Advertisement

ಪತ್ರಕರ್ತರಿಗೆ ವಿಶೇಷ ರಕ್ಷಣೆ ಅಗತ್ಯ: ಫಾ|ಡಿಸೋಜಾ

04:06 PM Jul 19, 2019 | Naveen |

ಭಾಲ್ಕಿ: ಪತ್ರಕರ್ತರು ಜೀವದ ಹಂಗು ತೊರೆದು ಕೆಲವು ಸಮಸ್ಯಾತ್ಮಕ ಸುದ್ದಿಗಳನ್ನು ಪ್ರಕಟಿಸುತ್ತಾರೆ. ಅಂತಹ ಸಂದರ್ಭದಲ್ಲಿ ಸರ್ಕಾರ ಪತ್ರಕರ್ತರಿಗೆ ವಿಶೇಷ ರಕ್ಷಣೆ ನಿಡುವುದು ಅಗತ್ಯ ಎಂದು ಏಸು ನಿಲಯದ ನಿರ್ದೇಶಕ ಫಾದರ್‌ ಕ್ಲೇರಿ ಡಿಸೋಜಾ ಹೇಳಿದರು.

Advertisement

ಪಟ್ಟಣದ‌ ಏಸು ನಿಲಯದಲ್ಲಿ ಆರ್ಬಿಟ್ ಸಂಸ್ಥೆ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸಮಾಜ ಸುಧಾರಣೆಯಲ್ಲಿ ಪತ್ರಕರ್ತರ ಕಾರ್ಯ ಶ್ರೇಷ್ಠವಾಗಿದೆ. ವರ್ತಮಾನ ಪತ್ರಿಕೆಗಳು ಸಮಾಜದ ಸಿಹಿ-ಕಹಿ ಘಟನೆಗಳನ್ನು ಯಥಾವತ್ತಾಗಿ ಪ್ರಕಟಿಸಿ ಸಮಾಜವನ್ನು ಜಾಗೃತಗೊಳಿಸುತ್ತವೆ. ಕಾರಣ ಪತ್ರಿಕೆಗಳು ಸಮಾಜದ ಕನ್ನಡಿಯಾಗಿವೆ ಎಂದರು. ಆರ್ಬಿಟ್ ಸಂಸ್ಥೆಯು ಸುಮಾರು 25 ವರ್ಷಗಳಿಂದ ಎಚ್ಐವಿ ಸೊಂಕು ಪೀಡಿತರಿಗೆ, ಮಾನಸಿಕ ಅಸ್ವಸ್ಥರಿಗೆ, ಅಂಗವಿಕಲರಿಗೆ, ಕುಷ್ಠರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುತ್ತಿದೆ. ಮಹಿಳಾ ಸಬಲೀಕರಣಕ್ಕಾಗಿ ಸ್ವಸಹಾಯ ಸಂಘಗಳ ಸ್ಥಾಪನೆ, ನೀರಿನ ಬರ ನೀಗಿಸಲು ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಸಲಾಗುತ್ತಿದೆ ಎಂದರು.

ನಿಲಯದ ಮೂಲಕ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ವ್ಯವಸ್ಥೆ ಮಾಡಲಾಗಿದೆ. ಚರ್ಚ್‌ನಲ್ಲಿ ನಡೆಯುವ ಧಾರ್ಮಿಕ ಕಾರ್ಯಗಳನ್ನು ಎಲ್ಲ ಪತ್ರಕರ್ತರು ಉತ್ತಮ ರೀತಿಯಿಂದ ಪ್ರಕಟಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಪತ್ರಕರ್ತರ ಸಂಘದ ಅಧ್ಯಕ್ಷ ಅಶೋಕ ರಾಜೋಳೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸನ್ಮಾನ: ಇದೇ ವೇಳೆ ಪತ್ರಕರ್ತರಾದ ಚಂದ್ರಶೇಖರ ಎಮ್ಮೆ, ಗಣಪತಿ ಬೋಚರೆ, ರಾಜೇಶ ಮುಗಟೆ, ಪ್ರದೀಪ ಬಿರಾದಾರ, ದಿಲೀಪ ಜೋಳದಾಪ್ಕೆ, ಸಂತೋಷ ಹಡಪದ ಅವರನ್ನು ಆರ್ಬಿಟ್ ಸಂಸ್ಥೆಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸಿಸ್ಟರ್‌ ಜ್ಯೋತಿ, ಸಿಸ್ಟರ್‌ ಮಿನಿ, ಫಾದರ್‌ ದೀಪಕ, ಫಾದರ ಪ್ರಭು, ಫಾದರ್‌ ಪ್ರವೀಣ ಉಪಸ್ಥಿತರಿದ್ದರು. ಸಿಸ್ಟರ್‌ ಶೋಭಾ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next