ಬಳ್ಳಾರಿ: ತೀವ್ರ ಕುತೂಹಲ ಕೆರಳಿಸಿದ್ದ ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಆಗಿ ಬಿ.ಶ್ವೇತಾ ಅವರು ಆಯ್ಕೆಯಾಗಿದ್ದು, ಒಂದು ತಿಂಗಳ ಮೇಯರ್ ಡ್ರಾಮಾಗೆ ಕೊನೆಗೂ ತೆರೆಬಿದ್ದಂತಾಗಿದೆ.
ಪಾಲಿಕೆಯ 22ನೇ ಅವಧಿಯ ಉಳಿದ 2.5 ತಿಂಗಳ ಅವಧಿಗಾಗಿ ಮೇಯರ್ ಆಯ್ಕೆಗೆ ಪೈಪೋಟಿ ಏರ್ಪಟ್ಟ ಹಿನ್ನೆಲೆಯಲ್ಲಿ ತೀವ್ರ ಕಸರತ್ತು ನಡೆದಿತ್ತು. ನ.28 ರಂದು ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಪಕ್ಷದ ಬಿ.ಶೇತ್ವಾ, ವಿ.ಕುಬೇರ, ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಸದಸ್ಯ ಶ್ರೀನಿವಾಸಲು ಮಿಂಚು, ಬಿಜೆಪಿಯ ಹನುಮಂತ ಗುಡಿಗಂಟೆ ಅವರು ನಾಮಪತ್ರ ಸಲ್ಲಿಸಿದ್ದರು. ಅಂದು ಚುನಾವಣೆಯನ್ನು ಅಲ್ಲಿಗೆ ಮೊಟಕುಗೊಳೊಸಿ ಮುಂದೂಡಲಾಗಿತ್ತು.
ಮೇಯರ್ ಸ್ಥಾನಕ್ಕಾಗಿ ಪಕ್ಷದ ಸದಸ್ಯರಲ್ಲಿ ಏರ್ಪಟ್ಟ ಭಿನ್ನಮತದ ಹಿನ್ನೆಲೆಯಲ್ಲಿ ಡಿ.19 ರಂದು ನಿಗದಿಯಾಗಿದ್ದ ಚುನಾವಣೆಯನ್ನು ಪುನಃ ಎರಡನೇ ಬಾರಿಗೂ ಮುಂದೂಡಲಾಯಿತು. ಇದೀಗ ಮೂರನೇ ಜ.10 ರಂದು ಬುಧವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಕೈಗೊಂಡಿರುವ ನಿರ್ಣಯದಂತೆ ನಾಮಪತ್ರ ಸಲ್ಲಿಸಿದ್ದ ಮೂವರಲ್ಲಿ ಶ್ರೀನಿವಾಸ ಮಿಂಚು, ವಿ.ಕುಬೇರ ಅವರು ತಮ್ಮ ನಾಮಪತ್ರವನ್ನು ಹಿಂಪಡೆದರು.
ಇದನ್ನೂ ಓದಿ:Heart Attack: ಕ್ರಿಕೆಟ್ ಆಡುವ ವೇಳೆ ಹೃದಯಾಘಾತ… ಆಸ್ಪತ್ರೆ ದಾರಿಯಲ್ಲೇ ಕೊನೆಯುಸಿರು
ಬಳಿಕ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 26 ಸದಸ್ಯರು, ಸಚಿವರು, ಶಾಸಕರು, ಸಂಸದರು ಸೇರಿ 29 ಮತಗಳು ಪಡೆದ ಕಾಂಗ್ರೆಸ್ ಬಿ.ಶ್ವೇತಾ ಅವರು ಮೇಯರ್ ಆಗಿ ಆಯ್ಕೆಯಾದರು. ಕಳೆದ ಎರಡು ತಿಂಗಳ ಮೇಯರ್ ಆಯ್ಕೆ ಡ್ರಾಮಾಕ್ಕೆ ತೆರೆ ಎಳೆದಿದ್ದಾರೆ.