Advertisement

ಮುಜರಾಯಿ ದೇವಸ್ಥಾನಗಳಲ್ಲಿ ಗೋ ಪೂಜೆ

04:55 PM Nov 10, 2021 | Team Udayavani |

ಬಳ್ಳಾರಿ: ದೀಪಾವಳಿ ಹಬ್ಬದ (ಬಲಿಪಾಡ್ಯಮಿ)ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶನದಂತೆಜಿಲ್ಲೆಯ ವಿವಿಧ ಮುಜರಾಯಿದೇವಾಲಯಗಳಲ್ಲಿ ಗೋಪೂಜೆಕಾರ್ಯಕ್ರಮ ಮಂಗಳವಾರ ನಡೆಯಿತು.

Advertisement

ವಿವಿಧ ಮುಜರಾಯಿ ದೇವಸ್ಥಾನಗಳಲ್ಲಿನಡೆದ ಗೋಪೂಜೆ ಕಾರ್ಯಕ್ರಮದಲ್ಲಿಗೋವುಗಳಿಗೆ ಸ್ನಾನ ಮಾಡಿಸಿ,ದೇವಾಲಯಕ್ಕೆ ಕರೆತಂದು, ಅರಿಶಿಣ,ಕುಂಕುಮ, ಹೂವುಗಳಿಂದ ಅಲಂಕರಿಸಿ,ಅಕ್ಕಿ, ಬೆಲ್ಲ, ಬಾಳೆಹಣ್ಣು, ಸಿಹಿ ತಿನಿಸುಮುಂತಾದ ಗೋಗ್ರಾಸವನ್ನು ಹಸುವಿಗೆನೀಡಿ ದೂಪ-ದೀಪ ಬೆಳಗಿ ಪೂಜಿಸಿ ನಮಸ್ಕರಿಸಲಾಯಿತು.

ಬಳ್ಳಾರಿಕನಕದುರ್ಗಮ್ಮ ದೇವಸ್ಥಾನದಲ್ಲಿ ನಡೆದಗೋ ಪೂಜೆ ಕಾರ್ಯಕ್ರಮದಲ್ಲಿ ಬಳ್ಳಾರಿನಗರ ಶಾಸಕ ಜಿ.ಸೋಮಶೇಖರ್‌ ರೆಡ್ಡಿ,ದೇವಸ್ಥಾನದ ಧರ್ಮಕತೃì, ಪಾಲಿಕೆಸದಸ್ಯ ಪಿ.ಗಾದೆಪ್ಪ, ದೇವಸ್ಥಾನದಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪಭಾಗಿಯಾಗಿದ್ದರು.
ಸಿರಗುಪ್ಪದ ಬಲಕುಂದಿಯಬನ್ನಿಮಹಂಕಾಳಮ್ಮ ದೇವಸ್ಥಾನದಲ್ಲಿನಡೆದ ಗೋ ಪೂಜೆ ಕಾರ್ಯಕ್ರಮದಲ್ಲಿಶಾಸಕ ಎಂ.ಎಸ್‌. ಸೋಮಲಿಂಗಪ್ಪ,ಸಿರುಗುಪ್ಪ ತಹಶೀಲ್ದಾರ್‌ ಮಂಜುನಾಥ್‌,ದೇವಸ್ಥಾನದ ಸಿಬ್ಬಂದಿ ಹಾಗೂ ಇನ್ನಿತರರುಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next