Advertisement

ಭಕ್ತರ ವ್ಯಸನ ಮುಕ್ತಿಗೆ ಭಿಕ್ಷೆ ಬೇಡುವ ರಾಜೇಶ್ವರ ಶ್ರೀ

04:54 PM May 01, 2019 | Naveen |

ಭಾಲ್ಕಿ: ಸ್ವಾಮಿಗಳೆಂದರೆ ಭಕ್ತರಿಂದ ಪಾದಪೂಜೆ ಮಾಡಿಸಿಕೊಳ್ಳುವುದಕ್ಕೆ ಸೀಮಿತ ಎನ್ನುವ ನುಡಿಗೆ ಅಪವಾದ ಮೆಹಕರ ಶ್ರೀಗಳು ಭಕ್ತರ ಶ್ರೇಯಸ್ಸೇ ತಮ್ಮ ಶ್ರೇಯಸ್ಸು ಎಂದು ಹಗಲಿರುಳು ಭಕ್ತರ ಉದ್ಧಾರಕ್ಕಾಗಿ ದುಡಿಯುತ್ತಲಿದ್ದಾರೆ.

Advertisement

ಶ್ರೀಗಳು ಕಟ್ಟಿಮನಿ ಸಂಸ್ಥಾನ ಹಿರೇಮಠಗಳಾದ ಮೆಹಕರ, ತಡೋಳಾ, ರಾಜೇಶ್ವರ, ಡೊಣಗಾಪೂರ ಮಠಗಳ ಪೀಠಾಕ್ಷರಾಗಿ ತಮ್ಮ ಭಕ್ತರಿಗೆ ಉತ್ತಮ ಮಾರ್ಗ ದರ್ಶನ ಮಾಡುವುದರೊಂದಿಗೆ ಅವರ ಆರೋಗ್ಯದ ಕಡೆಗೂ ಗಮನ ನೀಡುತ್ತಿರುವುದು ಪ್ರಶಂಶನೀಯವಾಗಿದೆ.

ಮೆಹಕರ ಗ್ರಾಮದಲ್ಲಿ ನೂರಾರು ಮಹಾತ್ಮರ ಮೂರ್ತಿಗಳನ್ನು ಸ್ಥಾಪಿಸಿದ್ದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ಸರ್ಕಾರ ಮಾಡಲಾಗಂದತಹ ಕಾರ್ಯವನ್ನು ಶ್ರೀಗಳು ಮಾಡಿದರು. ಎಲ್ಲ ಧರ್ಮಿಯರನ್ನು ಒಂದು ಗೂಡಿಸಿ, ಮಹಾನ್‌ ಪುರುಷರ ಮೂರ್ತಿಗಳನ್ನು ಒಂದೇ ಸ್ಥಳದಲ್ಲಿ ಸ್ಥಾಪಿಸಿ, ಗ್ರಾಮದ ರಸ್ತೆಗಳನ್ನು ಸುಗಮ ಸಂಚಾರಕ್ಕೆ ಅಣಿ ಮಾಡಿಕೊಟ್ಟರು.

ಇದೇ ಗ್ರಾಮದಲ್ಲಿ ಒಂದು ಸಲ ಒಬ್ಬ ಮಹಾನ್‌ ಪುರುಷರ ಮೂರ್ತಿ ತೆಗೆದಿದ್ದಕ್ಕಾಗಿ ತಹಸೀಲ್ದಾರ್‌ ಅವರ ಜೀಪ್‌ ಸುಟ್ಟ ಘಟನೆ ನಡೆದಿತ್ತು. ಇಂತಹ ಪರಿಸ್ಥಿತಿ ಇರುವ ಗ್ರಾಮದಲ್ಲಿ ಶ್ರೀಗಳು ಎಲ್ಲರನ್ನೂ ಒಟ್ಟುಗೂಡಿಸಿದ್ದು ಮಹಾನ್‌ ಕಾರ್ಯವಾಗಿದೆ.

