Advertisement

ವಾಟ್ಸ್‌ಆ್ಯಪ್‌ ಸಂದೇಶ ಕಳುಹಿಸಿದವನಿಗೆ ಡಿಸಿ ತರಾಟೆ

12:50 PM Dec 08, 2021 | Team Udayavani |

ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕುಉತ್ತನೂರು ಬಳಿಯ ವೇದಾವತಿ (ಹಗರಿ)ನದಿಯಲ್ಲಿ ಕಾಣಿಕೊಂಡಿದ್ದ ಮೊಸಳೆಗಳನ್ನುಹಿಡಿಯದ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿ ಅಮರೇಶ್‌ ಎನ್ನುವ ಯುವಕ ಜಿಲ್ಲಾ ಧಿಕಾರಿಗಳಿಗೆಬೆದರಿಕೆ ಹಾಕಿರುವ ಘಟನೆ ನಡೆದಿದ್ದು, ಈ ಕುರಿತುಮೊಬೈಲ್‌ ಆಡಿಯೋ ಸಾಮಾಜಿಕ ಜಾಲತಾಣದಲ್ಲಿವೈರಲ್‌ ಆಗಿದೆ.

Advertisement

ಜಿಲ್ಲೆಯ ಸಿರುಗುಪ್ಪ ತಾಲೂಕುತಾಳೂರು ಗ್ರಾಮದ ಬಳಿಯ ಹಗರಿ (ವೇದಾವತಿ)ನದಿಯಲ್ಲಿ ಈಚೆಗೆ ಮೂರು ಮೊಸಳೆಗಳು ಪ್ರತ್ಯಕ್ಷವಾಗಿವೆ. ಮೊಸಳೆಗಳನ್ನು ಹಿಡಿದು ಸುರಕ್ಷಿತಸ್ಥಳದಲ್ಲಿ ಬಿಡುವಂತೆ ತಾಳೂರು ಗ್ರಾಮದ ನಿವಾಸಿ,ಸಾಮಾಜಿಕ ಕಾರ್ಯಕರ್ತ ಅಮರೇಶ್‌ 8 ದಿನಗಳಹಿಂದೆ ಬಳ್ಳಾರಿ ಜಿಲ್ಲಾಧಿ ಕಾರಿ ಪವನ್‌ಕುಮಾರ್‌ಮಾಲಪಾಟಿ ಅವರ ಗಮನಕ್ಕೆ ತಂದಿದ್ದಾರೆ.

ಆದರೂ ಮೊಸಳೆಗಳನ್ನು ಹಿಡಿಯುವ ಕೆಲಸ ಆಗಿಲ್ಲ. ಇದರಿಂದ ಬೇಸತ್ತ ಅಮರೇಶ್‌, ವಾಟ್‌Õಆಪ್‌ ಮೂಲಕ ಸಂದೇಶ ಕಳುಹಿಸಿದ್ದಾರೆ. ಜತೆಗೆಭತ್ತದ ಗದ್ದೆಯಲ್ಲಿದ್ದ ಮೊಸಳೆಯ ವೀಡಿಯೋವನ್ನುಕಳುಹಿಸಿದ್ದಾರೆ.

ಮೊಬೈಲ್‌ ಕರೆಯನ್ನೂ ಮಾಡಿದ್ದಾರೆ.ಆಗ ಜಿಲ್ಲಾ ಧಿಕಾರಿಗಳು ಕರೆ ಸ್ವೀಕರಿಸಿಲ್ಲ. ಮರು ದಿನಪುನಃ ಕರೆ ಮಾಡಿದಾಗ ಸ್ವೀಕರಿಸಿದ ಡಿಸಿ ಪವನ್‌ಕುಮಾರ್‌ ಅವರು ಅಮರೇಶನನ್ನು ತರಾಟೆಗೆತೆಗೆದುಕೊಂಡಿದ್ದಾರೆ. ಈ ಕುರಿತ ಆಡಿಯೋವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next