Advertisement

ಪ್ರವಾಹ ಸಂತ್ರಸ್ತರ ಮನೆ ಕಾಮಗಾರಿ ಪರಿಶೀಲನೆ

03:31 PM Feb 01, 2020 | Naveen |

ಬಾಳೆಹೊನ್ನೂರು: ಕಳೆದ ವರ್ಷ ಬಾಳೆಹೊನ್ನೂರು ಹೋಬಳಿ ವ್ಯಾಪ್ತಿಯಲ್ಲಿ ಉಂಟಾದ ಪ್ರವಾಹದಿಂದ ಸಂತ್ರಸ್ತರಾದ ಕುಟುಂಬಗಳು ನೆರೆ ಪರಿಹಾರ ನಿಧಿಯಡಿ ಮರು ಮನೆ ನಿರ್ಮಾಣ ಕಾಮಗಾರಿ ನಡೆಸುತ್ತಿರುವುದನ್ನು ತರೀಕೆರೆ ಉಪವಿಭಾಗಾಧಿಕಾರಿ ರೂಪಾ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

Advertisement

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಪ ವಿಭಾಗಾಧಿಕಾರಿ ರೂಪಾ, ನೆರೆ ಹಾವಳಿಗೆ ತುತ್ತಾಗಿ ಸಂತ್ರಸ್ತರಾದ ಕುಟುಂಬಗಳ ಮನೆಗಳ ಮರು ನಿರ್ಮಾಣದ ಬಗ್ಗೆ ಈಗಾಗಲೇ ಹೌಸಿಂಗ್‌ ಸಾಫ್ಟ್‌ವೇರ್‌ನಲ್ಲಿ ಡಾಟಾ ಎಂಟ್ರಿ ಮಾಡಲಾಗಿದೆ. ಮನೆಗಳು ಹಾನಿಗೀಡಾದ ಬಗ್ಗೆ ಎ, ಬಿ, ಸಿ ಎಂದು ಕೆಟಗೆರಿಯಾಗಿ ವರ್ಗೀಕರಣ ಮಾಡಿದ್ದೇವೆ. ಈ ಸಂಬಂಧ ಸಂತ್ರಸ್ತರು ಮನೆ ರಿಪೇರಿ ಅಥವಾ ಮರು ನಿರ್ಮಾಣ ಮಾಡುತ್ತಿದ್ದಾರೆಯೇ ಎಂಬುದರ ಪರಿಶೀಲನೆಯನ್ನು ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿ ಹಾಗೂ ಪಿಡಿಒ ನಡೆಸುತ್ತಿದ್ದಾರೆ ಎಂದರು.

ವಿಎ ಹಾಗೂ ಪಿಡಿಒ ಅವರು ಸ್ಥಳಕ್ಕೆ ಖುದ್ದಾಗಿ ತೆರಳಿ ಜಿಪಿಎಸ್‌ ನಡೆಸಿ ಫೋಟೋ ತೆಗೆದು
ಸಾಫ್ಟ್‌ವೇರ್‌ಗೆ ಅಪ್‌ಡೇಟ್‌ ಮಾಡಬೇಕಿದೆ. ಬಾಳೆಹೊನ್ನೂರು ವ್ಯಾಪ್ತಿಯ ಬನ್ನೂರು, ಮಾಗುಂಡಿ, ಮಹಲ್ಗೊàಡು, ಕಾರೇಹಡ್ಲು, ಬೈರೇಗುಡ್ಡ ಮುಂತಾದೆಡೆ ತಾವೇ ಖುದ್ದು ಸ್ಥಳ
ಪರಿಶೀಲನೆ ನಡೆಸಿದ್ದೇನೆ ಎಂದರು. ಮಾಗುಂಡಿ ಗ್ರಾಮದಲ್ಲಿ ಶೇ.80 ರಷ್ಟು ಮನೆಗಳು ಮರು ನಿರ್ಮಾಣವಾಗಿವೆ. ಬನ್ನೂರು ಗ್ರಾಮದಲ್ಲಿ ಕಡಿಮೆ ಪ್ರಮಾಣದಲ್ಲಿ ಮರು ನಿರ್ಮಾಣವಾಗಿದ್ದು, ಶೀಘ್ರ ಕಾಮಗಾರಿ ನಡೆಸುವಂತೆ ಪಿಡಿಒ, ಗ್ರಮಲೆಕ್ಕಾಧಿಕಾರಿಗಳಿಗೆ
ಸೂಚಿಸಲಾಗಿದೆ. ಬನ್ನೂರು ಗ್ರಾಪಂ ವ್ಯಾಪ್ತಿಯ ಬಂಡಿಮಠದಲ್ಲಿ ಭದ್ರಾನದಿಯ ಸೇತುವೆ ವಿಸ್ತರಣೆ ಆಗುತ್ತಿರುವ ಹಿನ್ನೆಲೆಯಲ್ಲಿ ಮರು ನಿರ್ಮಾಣ ಕಾಮಗಾರಿಗೆ ಸಮಸ್ಯೆಯುಂಟಾಗಿದೆ ಎಂದು ತಿಳಿಸಿದರು.

