Advertisement

ಬಾಕಿಯಿರುವ ಕೋವಿಡ್‌ ಭತ್ಯೆ ನೀಡಿ

04:57 PM Jun 28, 2022 | Team Udayavani |

ಬಳ್ಳಾರಿ: ವಿಮ್ಸ್‌ನ ಗುತ್ತಿಗೆ ನೌಕರರಿಗೆ ಬಾಕಿಯಿರುವಕೋವಿಡ್‌ ಭತ್ಯೆ ನೀಡುವಂತೆ ಆಗ್ರಹಿಸಿ ನಗರದ ಡಿಸಿಕಚೇರಿ ಆವರಣದಲ್ಲಿ ಎಐಯುಟಿಯುಸಿ ಸಂಯೋಜಿತವಿಮ್ಸ್‌ ಗುತ್ತಿಗೆ ನೌಕರರ ಸಂಘದಿಂದ ಸೋಮವಾರಪ್ರತಿಭಟನೆ ನಡೆಸಲಾಯಿತು.

Advertisement

ವಿಮ್ಸ್‌ನಲ್ಲಿ ಗುತ್ತಿಗೆ ಆಧಾರಿತ ನೌಕರರು,ಮಹಮ್ಮಾರಿ ಕೋವಿಡ್‌ ಸಂದರ್ಭದಲ್ಲೂ ತಮ್ಮಪ್ರಾಣದ ಹಂಗು ತೊರೆದು ಕೆಲಸ ನಿರ್ವಹಿಸಿದ್ದಾರೆ.ಕೋವಿಡ್‌ ಸಂದರ್ಭದಲ್ಲಿ ದುಡಿದ, ಒಂದು ಭಾಗದಷ್ಟುಗುತ್ತಿಗೆ ನೌಕರರಿಗೆ ಕೋವಿಡ್‌ ಭತ್ಯೆ ನೀಡಿರುವುದುಸಮಾಧಾನಕರ ಅಂಶವಾಗಿದ್ದರೂ, ಇನ್ನು ಸಾಕಷ್ಟುಗುತ್ತಿಗೆ ನೌಕರರಿಗೆ ಕೋವಿಡ್‌ ಭತ್ಯೆ ಈವರೆಗೂನೀಡಿಲ್ಲ. ಕಳೆದ 5-6 ತಿಂಗಳುಗಳಿಂದ ಒಂದಲ್ಲಾಒಂದು ಕಾರಣಗಳನ್ನು ಹೇಳುತ್ತಾ, ವಿಮ್ಸ್‌ ಆಡಳಿತಕೋವಿಡ್‌ ಭತ್ಯೆ ನೀಡುವುದನ್ನು ಮುಂದೂಡುತ್ತಲೇಇದೆ. ರಾಜ್ಯ ಸರ್ಕಾರ ಭತ್ಯೆಯ ಹಣ ಇನ್ನು ಕಳುಹಿಸಿಲ್ಲ.ಕೋವಿಡ್‌ ಭತ್ಯೆ ಪಡೆಯಬೇಕಾದವರ ಪಟ್ಟಿಯನ್ನುಸಹ ಈಗಾಗಲೇ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂಬಸಿದ್ಧ ಉತ್ತರ ವಿಮ್ಸ್‌ ಆಡಳಿತದಿಂದ ಬರುತ್ತಿದೆ ಎಂದುಪ್ರತಿಭಟನಾಕಾರರು ದೂರಿದ್ದಾರೆ.

ತಮ್ಮ ಪ್ರಾಣಪಣಕ್ಕಿಟ್ಟು ದುಡಿದ ಗುತ್ತಿಗೆ ನೌಕರರನ್ನು ವಿಮ್ಸ್‌ಆಡಳಿತ ಈ ರೀತಿ ನಡೆಸಿಕೊಳ್ಳುತ್ತಿರುವುದು ನಿಜಕ್ಕೂಖಂಡನೀಯ. ಕೋವಿಡ್‌ ಭತ್ಯೆ ನೀಡುವ ಬೇಡಿಕೆಯನ್ನುಈಡೇರಿಸುವ ನಿಟ್ಟಿನಲ್ಲಿ ಜಿಲ್ಲಾ ಧಿಕಾರಿಗಳು, ವೈದ್ಯಕೀಯಶಿಕ್ಷಣ ಸಚಿವರು ಹಾಗೂ ಇಲಾಖೆಯ ಪ್ರಧಾನಕಾರ್ಯದರ್ಶಿಗಳು ಮಧ್ಯಪ್ರವೇಶ ಮಾಡಬೇಕಾಗಿ ಈಮೂಲಕ ಒತ್ತಾಯಿಸುತ್ತೇವೆ. ಒಂದು ವೇಳೆ ಸಮಸ್ಯೆಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಕುಟುಂಬಸಮೇತ ವಿಮ್ಸ್‌ ಆವರಣದಲ್ಲಿ ಪ್ರತಿಭಟನಾ ಧರಣಿನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.ಬಳಿಕ ಜಿಲ್ಲಾ ಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಮನವಿ ಸ್ವೀಕರಿಸಿದ ಡಿಸಿ ಪವನ್‌ಕುಮಾರ್‌ಮಾಲಪಾಟಿ, ಕೋವಿಡ್‌ ಭತ್ಯೆ ನೀಡುವಂತೆ ಸಚಿವರಿಗೆ,ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿಗಳಿಗೆ ಪತ್ರಬರೆಯುವುದಾಗಿ ಹಾಗೂ ವಿಮ್ಸ್‌ ನಿರ್ದೇಶಕರೊಂದಿಗೆಮಾತನಾಡುವುದಾಗಿ ಭರವಸೆ ನೀಡಿದ್ದಾರೆ.ಪ್ರತಿಭಟನೆಯಲ್ಲಿ ಎಐಯುಟಿಯುಸಿ ಜಿಲ್ಲಾಕಾರ್ಯದರ್ಶಿ ಎ.ದೇವದಾಸ್‌, ಮುಖಂಡರಾದ ಡಾ|ಎನ್‌. ಪ್ರಮೋದ್‌, ಶಾಂತಾ, ಸುರೇಶ್‌, ಗುತ್ತಿಗೆ ನೌಕರರಸಂಘದ ಚಿಟ್ಟೆಮ್ಮ, ದುರ್ಗಮ್ಮ, ನಾಗಮ್ಮ, ಅಂಜಲಿ,ಜಯರಾಜ್‌, ಅಂಜಿನಿ, ನೌಕರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next