Advertisement

ಸಾರ್ವತ್ರಿಕ ಮುಷ್ಕರಕ್ಕೆ ಬಳ್ಳಾರಿಯಲ್ಲಿ ಬೆಂಬಲ

04:36 PM Mar 10, 2022 | Team Udayavani |

ಬಳ್ಳಾರಿ: ಕೇಂದ್ರ ಬಿಜೆಪಿ ಸರ್ಕಾರದ ಕಾರ್ಮಿಕವಿರೋಧಿ ಕಾರ್ಮಿಕ ಸಂಹಿತೆಗಳನ್ನುರದ್ದುಗೊಳಿಸಲು ಆಗ್ರಹಿಸಿ ಖಾಸಗೀಕರಣ ಹಾಗೂಇತರೆ ಜನ ವಿರೋಧಿ ನೀತಿಗಳನ್ನು ವಿರೋಧಿ ಸಿ,ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆಒತ್ತಾಯಿಸಿ ಮಾ.28, 29 ರಂದು ಎರಡುದಿನಗಳ ಕಾಲ ದೇಶಾದ್ಯಂತ ಸಾರ್ವತ್ರಿಕ ಮುಷ್ಕರಕ್ಕೆಕರೆ ನೀಡಲಾಗಿದ್ದು, ಬಳ್ಳಾರಿ ಜಿಲ್ಲೆಯಲ್ಲೂಹಮ್ಮಿಕೊಳ್ಳಲಾಗುವುದು ಎಂದು ಕಾರ್ಮಿಕಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು)ಮುಖಂಡರಾದ ಜೆ.ಸತ್ಯಬಾಬು, ಎ.ದೇವದಾಸ್‌,ಆದಿಮೂರ್ತಿ, ಕೆ.ತಾಯಪ್ಪ ಹೇಳಿದರು.

Advertisement

ನಗರದ ಪತ್ರಿಕಾಭವನದಲ್ಲಿ ಬುಧವಾರಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಸರ್ಕಾರಗಳ ಈ ಜನವಿರೋಧಿ ಮತ್ತುಕಾರ್ಪೋರೇಟ್‌ ಪರ ನೀತಿ ನಿಯಮಾವಳಿಗಳವಿರುದ್ಧ ಒಂದು ಒಗ್ಗಟ್ಟಿನ ಮತ್ತುದೀರ್ಘ‌ಕಾಲಿನ ಚಳವಳಿ ಬೆಳೆಸುವುದು ಇವತ್ತಿನಅವಶ್ಯಕತೆಯಾಗಿದೆ. ಹಲವು ಹೋರಾಟಗಳಿಂದಗಳಿಸಿದ್ದ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಫ್ಯಾಸಿವಾದಿಬಿಜೆಪಿ ಸರ್ಕಾರದ ದಾಳಿಗಳನ್ನು ಎದುರಿಸಲುಜನರು ಬೀದಿಗಿಳಿಯುತ್ತಿದ್ದಾರೆ ಎಂದರು.

ಈ ಹಿನ್ನೆಲೆಯಲ್ಲಿ ಕೇಂದ್ರೀಯ ಕಾರ್ಮಿಕಸಂಘಟನೆಗಳು ಕರೆ ನೀಡಿರುವ ಮಾರ್ಚ್‌28 ಮತ್ತು 29ರಂದು ರಾಷ್ಟ್ರವ್ಯಾಪಿ ಸಾರ್ವತ್ರಿಕಮುಷ್ಕರಕ್ಕೆ ಎಲ್ಲ ಯೂನಿಯನ್‌ಗಳ ಕಾರ್ಮಿಕರುಭಾಗವಹಿಸಿ ಯಶಸ್ವಿಗೊಳಿಸುವ ಮೂಲಕಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು.ಖಾಸಗೀಕರಣ ಸ್ಥಗಿತಗೊಳಿಸಬೇಕು.

ಎನ್‌ಎಂಪಿಯನ್ನು ರದ್ದುಗೊಳಿಸಬೇಕು. ತೆರಿಗೆಪಾವತಿಸದ ಕುಟುಂಬಗಳಿಗೆ ತಿಂಗಳಿಗೆ 7500 ರೂ.ಗಳ ಪರಿಹಾರ, ಆದಾಯ ಬೆಂಬಲ ನೀಡಬೇಕು.ಉದ್ಯೋಗ ಖಾತ್ರಿಯನ್ನು ನಗರ ಪ್ರದೇಶಗಳಿಗೂವಿಸ್ತರಿಸಬೇಕು ಎಂದು ರಾಜ್ಯ, ಕೇಂದ್ರ ಸರ್ಕಾರಗಳಮೇಲೆ ಒತ್ತಡ ಹೇರಬೇಕು ಎಂದವರುಕೋರಿದರು.ಸುದ್ದಿಗೋಷ್ಠಿಯಲ್ಲಿ ಎಲ್‌ಐಸಿ ಯೂನಿಯನ್‌ಕಾರ್ಯದರ್ಶಿ ಡಿ.ವಿ.ಸೂರ್ಯನಾರಾಯಣ,ಎಐಯುಟಿಯುಸಿ ಮುಖಂಡರಾದಡಾ| ಪ್ರಮೋದ್‌, ಎ.ಶಾಂತಾ, ಕಾರ್ಮಿಕಮುಖಂಡರಾದ ಕಾಂತಯ್ಯ, ಪತ್ತಾರ್‌, ಪಾಂಡು,ಸಂಗನಕಲ್ಲು ಕಟ್ಟೆಬಸಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next