ಬಳ್ಳಾರಿ: ಸ್ಥಳೀಯ ಸಂಸ್ಥೆಗಳಿಂದ ನಡೆಯುವ ವಿಧಾನಪರಿಷತ್ ಚುನಾವಣೆ ಘೋಷಣೆಯಾಗಿದ್ದರೂಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದ್ದ ಜಿಲ್ಲಾಬಿಜೆಪಿಯಿಂದ ಅಂತಿಮವಾಗಿ ಬುಡಾ ಮಾಜಿ ಅಧ್ಯಕ್ಷದಮ್ಮೂರು ಶೇಖರ್, ಉದ್ಯಮಿ ಏಚರೆಡ್ಡಿ ಸತೀಷ್‌ಅವರ ಹೆಸರುಗಳನ್ನು ಅಂತಿಮಗೊಳಿಸಿ ಹೈಕಮಾಂಡ್‌ಗೆ ಕಳುಹಿಸಲಾಗಿದ್ದು, ಯಾರಿಗೆ ಟಿಕೆಟ್ ಲಭಿಸಲಿದೆಎಂಬುದು ಕುತೂಹಲ ಮೂಡಿಸಿದೆ.
ಅವಿಭಜಿತ ಬಳ್ಳಾರಿ ಜಿಲ್ಲಾ ವಿಧಾನ ಪರಿಷತ್‌ಕ್ಷೇತ್ರದಿಂದ ಈಗಾಗಲೇ ಜಿಲ್ಲೆಯಾದ್ಯಂತ ಸಂಚರಿಸಿಗ್ರಾಪಂ ಸದಸ್ಯರನ್ನು ಭೇಟಿಯಾಗುತ್ತಿರುವ ಹಾಲಿಸದಸ್ಯ ಕೆ.ಸಿ.ಕೊಂಡಯ್ಯನವರು ಸಂಭವನೀಯಅಭ್ಯರ್ಥಿಯಾಗಿದ್ದಾರೆ. ಟಿಕೆಟ್ ಸಹ ಬಹುತೇಕವಾಗಿ ಇವರಿಗೆ ಲಭಿಸಲಿದೆ ಎನ್ನಲಾಗುತ್ತಿದೆ. ಆದರೆಬಿಜೆಪಿಯಲ್ಲಿ ಅಭ್ಯರ್ಥಿಯನ್ನು ಆಯ್ಕೆ ಮಾಡುವುದುಕಗ್ಗಂಟಾಗಿ ಪರಿಣಮಿಸಲಿದೆ.
ಹೊಸಪೇಟೆಯಲ್ಲಿ ಈಚೆಗೆನಡೆದ ಕಾರ್ಯಕರ್ತರಸಭೆಯಲ್ಲಿ ಕಾರ್ಯಕರ್ತರೆಲ್ಲರೂ ಹಿಂದಿನಪರಾಜಿತ ಅಭ್ಯರ್ಥಿ, ಹಾಲಿಜಿಲ್ಲಾಧ್ಯಕ್ಷ ಚನ್ನಬಸವನಗೌಡಪಾಟೀಲ್ ಅವರ ಹೆಸರುಸೂಚಿಸಿತ್ತಾದರೂ, ಹಲವುಕಾರಣಗಳಿಂದ ಅವರುಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಇದರಿಂದ ಕುರುಬಸಮುದಾಯದಿಂದ ಬುಡಾ ಮಾಜಿ ಅಧ್ಯಕ್ಷ ದಮ್ಮೂರುಶೇಖರ್, ಲಿಂಗಾಯತ ಸಮುದಾಯದಿಂದ ಗಣಿಉದ್ಯಮಿ ಏಚರೆಡ್ಡಿ ಸತೀಷ್ ಅವರ ಹೆಸರು ಹೆಚ್ಚುಕೇಳಿಬರುತ್ತಿದ್ದು, ಇಬ್ಬರ ಹೆಸರುಗಳನ್ನು ಹೈಕಮಾಂಡ್‌ಗೆಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
