Advertisement

ಮಕ್ಕಳ ತಲೆಗೆ ಧರ್ಮಾಧಾರಿತ ವಿಷಬೀಜ

08:32 PM Jul 24, 2022 | Team Udayavani |

ಬಳ್ಳಾರಿ: ಶಿಕ್ಷಕರೂ ಕ್ರೀಡಾ ಚಟುವಟಿಕೆಯಲ್ಲಿಪಾಲ್ಗೊಳ್ಳುವ ಮೂಲಕ ತಮ್ಮ ಕೆಲಸದಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು.ದೈಹಿಕ ಮತ್ತು ಮಾನಸಿಕ ವೃದ್ಧಿ ಜೊತೆ ಜೊತೆಗೆಎಲ್ಲರೊಂದಿಗೆ ವಿಶ್ವಾಸ, ಪ್ರೀತಿ, ಸ್ನೇಹವೃದ್ಧಿಗೂಕ್ರೀಡಾಕೂಟಗಳು ಸಹಕಾರಿಯಾಗುತ್ತವೆಎಂದು ಪ್ರೊ| ಸಿದ್ದು ಪಿ. ಆಲಗೂರಹೇಳಿದರು.

Advertisement

ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಕ್ರೀಡಾ ಮೈದಾನದಲ್ಲಿಆಜಾದಿ ಕಾ ಅಮೃತ್‌ ಮಹೋತ್ಸವ 2022ಅಂಗವಾಗಿ ಹಮ್ಮಿಕೊಂಡಿದ್ದ “ವಿವಿ ಸಿಬ್ಬಂದಿಕ್ರೀಡಾಕೂಟ-2022’ಕ್ಕೆ ಚಾಲನೆ ನೀಡಿಅವರು ಮಾತನಾಡಿದರು. ಕ್ರೀಡಾಕೂಟದಲ್ಲಿಸೋಲು-ಗೆಲವುಗಳು ಸಾಮಾನ್ಯ. ಅವುಗಳಲ್ಲಿಪಾಲ್ಗೊಳ್ಳುವುದೇ ಮುಖ್ಯ. 2022-23ನೇಶೈಕ್ಷಣಿಕ ವರ್ಷದಿಂದ ವಿಶ್ವವಿದ್ಯಾಲಯದಸಿಬ್ಬಂದಿಗಳಿಗಾಗಿ ಕ್ರೀಡಾಕೂಟವನ್ನುಆಯೋಜನೆ ಮಾಡಲಾಗುವುದು ಎಂದುಹೇಳಿದರು.

ವಿವಿಯ ಎಲ್ಲ ಸ್ನಾತಕೋತ್ತರ ಕೇಂದ್ರಗಳಕಲಾ, ವಿಜ್ಞಾನ, ವಾಣಿಜ್ಯ, ಸಮಾಜ ವಿಜ್ಞಾನನಿಕಾಯದ ಬೋಧಕ ಹಾಗೂ ಬೋಧಕೇತರಸಿಬ್ಬಂದಿಗಾಗಿ ಎರಡು ದಿನಗಳ ಕಾಲಕ್ರಿಕೆಟ್‌, ಚೆಸ್‌, ಬ್ಯಾಡ್ಮಿಂಟನ್‌ (ಸಿಂಗಲ್ಸ್‌/ಡಬಲ್ಸ್‌), ಟೇಬಲ್‌ ಟೆನ್ನಿಸ್‌ (ಸಿಂಗಲ್ಸ್‌/ಡಬಲ್ಸ್‌), ಥ್ರೋಬಾಲ್‌ ಪಂದ್ಯಗಳನ್ನುಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ವಿವಿ ಕುಲಸಚಿವಪ್ರೊ| ಎಸ್‌.ಸಿ. ಪಾಟೀಲ್‌, ಮೌಲ್ಯಮಾಪನಕುಲಸಚಿವ ಪ್ರೊ| ರಮೇಶ್‌ ಓಲೇಕಾರ್‌,ವಿತ್ತಾ ಧಿಕಾರಿ ಡಾ| ಕೆ.ಸಿ. ಪ್ರಶಾಂತ್‌, ಡಾ|ಸಂಪತ್‌ ಕುಮಾರ ನೋಡಲ್‌ ಅಧಿ ಕಾರಿಗಳು,ಕ್ರೀಡಾ ವಿಭಾಗದ ಪ್ರಭಾರ ನಿರ್ದೇಶಕ ಡಾ|ಶಶಿಧರ್‌ ಕೆಲ್ಲೂರ್‌, ವಿಶ್ವವಿದ್ಯಾಲಯದವಿವಿಧ ವಿಭಾಗಗಳ ಡೀನರು, ಮುಖ್ಯಸ್ಥರು,ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next