ಸದ್ಯದಲ್ಲಿ ಶ್ರೀಗಳು ತಮ್ಮ ಗ್ರಾಮಗಳ ಭಕ್ತರ ಆರೋಗ್ಯ ವೃದ್ಧಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ದಸರಾ ಸಮಯದಲ್ಲಿ ಸುಮಾರು ದಿವಸಗಳಿಂದ ತಾಲೂಕಿನ ಡೊಣಗಾಪೂರ ಗ್ರಾಮದಲ್ಲಿ ಉಳಿದು, ಗ್ರಾಮದ ಎಲ್ಲಾ ಧರ್ಮಿಯರ ಓಣಿಗಳಿಗೆ ಸಂಪರ್ಕಿಸಿ, ಅಲ್ಲಿಯ ಜನರನ್ನು ವ್ಯಸನ ಮುಕ್ತಗೊಳಿಸಿದ್ದಾರೆ. ಇದರಿಂದ ಭಕ್ತರ ಆರೋಗ್ಯ ದೊಂದಿಗೆ ಆರ್ಥಿಕ ಪರಿಸ್ಥಿತಿಯೂ ಸುಧಾರಿಸಿದೆ.

Advertisement

ಎಲ್ಲರೂ ತಿಳಿದುಕೊಳ್ಳುವ ಹಾಗೆ ಶ್ರೀಗಳು ಒಂದು ಧರ್ಮಕ್ಕೆ ಅಂಟಿಕೊಳ್ಳದೇ ಗ್ರಾಮದ ಎಲ್ಲರೂ ಸುಖವಾಗಿರಬೇಕು ಎನ್ನುವ ಉದ್ದೇಶದಿಂದ ಮಾಡುತ್ತಿರುವ ಕಾರ್ಯ ಎಲ್ಲರೂ ಮೆಚ್ಚುವಂತಹದಾಗಿದೆ.

ಭಕ್ತರೇ ನಮ್ಮ ಆಸ್ತಿ. ಮಠದಲ್ಲಿರುವ ಎಲ್ಲ ಆಸ್ತಿಗಿಂತಲೂ ಭಕ್ತರ ಆರೋಗ್ಯ ನಮಗೆ ಮುಖ್ಯ. ಹೀಗಾಗಿ ಭಕ್ತರು ಆರೋಗ್ಯವಂತರಾಗಿರಬೇಕಾದರೆ ಅವರು ತಮ್ಮ ಎಲ್ಲಾ ವ್ಯಸನಗಳಿಂದ ದೂರವಿರಬೇಕು. ಆಗ ಮಾತ್ರ ಅವರು ಆರೋಗ್ಯವಾಗಿದ್ದು, ಅವರ ಆರ್ಥಿಕ ಪರಿಸ್ಥಿತಿಯೂ ಸುಧಾರಿಸುತ್ತದೆ. ಈ ನಿಟ್ಟಿನಲ್ಲಿ ನಾವು ನಮ್ಮ ಭಕ್ತರ ಹತ್ತಿರ ಅವರ ವ್ಯಸನಗಳ ಭಿಕ್ಷೆ ಬೇಡುತ್ತಿದ್ದೇನೆ. ಮಠಾಧಿಧೀಶರೆಂದರೆ ಮಠ ಬೆಳೆಸುವುದಲ್ಲ, ವೈಯಕ್ತಿಕ ಆಸ್ತಿಗೆ ಗಮನ ಕೊಡದೇ ಮಠಾಧೀಶರು ಭಕ್ತರ ಉದ್ಧಾರಕ್ಕೆ ದುಡಿಯಬೇಕು.
ಶ್ರೀ ರಾಜೇಶ್ವರ ಶಿವಾಚಾರ್ಯರು

ಶ್ರೀಗಳಿಗೆ ಅವರ ಮಠದ ಆಸ್ತಿಯೇ ಸಾಕಷ್ಟು ಇದೆ. ಅವರು ತಮ್ಮ ಮಠದಲ್ಲಿಯೇ ಪೂಜೆ ನಡೆಸಿಕೊಂಡು ಇರಬಹುದು. ಆದರೆ ಭಕ್ತರ ಉದ್ಧಾರಕ್ಕಾಗಿ ಮನೆ, ಮನೆಗೆ ತೆರಳಿ ಭಕ್ತರಲ್ಲಿಯ ದುರ್ಗುಣಗಳ ಭಿಕ್ಷೆ ಬೇಡಿ, ಅವರನ್ನು ಸನ್ಮಾರ್ಗಕ್ಕೆ ಹಚ್ಚುತ್ತಿರುವುದು ಪ್ರಶಂಶನೀಯವಾಗಿದೆ.
ರಾಮಶೆಟ್ಟಿ ವಿರಶೆಟ್ಟೆ, ಡೊಣಗಾಪೂರ ಗ್ರಾಮದ ಭಕ್ತ

Advertisement

Udayavani is now on Telegram. Click here to join our channel and stay updated with the latest news.

Next