Advertisement

ಅಂಬೇಡ್ಕರ್‌ ಮಹಾನ್‌ ಮಾನವತಾವಾದಿ

05:18 PM Dec 07, 2021 | Team Udayavani |

ಬಳ್ಳಾರಿ: ಇಲ್ಲಿನ ವಿಜಯನಗರ ಶ್ರೀ ಕೃಷ್ಣದೇವರಾಯವಿಶ್ವವಿದ್ಯಾಲಯದಲ್ಲಿ ಡಾ| ಬಿ.ಆರ್‌. ಅಂಬೇಡ್ಕರ್‌ಅವರ 65ನೇ ಮಹಾ ಪರಿನಿರ್ವಾಣ ದಿವವನ್ನುಸೋಮವಾರ ಆಚರಿಸಲಾಯಿತು.

Advertisement

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ವಿವಿ ಕುಲಸಚಿವ ಪ್ರೊ| ಸಿದ್ದು ಪಿ. ಅಲಗೂರು ಅವರುಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಪುಷ್ಪನಮನಸಲ್ಲಿಸಿದರು. ಬಳಿಕ ಮಾತನಾಡಿದ ಅವರು,ಅಂಬೇಡ್ಕರರು ಎಲ್ಲ ಕ್ಷೇತ್ರಗಳಲ್ಲಿಯೂ ಪ್ರಾವಿಣ್ಯತೆಪಡೆದಿದ್ದ ಭಾರತ ಕಂಡ ಶ್ರೇಷ್ಠ ಮಹಾನ್‌ ಮಾನವತಾವಾದಿಯಾಗಿದ್ದರು.

ಬಾಬಾ ಸಾಹೇಬರುಸಮಾಜದ ಎಲ್ಲ ಋಣಗಳನ್ನು ತೀರಿಸಿ ಮಹಾಪರಿನಿರ್ವಾಣ ಹೊಂದಿದ್ದಾರೆ. ಅವರ ಆಶಯ ಕೇವಲದಲಿತರ ಏಳಿಗೆ ಮಾತ್ರವಲ್ಲ ಎಲ್ಲ ವರ್ಗಗಳಲ್ಲಿನದುರ್ಬಲ ವರ್ಗಗಳ ಏಳಿಗೆ ಆಗಬೇಕು. ಆಗ ಮಾತ್ರನಿಜವಾದ ಸ್ವಾತಂತ್ರÂ ಭಾರತಕ್ಕೆ ಲಭಿಸಿದಂತಾಗುವುದುಎಂದರು.

ಸ್ವಾತಂತ್ರÂ ದಿನಾಚರಣೆಯ ಅಮೃತಮಹೋತ್ಸವದ ಈ ಸಂದರ್ಭದಲ್ಲಿ ಡಾ| ಬಿ.ಆರ್‌.ಅಂಬೇಡ್ಕರ್‌ರವರ ಜಾತ್ಯಾತೀತ ಮತ್ತು ಸಮಾಜವಾದಿಹಾಗೂ ರಾಷ್ಟ್ರೀಯತೆಯ ಚಿಂತನೆಗಳ ಕುರಿತುಅಧ್ಯಯನವಾಗಬೇಕಿದೆ. ಯುವ ಪೀಳಿಗೆಯು ಈನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಸಲಹೆನೀಡಿದರು.ಸಮಾರಂಭದಲ್ಲಿ ಪ್ರೊ| ಶಶಿಕಾಂತ್‌ ಎಸ್‌.ಉಡಿಕೇರಿ ಉಪಸ್ಥಿತರಿದ್ದರು.

ಹಣಕಾಸು ಅಧಿ ಕಾರಿಡಾ| ಕೆ.ಸಿ. ಪ್ರಶಾಂತ್‌ ಮಾತನಾಡಿದರು. ಎಸ್‌ಸಿ,ಎಸ್‌ಟಿ ಘಟಕದ ಸಂಯೋಜಕ ಡಾ| ಕುಮಾರ್‌ಕಾರ್ಯಕ್ರಮ ನಿರ್ವಹಿಸಿದರು. ಹುಲುಗಪ್ಪ ಡಾ|ಬಿ.ಆರ್‌. ಅಂಬೇಡ್ಕರ್‌ ಗೀತೆ ಹಾಡಿದರು. ಎಲ್ಲವಿಭಾಗಗಳ ಮುಖ್ಯಸ್ಥರು, ಬೋಧಕ ಬೋಧಕೇತರವೃಂದ, ಸಂಶೋಧನಾರ್ಥಿಗಳು ಹಾಗೂವಿದ್ಯಾರ್ಥಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next