Advertisement

ಜಿಲ್ಲಾಧಿಕಾರಿಯಿಂದ ಬೆಳೆ ಹಾನಿ ಪರಿಶೀಲನೆ

04:21 PM Nov 22, 2021 | Team Udayavani |

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಕಳೆದನಾಲ್ಕೈದು ದಿನಗಳಿಂದ ಸುರಿಯುತ್ತಿರುವಅಕಾಲಿಕ ಮಳೆಯಿಂದ ಹಾನಿಗೊಳಗಾಗಿರುವಬೆಳೆಯನ್ನು ಬಳ್ಳಾರಿ ಜಿಲ್ಲಾ ಧಿಕಾರಿ ಪವನ್‌ಕುಮಾರ್‌ ಮಾಲಪಾಟಿ ಅವರು ಭಾನುವಾರ ಪರಿಶೀಲಿಸಿದರು.

Advertisement

ತಾಲೂಕಿನ ಕಪ್ಪಗಲ್ಲು, ಬಿ.ಡಿ.ಹಳ್ಳಿ, ಎರ್ರಗುಡಿ,ಸಿರಿಗೇರಿ ಕ್ರಾಸ್‌ ಸೇರಿದಂತೆ ಭತ್ತ, ಮಣಸಿನಕಾಯಿ,ಹತ್ತಿ ಬೆಳೆ ಹೆಚ್ಚಾಗಿ ಹಾನಿಗೀಡಾಗಿರುವ ವಿವಿಧಗ್ರಾಮಗಳಿಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕಮಲ್ಲಿಕಾರ್ಜುನ, ತಹಶೀಲ್ದಾರ್‌ ರೆಹಾನ್‌ಪಾಶಾ, ತೋಟಗಾರಿಕೆ, ಕಂದಾಯ ಮತ್ತು ಕೃಷಿಇಲಾಖೆ ಅಧಿ ಕಾರಿಗಳೊಂದಿಗೆ ಭೇಟಿ ನೀಡಿ,ಮಳೆಗೆ ನೆಲಕಚ್ಚಿರುವ ಭತ್ತ, ಕಟಾವಿಗೆ ಬಂದಿದ್ದಮೆಣಸಿನಕಾಯಿ ಮತ್ತು ಹತ್ತಿ ಬೆಳೆಗಳನ್ನುಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿರೈತರು ಮಳೆಯಿಂದ ಉಂಟಾದ ಅಪಾರಪ್ರಮಾಣದ ಮೆಣಸಿನಕಾಯಿ, ಭತ್ತದ ಬೆಳೆಹಾನಿಯಾಗಿರುವುದನ್ನು ಜಿಲ್ಲಾ ಧಿಕಾರಿಗಳಗಮನಕ್ಕೆ ತಂದರು. ಹಾನಿಗೊಳಗಾದ ಬೆಳೆಯನ್ನುಖುದ್ದಾಗಿ ಪರಿಶೀಲಿಸಿದ ಡಿಸಿ ಪವನ್‌ಕುಮಾರ್‌ಮಾಲಪಾಟಿ, ರೈತರು ಹಾಗೂ ಅ ಧಿಕಾರಿಗಳಿಂದಮಾಹಿತಿ ಪಡೆದರು. ಬೆಳೆಹಾನಿಗೆ ಸಂಬಂಧಿಸಿದಂತೆ ಜಂಟಿಸಮೀಕ್ಷೆ ಆರಂಭಿಸಲಾಗಿದ್ದು,ಹಾನಿಗೊಳಗಾದ ಬೆಳೆಗೆ ನಿಯಮಾನುಸಾರಪರಿಹಾರ ಒದಗಿಸಲಾಗುವುದು ಎಂದು ರೈತರಿಗೆಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next