Advertisement
ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿದ ಕೂಡ್ಲಿಗಿ ಶಾಸಕಎನ್.ವೈ. ಗೋಪಾಲಕೃಷ್ಣ, ಮಾಜಿ ಶಾಸಕ ನಾರಾಸೂರ್ಯನಾರಾಯಣರೆಡ್ಡಿ, ವಾಲ್ಮೀಕಿ ಪೀಠದಮರಡಿ ಜಂಬಯ್ಯ ನಾಯಕ ಅವರು, ಸತ್ಯಾಗ್ರಹಕ್ಕೆಕೂತಿದ್ದ ಯುವ ಮುಖಂಡರಾದ ಬಿ.ಆರ್.ಎಲ್.ಶ್ರೀನಿವಾಸ್, ಗಡ್ಡಂ ತಿಮ್ಮಪ್ಪ ಅವರಿಗೆ ಮನವೊಲಿಸಿ ಎಳೆನೀರು ಕುಡಿಸುವ ಮೂಲಕ ಆಮರಣಾಂತ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಅಂತ್ಯಗೊಳಿಸಿದರು.
Related Articles
Advertisement
ಅವರು ಜಯಗಳಿಸಿ ಬಂದಿದ್ದಾರೆ. ಅಲ್ಲಿವರೆಗೂಶ್ರೀನಿವಾಸ್ ಎಂದರೆ ಯಾರಿಗೂ ಗೊತ್ತಿರಲಿಲ್ಲ.ವಾಲ್ಮೀಕಿ ಶ್ರೀಗಳಿಗೆ ನೂರು ಕೆಜಿ ತುಲಾಭಾರಮಾಡಿಸಿದ್ದೇನೆ. ಸಮುದಾಯದ ಬೇಡಿಕೆನ್ಯಾಯಯುತವಾಗಿದೆ ಎಂದು ತಿಳಿಸಿದರು.
ವಾಲ್ಮೀಕಿ ಪೀಠದ ಧರ್ಮದರ್ಶಿ ಮರಡಿಜಂಬಯ್ಯ ನಾಯಕ ಮಾತನಾಡಿ, ಅ.20ರಂದು ನಡೆದ ವಾಲ್ಮೀಕಿ ಜಯಂತಿಸರ್ಕಾರಿ ಕಾರ್ಯಕ್ರಮವನ್ನು ಬಹಿಷ್ಕಾರ ಹಾಕಿಆಮರಣಾಂತ ಸತ್ಯಾಗ್ರಹ ಕೂತಿರುವುದುಬಳ್ಳಾರಿಯಲ್ಲೇ ಮೊದಲು. ಈ ಮೊದಲುಸ್ವಾಮೀಜಿಗಳ ನೇತೃತ್ವದಲ್ಲಿ 20 ದಿನಗಳ ಕಾಲ400 ಕಿಮೀ ಪಾದಯಾತ್ರೆ ನಡೆಸಿ, ವಿಧಾನಸೌಧಕ್ಕೆಮುತ್ತಿಗೆ ಹಾಕಿದ್ದೇವೆ.
1958ರಿಂದ ಸಮುದಾಯಕ್ಕೆಶೇ.3 ರಷ್ಟು ಮೀಸಲಾತಿ ನೀಡಲಾಗಿದ್ದು, ಅದುಇಂದಿಗೂ ಮುಂದುವರೆದಿದೆ. ಬಾಕಿ ಉಳಿದಿರುವಮೀಸಲಾತಿಯನ್ನು ನೀಡುವಂತೆ ಕಳೆದ 30ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂಸರ್ಕಾರಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ಮೀಸಲಾತಿಪ್ರಮಾಣ ಶೇ.50 ಮೀರಬಾರದು ಎಂದು ಸುಪ್ರೀಂಕೋರ್ಟ್ ಆದೇಶ ಹೊರಡಿಸಿದ್ದರೂ, ಬೇರೆ ರಾಜ್ಯಗಳಲ್ಲಿ ಹೆಚ್ಚಿಸಲಾಗಿದೆ.
ಈ ನಿಟ್ಟಿನಲ್ಲಿರಾಜ್ಯ ಸರ್ಕಾರವು ಕ್ರಮಕೈಗೊಳ್ಳಬೇಕು ಎಂದವರುಆಗ್ರಹಿಸಿದರು.ಸತ್ಯಾಗ್ರಹದಲ್ಲಿ ವಿ.ಎಸ್.ಶಿವಶಂಕರ್,ಮುಖಂಡರಾದ ಅಸುಂಡಿ ಹೊನ್ನೂರಪ್ಪ,ಜಗನ್ನಾಥ್, ವಿಜಯಕುಮಾರ್, ಎರಗುಡಿಮಲ್ಲಯ್ಯ, ರುದ್ರಪ್ಪ, ಹುಲಿಗೇಶಿ,ವಿಜಯಕುಮಾರ್ ಸೇರಿದಂತೆ ಸಮುದಾಯದನೂರಾರು ಜನರು ಇದ್ದರು.