ಬಳ್ಳಾರಿ: ಸರ್ಕಾರ ಈಗ ಬಳ್ಳಾರಿಗೂಅನ್ವಯವಾಗುವಂತೆ ಜಾರಿಗೆ ತಂದಿರುವರೆರಾ (ರಿಯಲ್ ಎಸ್ಟೇಟ್ ರೆಗ್ಯೂಲೇಟರಿಆಕ್ಟ್) ಕಾಯ್ದೆಯನ್ನು ಕಡ್ಡಾಯವಾಗಿಅಳವಡಿಸಿಕೊಂಡು ಬಿಲ್ಡರ್ಸ್ ಮತ್ತುಡೆವಲಪರ್ಸ್‌ಗಳು ನಗರದ ಅಭಿವೃದ್ಧಿಗೆಸಹಕರಿಸಬೇಕು ಎಂದು ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿದರು.
ನಗರದ ಖಾಸಗಿ ಹೊಟೇಲ್‌ಸಭಾಂಗಣದಲ್ಲಿ ಬಳ್ಳಾರಿಯ ಇಂಜಿನಿಯರ್ಸ್‌ಆ್ಯಂಡ್ ಡೆವಲಪರ್ಸ್ ಕೌನ್ಸಿಲ್‌ನ್ನು ಉದ್ಘಾಟಿಸಿಬುಧವಾರ ಮಾತನಾಡಿದರು. ನಗರಗಳುದಿನೇದಿನೆ ಬೆಳೆಯುತ್ತಿವೆ. ಜೊತೆಗೆ ನಗರದಲ್ಲಿಬೃಹತ್ ಲೇಔಟ್‌ಗಳು, ಬೃಹತ್ ಕಟ್ಟಡಗಳು ನಿರ್ಮಾಣವಾಗುತ್ತಿವೆ.
ಅದಕ್ಕೆ ಜನತೆಗೆಅನುಕೂಲವಾಗುವ ರೀತಿಯಲ್ಲಿ ಸರ್ಕಾರರೂಪಿಸಿರುವ ನಿಯಮಗಳ ಪಾಲನೆ ಅಗತ್ಯ.ಅದಕ್ಕಾಗಿ ಬಿಲ್ಡರ್ಸ್‌ಗಳು ಸಂಬಂ ಸಿದ ಪ್ರಾಕಾರಗಳ ಅನುಮತಿ ಪಡೆದು ಲೇಔಟ್‌ಗಳನ್ನುಅಭಿವೃದ್ಧಿಪಡಿಸುವುದು ಅಗತ್ಯವಾಗಿದೆಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯಅಧ್ಯಕ್ಷ ಸಂಜೀವ ಪ್ರಸಾದ್, ನಮ್ಮ ಸಂಸ್ಥೆಡೆವಲಪರ್ಸ್ ಮತ್ತು ಸರ್ಕಾರದ ನಡುವೆಸೇತುವೆಯಾಗಿ ಕೆಲಸ ಮಾಡಲಿದೆ.
ಕಟ್ಟಡಗಳು, ಲೆಔಟ್, ರಸ್ತೆ ಮೊದಲಾದವುಗಳಸ್ವರೂಪ, ಮೂಲ ಸೌಕರ್ಯ, ನಗರಸುಂದರೀಕರಣ ಮೊದಲಾದವುಗಳ ಬಗ್ಗೆರೇರ ಕಾಯ್ದೆಯನ್ವವ ರೂಪಿಸಿಕೊಡಲಿದೆ.ಆ ಕುರಿತು ಇಂದು ನಡೆಯುವ ವಿಚಾರಸಂಕಿರಣದಲ್ಲಿ ಡೆವಲಪರ್ಸ್ ಮತ್ತು ಬಿಲ್ಡರ್‌ಗಳಿಗೆ ತಿಳಿವಳಿಕೆ ಮೂಡಿಸಲಾಗುವುದು ಎಂದು ತಿಳಿಸಿದರು.
ರಿಯಲ್ ಎಸ್ಟೇಟ್ ರೆಗ್ಯೂಲೇಟರಿಆಕ್ಟ್ ಬಗ್ಗೆ ಕಾಯ್ದೆ ಸಲಹೆಗಾರ ಮತ್ತು ಲೆಕ್ಕಪರಿಶೋಧಕ ವಿನಯ್ ತ್ಯಾಗರಾಜ್ ಮತ್ತುನ್ಯಾಯವಾದಿ ಈ. ಸುಹೀಲ್ ಅಹಮ್ಮದ್‌ವಿಚಾರ ಸಂಕಿರಣದಲ್ಲಿ ವಿವರಿಸಿದರು.ಸಭೆಯಲ್ಲಿ ಬುಡಾ ಅಧ್ಯಕ್ಷ ಪಿ. ಪಾಲಣ್ಣ,ಬಳ್ಳಾರಿ ಜಿಲ್ಲಾ ವಾಣಿಜ್ಯೋದ್ಯಮ ಮತ್ತುಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ್‌ರಾವ್, ಕಾರ್ಯದರ್ಶಿ ಯಶವಂತ್ ರಾಜ್,ಮಾಜಿ ಅಧ್ಯಕ್ಷ ಡಾ|ರಮೇಶ್ ಗೋಪಾಲ್,ವಿಕಾಸ್ ಜೈನ್ ಸೇರಿದಂತೆ ಹಲವರುಇದ್ದರು.