ಬಳ್ಳಾರಿ: ಅಕಾಲಿಕ ಮಳೆಯಿಂದ ಅವಿಭಜಿತ ಬಳ್ಳಾರಿಜಿಲ್ಲೆಯಲ್ಲಿ ಶೇ. 80ರಷ್ಟು ಬೆಳೆ ನಾಶವಾಗಿದ್ದು,ರಾಜ್ಯ ಸರ್ಕಾರ “ಹಸೆಬರ’ (ಸಂಪೂರ್ಣ ನಾಶ)ಎಂದು ಘೋಷಿಸಬೇಕು. ಪರಿಹಾರ ನೀಡಬೇಕು,ಬ್ಯಾಂಕ್ ಸಾಲ ಮನ್ನಾ ಮಾಡಿ, ಹೊಸ ಸಾಲನೀಡಬೇಕು ಎಂದು ಒತ್ತಾಯಿಸಿ ಇದೇ ಡಿ.16ರಂದು ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ರೈತಸಂಘ ಹಾಗೂ ಹಸಿರುಸೇನೆಯ ಜಿಲ್ಲಾಧ್ಯಕ್ಷ ಆರ್.ಮಾಧವರೆಡ್ಡಿ ಕರೂರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಬಳ್ಳಾರಿ ಜಿಲ್ಲೆಯಲ್ಲಿ ಈಚೆಗೆ ಸುರಿದ ಅಕಾಲಿಕಮಳೆಯಿಂದ ಎರಡುವರೆ ಲಕ್ಷ ಎಕರೆಯಲ್ಲಿಕಟಾವಿಗೆ ಬಂದಿದ್ದ ಮೆಣಸಿನಕಾಯಿ ಬೆಳೆ ಮತ್ತುಒಂದೂವರೆ ಲಕ್ಷ ಎಕರೆ ಭತ್ತದ ಬೆಳೆ ಸಂಪೂರ್ಣನಾಶವಾಗಿದೆ. ಆದರೆ, ಬಳ್ಳಾರಿ ಜಿಲ್ಲಾ ಧಿಕಾರಿಪವನ್‌ಕುಮಾರ್ ಮಾಲಪಾಟಿ, ಒಂದು ಲಕ್ಷಎಕರೆ ಮೆಣಸಿನಕಾಯಿ, 11 ಸಾವಿರ ಹೆಕ್ಟೇರ್‌ಭತ್ತ ನಷ್ಟವಾಗಿದೆ ಎಂದು ಮಾಧ್ಯಮಗಳಿಗೆ ತಪ್ಪುಮಾಹಿತಿ ನೀಡಿರುವುದು ಸರಿಯಲ್ಲ. ಮೊದಲುಸುಳ್ಳು ಹೇಳುವುವನ್ನು ಬಿಡಬೇಕು ಎಂದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಳೆನಷ್ಟದಿಂದ ರೈತರಾರೂ ಸಾಲಕ್ಕೆಹೆದರಬಾರದು. ಪ್ರಕೃತಿ ವಿಕೋಪದಿಂದನಷ್ಟವಾಗಿರುವಾಗ ಅದರ ಹೊಣೆಯನ್ನುಸರ್ಕಾರವೇ ಭರಿಸಬೇಕು. ಅದಕ್ಕಾಗಿ ಸರ್ಕಾರರೈತರ ಸಂಪೂರ್ಣ ಬೆಳೆ ಸಾಲ ಮನ್ನಾ ಮಾಡಿಹೊಸ ಸಾಲ ನೀಡಬೇಕು. ಕೃಷಿ ಇಲಾಖೆ ಸಿಬ್ಬಂದಿನಷ್ಟದ ಬಗ್ಗೆ ರೈತನ ಹೊಲಗಳಿಗೆ ಬಂದು ಮಾಹಿತಿಪಡೆಯುತ್ತಿಲ್ಲ. ಅದಕ್ಕಾಗಿ ರೈತ ಸಂಘದಿಂದಲೇರೈತರು ಮಾಹಿತಿಯನ್ನೊಳಗೊಂಡ ಅರ್ಜಿಸಲ್ಲಿಸಲಿದ್ದು, ಎಲ್ಲ ರೈತರಿಗೆ ಎಕರೆಗೆ 50 ಸಾವಿರರೂ. ಪರಿಹಾರ ನೀಡಬೇಕು.
ಅಳಿದುಳಿದಭತ್ತ ಖರೀದಿಗೆ ಸಹ ಸರ್ಕಾರ ಇನ್ನು ಬೆಂಬಲಬೆಲೆ ಖರೀದಿ ಕೇಂದ್ರ ಆರಂಭಿಸಿಲ್ಲ ಎಂದುಆರೋಪಿಸಿದ ಮಾಧವರೆಡ್ಡಿಯವರು, ಕಡಲೆಇನ್ನಿತರೆ ಚಳಿಗೆ ಬೆಳೆಯುವ ಬೆಳೆಗಳು ನಾಟಿಮಾಡಿಕೊಳ್ಳಲು ಇನ್ನು ಅವಕಾಶವಿದ್ದು, ಎಚ್‌ಎಲ್‌ಸಿ ಕಾಲುವೆಯಲ್ಲಿ ಮುಂದಿನ ಫೆಬ್ರವರಿತಿಂಗಳವರೆಗೆ ನೀರು ಹರಿಸಬೇಕು ಎಂದು ಕೋರಿದರು.
ಸುದ್ದಿಗೋಷ್ಠಿಯಲ್ಲಿ ಸಂಘದಮುಖಂಡರುಗಳಾದ ಬಸವರಾಜಸ್ವಾಮಿ,ಬಸವರೆಡ್ಡಿ, ಹುಲುಗಯ್ಯ, ಸಲೀಂ, ಗುಂಡಾರೆಡ್ಡಿ,ಧರಪ್ಪ ನಾಯ್ಕ, ಮೊದಲಾದವರು ಇದ್ದರು.