Advertisement
“ಅಫ್ಘಾನಿಸ್ಥಾನ ಡೈಲಿ’ ವರದಿಯ ಪ್ರಕಾರ ಮಜರ್-ಐ- ಶಾರಿಫ್ ನಲ್ಲಿರುವ ಬಾಲ್ಖ್ ವಿವಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ 50 ಪ್ರಾಧ್ಯಾಪಕರನ್ನು ಇತ್ತೀಚೆಗೆ ಕೆಲಸದಿಂದ ತೆಗೆದು ಹಾಕಲಾಗಿದೆ. ಸುಮಾರು 18, 000ಕ್ಕೂ ಅಧಿಕ ವಿದ್ಯಾರ್ಥಿಗಳಿರುವ ವಿವಿ ಯಲ್ಲಿ ಕೆಲಸ ಮಾಡುತ್ತಿರುವ ಪ್ರಾಧ್ಯಾ ಪಕರನ್ನು ಜನಾಂಗದ ಕಾರಣದಿಂದಲೇ ಕೆಲಸದಿಂದ ತೆಗೆದು ಹಾಕಲಾಗಿದೆ. ಕೆಲಸ ಕಳೆದುಕೊಂಡವರಲ್ಲಿ ಮೂವರು ಡಾಕ್ಟರೆಟ್ ಪಡೆದವರಾಗಿದ್ದರೆ, 36 ಪ್ರಾಧ್ಯಾಪಕರು ಸ್ನಾತ ಕೋತ್ತರ ಪದವಿ ಪಡೆದವರು ಹಾಗೂ ಉಳಿದವರು ಪದವಿ ಪಡೆದವರಾಗಿದ್ದಾರೆ.
ಬಾಲ್ಖ್ ವಿಶ್ವವಿದ್ಯಾಲಯದಲ್ಲಿರುವ ತಾಲಿಬಾನ್ ಪ್ರತಿನಿಧಿ ಅಬ್ದುಲ್ಲಾ ಸಾಫಿ ಈ ಎತ್ತಂಗಡಿಗೆ ಕಾರಣ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆತ ಈಗಾಗಲೇ ವಿವಿಯ ಆಡಳಿತ ಮತ್ತು ಹಣಕಾಸು ವಿಭಾಗದ 8 ಅಧಿಕಾರಿಗಳನ್ನು ಕೆಲಸದಿಂದ ತೆಗೆದು ಹಾಕಿದ್ದು, ಆ ಸ್ಥಾನಕ್ಕೆ ಏಳು ತಾಲಿಬಾನ್ ಸದಸ್ಯರನ್ನು ನೇಮಕ ಮಾಡಿಕೊಂಡಿದ್ದಾನೆ. ಪರ್ಶಿಯನ್‌ಗೆ ಗುಡ್ ಬೈ: ಅದಷ್ಟೇ ಅಲ್ಲದೆ, ತಾಲಿಬಾನಿಯರು ಪರ್ಶಿಯನ್ ಭಾಷೆಗೂ ಎಲ್ಲೆಡೆ ಗುಡ್ ಬೈ ಹೇಳಲಾರಂಭಿಸಿದ್ದಾರೆ. ಎಲ್ಲ ಇಲಾಖೆ ಮತ್ತು ವಿಶ್ವವಿದ್ಯಾಲಯಗಳಲ್ಲಿ ಪರ್ಶಿಯನ್ ಭಾಷೆಯನ್ನು ತೆಗೆದುಹಾಕಲಾರಂಭಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.