋಷಗಳು ಕಾರಣವಾಗಿವೆ.
ಚುನಾವಣೆಯಲ್ಲಿ ಯಾವುದೇಚೆಕ್‌ಪೋಸ್ಟ್‌ಗಳನ್ನು ಅಳವಡಿಸಿಲ್ಲ.ಇದರಿಂದ ಜಿಲ್ಲೆಯಾದ್ಯಂತ ಹಣಸಲೀಸಾಗಿ ಹರಿದಾಡುತ್ತಿದೆ.ಮತ್ತೂಂದು ಚುನಾವಣೆಯಲ್ಲಿಸ್ಪ ರ್ಧಿಸಿದ್ದ ಅಭ್ಯರ್ಥಿಗಳಿಗೆಖರ್ಚು ವೆಚ್ಚಗಳಿಗೆ ಯಾವುದೇನಿಯಮವಿಲ್ಲ. ಹಾಗಾಗಿ ಈ ರೀತಿ ಹಣಹಂಚಿಕೆ ನಡೆಯುತ್ತಿದೆ ಎಂದರು.
ಇನ್ನುಕಳೆದ 26 ವರ್ಷಗಳಿಂದ ಅಖಂಡ ಬಳ್ಳಾರಿಜಿಲ್ಲೆಯ ಒಡನಾಟ ಹೊಂದಿದ್ದೇನೆ. ಆರುವರ್ಷಗಳ ಹಿಂದೆ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿದ್ದು, ಇದೀಗ ಕಾಂಗ್ರೆಸ್‌ಪಕ್ಷ ಪುನಃ ನನ್ನನ್ನು ಕಣಕ್ಕಿಳಿಸಿದೆ. ಕಳೆದ 8ತಿಂಗಳಿಂದ ಜಿಲ್ಲೆಯಾದ್ಯಂತ ಸಂಚರಿಸಿಮತದಾರರನ್ನು ಮನವೊಲಿಸಿದ್ದೇನೆ.
ಮೇಲಾಗಿ ಜಿಲ್ಲೆಯಲ್ಲಿನ ಎಲ್ಲ ಶಾಸಕರು,ಸಂಸದರು, ವಿಧಾನ ಪರಿಷತ್‌ಸದಸ್ಯರೆಲ್ಲರೂ ಒಗ್ಗಟ್ಟಿನಿಂದ ಪ್ರಚಾರಮಾಡಿದ್ದೇವೆ. ಹಾಗಾಗಿ ಚುನಾವಣೆಯಲ್ಲಿಗೆಲ್ಲುವ ವಿಶ್ವಾಸವಿದೆ ಎಂದರು.