Advertisement

ಮಕ್ಕಳಿಗೆ ಕಡ್ಡಾ ಯ ಕೋವಿಡ್‌ ಲಸಿಕೆ ಹಾಕಿಸಿ

08:10 PM Mar 17, 2022 | Team Udayavani |

ಬಳ್ಳಾರಿ: ಭಾರತ ಸರ್ಕಾರವು ಆರಂಭಿಸಿರುವಕೋವಿಡ್‌ ಲಸಿಕಾ ಅಭಿಯಾನದಲ್ಲಿ 12ರಿಂದ14 ವರ್ಷದೊಳಗಿನ ಎಲ್ಲ ಮಕ್ಕಳಿಗೆಕಾರ್ಬಿವ್ಯಾಕ್ಸ್‌ ಲಸಿಕೆಯನ್ನು ನೀಡಲುಉದ್ದೇಶಿಸಿದ್ದು, ಪಾಲಕರು ತಮ್ಮ ಮಕ್ಕಳಿಗೆತಪ್ಪದೇ ಲಸಿಕೆಯನ್ನು ಹಾಕಿಸಬೇಕು.ಇದರಿಂದ ಕೋವಿಡ್‌ ಸಾಂಕ್ರಾಮಿಕವನ್ನುತಡೆಗಟ್ಟಲು ಸಾಧ್ಯವಾಗುತ್ತದೆ ಎಂದುಜಿಲ್ಲಾ ಆರೋಗ್ಯಾ ಧಿಕಾರಿ ಡಾ| ಎಚ್‌.ಎಲ್‌.ಜನಾರ್ಧನ ಹೇಳಿದರು.ನಗರದ ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾಡಳಿತ,ಜಿಪಂ, ಜಿಲ್ಲಾ ಆರೋಗ್ಯ ಇಲಾಖೆಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ12 ರಿಂದ 14 ವರ್ಷದೊಳಗಿನ ಮಕ್ಕಳಿಗೆಕಾರ್ಬಿವ್ಯಾಕ್ಸ್‌ ಲಸಿಕೆ ನೀಡಿಕೆ ಹಾಗೂ60 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರಿಗೆಕೋವಿಡ್‌ ಲಸಿಕಾ ಅಭಿಯಾನ ಉದ್ಘಾಟಿಸಿಮಾತನಾಡಿದರು.

Advertisement

2010 ಮಾ.15ರ ಪೂರ್ವದಲ್ಲಿ ಜನಿಸಿದಎಲ್ಲ ಮಕ್ಕಳಿಗೆ ಇಂದಿನಿಂದ ಆರಂಭವಾಗುವಅಭಿಯಾನದಲ್ಲಿ ಕಾರ್ಬಿವ್ಯಾಕ್ಸ್‌ ಲಸಿಕೆಯನ್ನುನೀಡಲಾಗುತ್ತಿದ್ದು, 7ನೇ, 8ನೇ ಹಾಗೂ 9ನೇತರಗತಿಯಲ್ಲಿ ಓದುತ್ತಿರುವ ತಮ್ಮ ಎಲ್ಲಮಕ್ಕಳಿಗೆ ತಪ್ಪದೇ ಲಸಿಕೆಯನ್ನು ಹಾಕಿಸಬೇಕುಎಂದರು.60 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರುಈಗಾಗಲೇ ತಾವು ಎರಡನೇ ಡೋಸ್‌ಲಸಿಕೆ ಪಡೆದು 9 ತಿಂಗಳು ಪೂರ್ಣವಾದಲ್ಲಿತಪ್ಪದೇ ಮುನ್ನೆಚ್ಚರಿಕಾ ಲಸಿಕೆಯನ್ನುಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.

ಜಿಲ್ಲಾ ಆರ್‌ಸಿಎಚ್‌ ಅಧಿ ಕಾರಿಡಾ| ಆರ್‌. ಅನಿಲ್‌ ಕುಮಾರ್‌ ಮಾತನಾಡಿ,ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 66,150 ಹಾಗೂವಿಜಯನಗರ ಜಿಲ್ಲೆಯಲ್ಲಿ 59,726 ಮಕ್ಕಳುಸೇರಿದಂತೆ ಒಟ್ಟು 1,25,876 ಮಕ್ಕಳಿಗೆಲಸಿಕೆಯನ್ನು ನೀಡಲು ಉದ್ದೇಶಿಸಲಾಗಿದೆಮತ್ತು 60 ವರ್ಷ ಮೇಲ್ಪಟ್ಟ ನಾಗರಿಕರಿಗೆಬಳ್ಳಾರಿ ಜಿಲ್ಲೆಯಲ್ಲಿ 1,20,589 ಹಾಗೂವಿಜಯನಗರ ಜಿಲ್ಲೆಯಲ್ಲಿ 1,09,693ಹಾಕುವ ಗುರಿಯನ್ನು ಹೊಂದಲಾಗಿದೆಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next