Advertisement
ನಗರದ ಡಿಸಿ ಕಚೇರಿ ಆವರಣದಲ್ಲಿ ವಿಧಾನಪರಿಷತ್ ಚುನಾವಣೆ ನಿಮಿತ್ತ ಬಿಜೆಪಿ ಅಭ್ಯರ್ಥಿಸತೀಶ್ ಅವರು ನಾಮಪತ್ರ ಸಲ್ಲಿಸಿದ ಬಳಿಕಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಅಭಿವೃದ್ಧಿ ದೃಷ್ಟಿಯಿಂದ ಅವಿಭಜಿತ ಬಳ್ಳಾರಿಜಿಲ್ಲೆಯನ್ನು ವಿಭಜನೆ ಮಾಡಲಾಗಿದೆ. ಹೀಗಾಗಿಎರಡು ಜಿಲ್ಲೆಗಳು, ಇಬ್ಬರು ಜಿಲ್ಲಾ ಧಿಕಾರಿಗಳು ಇರುವುದರಿಂದ ಸಹಜವಾಗಿ ಒಂದಷ್ಟುಒತ್ತಡ ಇದ್ದೇ ಇರುತ್ತದೆ. ಹಾಗಾಗಿ ಬಳ್ಳಾರಿಜಿಲ್ಲೆ ಉಸ್ತುವಾರಿ ಬಿಟ್ಟುಕೊಡಲು ಸಿದ್ಧನಿದ್ದು,ಈಗಾಗಲೇ ಸಿಎಂ ಗಮನಕ್ಕೆ ತಂದಿದ್ದೇನೆ.
Related Articles
Advertisement
ಅಭ್ಯರ್ಥಿ ಗೆಲವು ಖಚಿತ: ವಿಧಾನ ಪರಿಷತ್‌ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೈ.ಎಂ. ಸತೀಶ್ ಗೆಲುವು ಖಚಿತ. ಕಾರಣಗ್ರಾಪಂಗಳಲ್ಲಿ ಬಿಜೆಪಿ ಬೆಂಬಲಿತ ಸದಸ್ಯರೇ ಹೆಚ್ಚಿನಸಂಖ್ಯೆಯಲ್ಲಿದ್ದಾರೆ. ಇದಕ್ಕೆ ಈಚೆಗೆ ಬಳ್ಳಾರಿಯಲ್ಲಿನಡೆದ ಜನ ಸ್ವರಾಜ್ ಯಾತ್ರೆಯೇ ಸಾಕ್ಷಿ ಎಂದರು.ಅಭ್ಯರ್ಥಿ ಆಯ್ಕೆ ಪಕ್ಷಕ್ಕೆ ಬಿಟ್ಟ ವಿಚಾರ. ಸತೀಶ್‌ಅವರ ತಾತನ ಕಾಲದಿಂದಲೂ ಪಕ್ಷದಲ್ಲಿದ್ದಾರೆ.ಇವರ ಸಮಾಜ ಸೇವೆ ಪರಿಗಣಿಸಿ ಟಿಕೆಟ್‌ನೀಡಿರಬಹುದು ಎಂದರು.
ಬಿಜೆಪಿಯವರೇಕಾಂಗ್ರೆಸ್ ಅಭ್ಯರ್ಥಿ ಕೊಂಡಯ್ಯನವರನ್ನುಬೆಂಬಲಿಸುತ್ತಾರೆ ಎಂಬ ಆರೋಪದ ಬಗ್ಗೆಪ್ರತಿಕ್ರಿಯಿಸಿದ ಸಚಿವ ಸಿಂಗ್, ಅದು ಆರೋಪಅಷ್ಟೇ. ನಮ್ಮ ಅವರ ಸ್ನೇಹ ಬೇರೆ. ಚುನಾವಣೆಬಂದಾಗ ಪಕ್ಷ ನಿಷ್ಠೆ ಮುಖ್ಯ. ನಮ್ಮ ಅಭ್ಯರ್ಥಿಪರವಾಗಿ ನಾವು ಕೆಲಸ ಮಾಡುತ್ತೇವೆ. ಇನ್ನುಕಾಂಗ್ರೆಸ್ ಶಾಸಕರೇ ಕೊಂಡಯ್ಯರಿಗೆ ಟಿಕೆಟ್ ಬೇಡಎಂದಿದ್ದಾರೆ.
ಕಾಂಗ್ರೆಸ್‌ನಲ್ಲಿನ ಅಸಮಾಧಾನವೇಬಿಜೆಪಿ ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಗಲಿದೆಎಂದು ತಿಳಿಸಿದರು. ಶಾಸಕ ಜಿ.ಸೋಮಶೇಖರರೆಡ್ಡಿ, ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್‌ಸೇರಿ ಹಲವರು ಇದ್ದರು.