ಬಳ್ಳಾರಿ: ತಾಲೂಕಿನ ಸಂಗನಕಲ್ಲು ಗ್ರಾಮದಗಂಗಾಧರ್, ಬೇವಿನಹಳ್ಳಿ ಪೊಂಪಣ್ಣ,ಶಂಕ್ರಪ್ಪ, ವೀರನಗೌಡ, ರೈತ ಮುಖಂಡಕೃಷ್ಣ ಸೇರಿ ವಿವಿಧ ರೈತರ ತೋಟಗಳಿಗೆಹಿರಿಯ ಸಹಾಯಕ ತೋಟಗಾರಿಕೆನಿರ್ದೇಶಕ ಎಚ್.ಕೆ. ಯೋಗೇಶ್ವರ್ ಭೇಟಿನೀಡಿ ಪರಿಶೀಲಿಸಿದರು.
ರೈತರ ತೋಟಗಳನ್ನು ವೀಕ್ಷಿಸಿದ ಅವರುಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾದಮೆಣಸಿನಕಾಯಿ ಬೆಳೆಯಲ್ಲಿ ತೀವ್ರತರವಾದಕೀಟ ಮತ್ತು ರೋಗಬಾಧೆ ಕಾಣುತ್ತಿದೆ.ಹಾಗಾಗಿ ರೈತ ಬಾಂಧವರು ನಿಯಂತ್ರಣಕ್ರಮಗಳನ್ನು ತೆಗೆದುಕೊಳ್ಳುವುದುಸೂಕ್ತವಾಗಿರುತ್ತದೆ ಎಂದು ಹೇಳಿ ಕೀಟಮತ್ತು ರೋಗದ ನಿಯಂತ್ರಣಕ್ಕಾಗಿ ಸೂಕ್ತಸಲಹೆ ಸೂಚನೆಗಳನ್ನು ನೀಡಿದರು.
ಕೀಟಗಳು ಮತ್ತು ಮುಟುರು ರೋಗದನಿಯಂತ್ರಣಕ್ಕಾಗಿ ಡೈಫೆಂತಿಯುರಾನ್1 ಗ್ರಾಂ ಅಥವಾ ಸ್ಪೈನಿಟೊರಂ 0.6ಮಿ.ಲೀ. ಅಥವಾ ಥೈಯೋಮಿಥೋಸಾಂ0.5 ಗ್ರಾಂ ಅಥವಾ ಬೀಟಾ ಸೈಫ್ಲೂಥ್ರಿನ್+ಇಮಿಡಾಕ್ಲೋಪ್ರಿಡ್ 01 ಮಿ.ಲೀ.ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಣೆಮಾಡಬೇಕು. ಮಿಡ್ಜ್ ಕೀಟನನಿಯಂತ್ರಣಕ್ಕಾಗಿ ಕಾಬೋìಸಲಾ ನ್ 01ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿಸಿಂಪಡಣೆ ಮಾಡಬೇಕು.
ಯಾವುದೇಸಿಂಪರಣೆ ಮಾಡುವ ಸಂದರ್ಭದಲ್ಲಿ ಸ್ಟಿಕರ್‌ಗಳನ್ನು ಬೆರೆಸಿ ಸಿಂಪಡಣೆ ಮಾಡಬೇಕುಎಂದು ಅವರು ತಿಳಿಸಿದ್ದಾರೆ.ರೋಗ ನಿಯಂತ್ರಣಕ್ಕಾಗಿ ರೋಗಪೀಡಿತಹಣ್ಣುಗಳನ್ನು ಕಿತ್ತು ದೂರವಿಡಬೇಕು.ಭೂಮಿಯಲ್ಲಿ ಹೆಚ್ಚು ತೇವಾಂಶಇರಕೂಡದು. ಮಚ್ಚೆ ರೋಗದನಿಯಂತ್ರಣಕ್ಕಾಗಿ ಪ್ರೊಪಿನೆಬ್ 2.5 ಗ್ರಾಂಅಥವಾ ಥೈಯೋμನೇಟ್ ಮಿಥೈಲ್ 0.5ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಣೆಮಾಡಬೇಕು ಎಂದು ಹೇಳಿದರು.
ಬೂದುರೋಗ ನಿಯಂತ್ರಣಕ್ಕಾಗಿಟೆಬ್ಯುಕೋನಜೋಲ್ 01 ಮಿ.ಲೀ.ಅಥವಾ ಹೆಕ್ಸಾಕೋನಜೋಲ್ 01ಮಿ.ಲೀ. ಅಥವಾ ಡೈμನಕೋನಜೋಲ್0.5 ಮಿ.ಲೀ. ಪ್ರತಿ ಲೀಟರ್ ನೀರಿಗೆಬೆರೆಸಿ ಸಿಂಪಡಣೆ ಮಾಡಬೇಕು. ಕೀಟಮತ್ತು ರೋಗದ ಬಾಧೆಯು ಗಿಡಗಳಸಾಂದ್ರತೆ ಹೆಚ್ಚಾಗಿರುವುದರಿಂದ ಹಾಗೂಪ್ರತಿ ವರ್ಷವೂ ಅದೇ ಜಮೀನಿನಲ್ಲಿಮೆಣಸಿನಕಾಯಿ ಬೆಳೆ ಬೆಳೆಯುವುದರಿಂದಹೆಚ್ಚಾಗಿರುವುದು ಕಂಡುಬಂದಿದ್ದು, ಪ್ರತಿಎಕರೆಗೆ 8000 ರಿಂದ 9000 ಗಿಡಗಳನ್ನುನಾಟಿ ಮಾಡುವುದು ಮತ್ತು ಬೆಳೆ ಪರಿವರ್ತನೆಪದ್ಧತಿಯನ್ನು ಅನುಸರಿಸುವುದುಸೂಕ್ತವಾಗಿರುತ್ತದೆ ಎಂದು ರೈತರಿಗೆಸಲಹೆ ನೀಡಿದರು.
ಈ ಸಂದರ್ಭದಲ್ಲಿತೋಟಗಾರಿಕೆ ಉಪನಿರ್ದೇಶಕ ಶರಣಪ್ಪಬೋಗಿ, ಸಹಾಯಕ ತೋಟಗಾರಿಕೆನಿರ್ದೇಶಕ ಮಂಜುನಾಯ್ಕ, ಸಹಾಯಕತೋಟಗಾರಿಕೆ ಅ ಧಿಕಾರಿ ಶಿವಪ್ರಸಾದ್, ರೈತಮುಖಂಡರು ಹಾಗೂ ಗ್ರಾಮದ ರೈತರುಉಪಸ್ಥಿತರಿದ್ದರು