ರಾಜಕೀಯ ಪ್ರಾತಿನಿಧ್ಯವಿಲ್ಲ: ಅವಿಭಜಿತ ಬಳ್ಳಾರಿಜಿಲ್ಲೆಯಲ್ಲಿ ಹರಪನಹಳ್ಳಿ ಸೇರಿ 10 ವಿಧಾನಸಭಾಕ್ಷೇತ್ರಗಳಲ್ಲಿ ಮೂರು ಸಾಮಾನ್ಯಕ್ಕೆ, 5 ಪರಿಶಿಷ್ಟಪಂಗಡಕ್ಕೆ, 2 ಪರಿಶಿಷ್ಟ ಜಾತಿಗೆ ಮೀಸಲಾಗಿವೆ.ಇದರಿಂದ ವಿಧಾನಪರಿಷತ್ ಟಿಕೆಟ್‌ನ್ನು ಜಿಲ್ಲೆಯಪ್ರಬಲ ಸಮುದಾಯಗಳಾದ ಲಿಂಗಾಯತ ಮತ್ತುಕುರುಬ ಸಮುದಾಯಕ್ಕೆ ನೀಡಬೇಕೆಂಬ ಬೇಡಿಕೆಹಲವು ವರ್ಷಗಳಿಂದಕೇಳಿಬರುತ್ತಿದೆ. ಜತೆಗೆ ಬಳ್ಳಾರಿಸೇರಿ ರಾಜ್ಯದ 25 ವಿಧಾನಪರಿಷತ್ ಕ್ಷೇತ್ರಗಳಲ್ಲಿ 2-3ರಲ್ಲಿಕುರುಬ ಸಮುದಾಯಕ್ಕೆ ನೀಡಬೇಕೆಂಬುದು ಬಿಜೆಪಿಯಲ್ಲಿನಿರ್ಣಯ ಕೈಗೊಳ್ಳಲಾಗಿದೆಎನ್ನಲಾಗುತ್ತಿದೆ.
ಈಹಿನ್ನೆಲೆಯಲ್ಲಿ ಬಳ್ಳಾರಿಯಿಂದ ಕುರುಬ ಸಮುದಾಯದಿಂದ ಬುಡಾ ಮಾಜಿ ಅಧ್ಯಕ್ಷ ದಮ್ಮೂರು ಶೇಖರ್,ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎ. ರಾಮಲಿಂಗಪ್ಪ,ಪಾಲಿಕೆ ಉಪಮೇಯರ್ ಶಶಿಕಲಾ ಕೃಷ್ಣಮೋಹನ್,ಹೊಸಪೇಟೆಯ ಅಯ್ನಾಳಿ ತಿಮ್ಮಪ್ಪ, ಲಿಂಗಾಯತಸಮುದಾಯದಿಂದ ಗಣಿ ಉದ್ಯಮಿ ಏಚರೆಡ್ಡಿಸತೀಶ್, ಗೋನಾಳ್ ರಾಜಶೇಖರಗೌಡ ಸೇರಿಹಲವರು ಆಕಾಂಕ್ಷಿಗಳಾಗಿದ್ದರು. ದಮ್ಮೂರುಶೇಖರ್, ಏಚರೆಡ್ಡಿ ಸತೀಶ್ ಅವರ ಹೆಸರುಗಳನ್ನುಅಂತಿಮಗೊಳಿಸಲಾಗಿದೆ.
ರಾಯಚೂರಿನಲ್ಲಿ ಕುರುಬಸಮುದಾಯಕ್ಕೆ, ಬಳ್ಳಾರಿಯಲ್ಲಿ ಲಿಂಗಾಯತಸಮುದಾಯಕ್ಕೆ ಟಿಕೆಟ್ ನೀಡಲಾಗುತ್ತದೆ ಎಂಬ ಮಾತುಸಹ ಕೇಳಿಬರುತ್ತಿದೆಯಾದರೂ, ರಾಯಚೂರಿನಲ್ಲಿಈಗಾಗಲೇ ಲಿಂಗಾಯತ ಸಮುದಾಯದಮುಖಂಡರೊಬ್ಬರನ್ನು ಅಂತಿಮಗೊಳಿಸಲಾಗಿದೆಎಂತಲೂ ಬಲ್ಲಮೂಲಗಳಿಂದ ತಿಳಿದು ಬಂದಿದೆ.ಹೀಗಾಗಿ ಬಳ್ಳಾರಿ ಜಿಲ್ಲೆಯ ಬಿಜೆಪಿ ಅಭ್ಯರ್ಥಿಆಯ್ಕೆ ಕುತೂಹಲ ಮೂಡಿಸಿದ್ದು, ಹೈಕಮಾಂಡ್‌ಬಳ್ಳಾರಿಯಿಂದ ಸ್ಪಧಿ ìಸುವಂತೆ ಯಾರಿಗೆ ಸೂಚಿಸಲಿದೆಕಾದು ನೋಡಬೇಕಾಗಿದೆ.
ವೆಂಕೋಬಿ ಸಂಗನಕಲ್ಲು