Advertisement
ವರ್ಷದಲ್ಲಿ ಒಂದು ದಿನ ಮಾತ್ರ ಅಂದರೆ ಜಾತ್ರೆಯ ಸಂದರ್ಭದ ಎ. 16ರಂದು ಮಾತ್ರ ಶ್ರೀ ದೇವರ ದೀಪ ಬಲಿ ಉತ್ಸವ ನಡೆಯುತ್ತದೆ. ದೀಪ ಬಲಿ ಉತ್ಸವಕ್ಕೂ ಧಾರ್ಮಿಕ ಮಹತ್ವವಿದೆ. ಒಳಾಂಗಣದಲ್ಲಿ ಗುಡಿಗಳ, ಮಹಾಬಲಿ ಪೀಠದ, ಧ್ವಜ ಸ್ತಂಭದ ಬಳಿ ನೆಲದಲ್ಲಿ ಎಳ್ಳೆಣ್ಣೆ ಹಾಕಿ ಹಣತೆಗಳನ್ನು ಬೆಳಗಿಸಿ, ಅದೇ ಬೆಳಕಿನಲ್ಲಿ ದೀಪ ಬಲಿ ನಡೆಯುತ್ತದೆ. ಒಳಾಂಗಣದಲ್ಲಿ ಇತರ ದಿನ ನಡೆಯುವ ಉತ್ಸವದ ಸಂಪ್ರದಾಯಗಳನ್ನು ದೀಪ ಬಲಿ ಉತ್ಸವದಲ್ಲಿ ಪಾಲಿಸಲಾಗುತ್ತದೆ.
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆ ಹಿನ್ನೆಲೆಯಲ್ಲಿ ಎ. 15ರಂದು ರಾತ್ರಿ ಬಂಡಿ ಉತ್ಸವ ನಡೆಯಿತು. ಬೆಳಗ್ಗೆ ಸೌರಮಾನ ಯುಗಾದಿ ಆಚರಣೆ ನಡೆದು, ಬಲಿ ಉತ್ಸವ, ವಸಂತ ಕಟ್ಟೆಪೂಜೆ ನಡೆಯಿತು. ರಾತ್ರಿ ಉತ್ಸವ ಬಲಿ ಆರಂಭಗೊಂಡು, ಬಂಡಿ ಉತ್ಸವ (ಚಂದ್ರಮಂಡಲ) ನೆರವೇರಿತು. ಬಳಿಕ ಬನ್ನೂರು ಅಶೋಕನಗರ, ರೈಲ್ವೇ ಮಾರ್ಗ, ಕೊಂಬೆಟ್ಟು, ಸಕ್ಕರೆಕಟ್ಟೆ ಮಾರ್ಗವಾಗಿ ದೇವರ ಸವಾರಿ ಹೊರಟಿತು.