Advertisement

ತಾಯಿ-ತಾಯ್ನಾಡನ್ನುಗೌರವಿಸಿ: ಸ್ವಾಮೀಜಿ

06:05 PM Jul 06, 2022 | Team Udayavani |

ಬಳ್ಳಾರಿ: ಹೆತ್ತ ತಾಯಿಯನ್ನು ಹೊತ್ತನಾಡು ಸ್ವರ್ಗಕ್ಕಿಂತ ಮಿಗಿಲಾದದ್ದು.ಅಂತಹ ತಾಯಿಯನ್ನು ಗೌರವಿಸಿಪೂಜಿಸಬೇಕು ಎಂದು ಕೊಟ್ಟೂರುಸ್ವಾಮಿ ಸಂಸ್ಥಾನಮಠದ ಜಗದ್ಗುರುಕೊಟ್ಟೂರು ಬಸವಲಿಂಗ ಮಹಾಸ್ವಾಮೀಜಿ ಹೇಳಿದರು.ತಾಲೂಕಿನ ಶ್ರೀಧರಗಡ್ಡೆಯ ಶಾಖಾವಿರಕ್ತ ಮಠದಲ್ಲಿ ಲಿಂ. ಜಗದ್ಗುರುಡಾ| ಸಂಗನಬಸವ ಮಹಾಸ್ವಾಮೀಜಿದಿವ್ಯಪ್ರಕಾಶದಲ್ಲಿ ಮಂಗಳವಾರ ನಡೆದಅಧ್ಯಾತ್ಮ ಪ್ರವಚನ ಮಂಗಲಮಹೋತ್ಸವಹಾಗೂ 501 ಮುತ್ತೆ$çದೆಯರಿಗೆ ಉಡಿತುಂಬುವ ಕಾರ್ಯಕ್ರಮದಲ್ಲಿ ಅವರುಮಾತನಾಡಿದರು.

Advertisement

ಇಂಥ ಉಡಿತುಂಬುವು ಕಾರ್ಯಕ್ರಮ ಮಾಡುವಮೂಲಕ ಮಠವು ಮಹಿಳೆಯರನ್ನುಗೌರವದಿಂದ ಕಾಣುತ್ತದೆ. ಪ್ರಸಕ್ತವರ್ಷ ಐದುನೂರ ಒಂದುತಾಯಂದಿರಿಗೆ ಉಡಿ ತುಂಬಲಾಗಿದೆ.ಹೆತ್ತ ತಾಯಿಯನ್ನು ಹೊತ್ತ ನಾಡುಸ್ವರ್ಗಕ್ಕಿಂತ ಮಿಗಿಲಾದದ್ದು. ಅಂಥತಾಯಿಯನ್ನು ಗೌರವಿಸಿ ಪೂಜಿಸಬೇಕುಎಂದರು.

ಕಂಪ್ಲಿ ಶಾಸಕ ಜೆ. ಎನ್‌. ಗಣೇಶಮಾತನಾಡಿ, ಹಲವು ವರ್ಷಗಳಿಂದಧಾರ್ಮಿಕ ಕ್ಷೇತ್ರವು ಸಾಮಾಜಿಕ ಶೈಕ್ಷಣಿಕಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸುತ್ತಿರುವಈ ಮಠಗಳಲ್ಲಿ ಕೊಟ್ಟೂರು ಸಂಸ್ಥಾನಮಠವೂ ಒಂದು. ಹೆಣ್ಣು ಮಕ್ಕಳನ್ನುಬಾಲ್ಯ ವಿವಾಹ ಮಾಡದೇ ಉನ್ನತಶಿಕ್ಷಣ ನೀಡುವಲ್ಲಿ ಎಲ್ಲರೂಮುಂದಾಗಬೇಕು. ಇತ್ತೀಚಿನ ದಿನಗಳಲ್ಲಿಶಿಕ್ಷಣಕ್ಕಿಂತ ಮಿಗಿಲಾದದ್ದು ಯಾವುದುಇಲ್ಲ. ಮಹಿಳೆಯರು ಎಲ್ಲ ಕ್ಷೇತ್ರದಲ್ಲಿತಾವು ಕಡಿಮೆಯಿಲ್ಲ ಎಂಬಂತೆ ಸಾಧಿಸಿದ್ದಾರೆ. ಆದ್ದರಿಂದ ಎಲ್ಲರಿಗೂ ಶಿಕ್ಷಣದೊರೆಯುವಂತೆ ಆಗಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next