ಸೇತುವೆ ನಿರ್ಮಾಣವಾಗುವ ಸ್ಥಳದಲ್ಲಿ ಪುನಃ ಯಾರೂ ಮನೆ ನಿರ್ಮಿಸದಂತೆ ಸೂಚಿಸಲಾಗಿದೆ. ಅವರಿಗೆ ಪರ್ಯಾಯ ಜಾಗದ ವ್ಯವಸ್ಥೆಯನ್ನು ಸ್ಥಳೀಯ ಪಂಚಾಯಿತಿ ಅಥವಾ ಸಂಬಂಧಿಸಿದವರು ಮಾಡಬೇಕಿದೆ. ಬನ್ನೂರು ಗ್ರಾಪಂ ವ್ಯಾಪ್ತಿಯಲ್ಲಿ ನೆರೆ ಹಾವಳಿಗೆ ತುತ್ತಾದ ಮನೆಗಳನ್ನು ಎ ಕೆಟಗೆರಿ-8, ಬಿ-21, ಸಿ-7, ಬಿ.ಕಣಬೂರು ಗ್ರಾಪಂ ವ್ಯಾಪ್ತಿಯಲ್ಲಿ ಎ-15, ಬಿ-11, ಸಿ-12, ಮಾಗುಂಡಿ ಗ್ರಾಪಂ ವ್ಯಾಪ್ತಿಯಲ್ಲಿ ಎ-15, ಬಿ-3, ಸಿ-6 ಎಂದು ಗುರುತಿಸಲಾಗಿದೆ ಎಂದು ಹೇಳಿದರು.

ಪರಿಶೀಲನೆ ಸಂದರ್ಭದಲ್ಲಿ ಕೆಲವರು ಅರ್ಹ ಸಂತ್ರಸ್ತರ ಹೆಸರು ಬಿಟ್ಟು ಹೋಗಿದೆ ಎಂದು ದೂರು ಬಂದಿದೆ. ಇಂತಹ ಪ್ರಕರಣಗಳನ್ನು ಪರಿಗಣಿಸಿ ಅರ್ಜಿ ಸಲ್ಲಿಸಲು ತಿಳಿಸಿದ್ದು, ಅವುಗಳನ್ನು ಪರಿಶೀಲನೆ ನಡೆಸಿ ಪರಿಗಣಿಸಲಾಗುವುದು ಎಂದರು. ಭದ್ರಾನದಿ ಸನಿಹದ ಬಂಡಿಮಠದಲ್ಲಿ ನೆರೆ ಹಾವಳಿಗೆ ತುತ್ತಾದ ಮನೆಗಳನ್ನು ಪುನರ್‌ ನಿರ್ಮಿಸಿಕೊಳ್ಳಲು ಹೊಸ ಸೇತುವೆ ನಿರ್ಮಾಣದ ಕಾಮಗಾರಿಯ ಕಾರಣದಿಂದ ಸಮಸ್ಯೆಯುಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೇತುವೆ ನಿರ್ಮಾಣವಾಗುವ ಜಾಗದ ಕುರಿತು ಸ್ಥಳ ಗುರುತು ಮಾಡುವಂತೆ ಇನ್ನು ಎರಡು ದಿನದೊಳಗೆ ಸಂಬಂಧಿಸಿದ ಗುತ್ತಿಗೆದಾರರಿಗೆ ತಿಳಿಸಲಾಗಿದೆ ಎಂದು ಹೇಳಿದರು.

Advertisement

ಕಾಮಗಾರಿ ನಡೆಸುವ ಕೋರಿಕೆ ಸಂಸ್ಥೆಯವರು ಸೇತುವೆ ನಿರ್ಮಾಣಕ್ಕೆ ಸ್ಥಳ ಇಷ್ಟು ಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ ಬಳಿಕ ಭೂ ಸ್ವಾಧೀನ ಪ್ರಕ್ರಿಯೆ ಆರಂಭಗೊಳ್ಳಲಿದೆ. ಆ ಬಳಿಕ ಯಾವ ಮನೆಗಳು ಸೇತುವೆ ನಿರ್ಮಾಣದ ಸಂದರ್ಭದಲ್ಲಿ ತೆಗೆಯಬೇಕು ಎಂಬುದು ನಿರ್ಧಾರವಾಗಲಿದೆ ಎಂದು ಹೇಳಿದರು.

ನೆರೆ ಸಂತ್ರಸ್ತರಾದ ಮನೆಗಳ ಮರು ನಿರ್ಮಾಣಕ್ಕೆ ಎ, ಬಿ ಕೆಟಗರಿಯ ಹಲವರಿಗೆ ಈಗಾಗಲೇ
ತಲಾ ಲಕ್ಷ ರೂ. ನೇರವಾಗಿ ಅವರ ಖಾತೆಗಳಿಗೆ ಜಮಾವಣೆಯಾಗಿದೆ ಎಂದರು. ಈ ಸಂದರ್ಭದಲ್ಲಿ ಎನ್‌.ಆರ್‌.ಪುರ ತಹಶೀಲ್ದಾರ್‌ ನಾಗರಾಜ್‌, ನಾಡಕಚೇರಿ ಉಪ ತಹಶೀಲ್ದಾರ್‌ ನಾಗೇಂದ್ರ, ಬನ್ನೂರು ಗ್ರಾಪಂ ಅಧ್ಯಕ್ಷ ಟಿ.ಎಂ.ವೆಂಕಟೇಶ್‌, ಬಿ.ಕಣಬೂರು ಗ್ರಾಪಂ ನಿಕಟಪೂರ್ವ ಅಧ್ಯಕ್ಷ ಮಹಮ್ಮದ್‌ ಹನೀಫ್‌, ತಾಪಂ ಉಪಾಧ್ಯಕ್ಷ ಹೊಳೆಬಾಗಿಲು ಮಂಜು,
ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷ ಭಾಸ್ಕರ್‌ ವೆನಿಲ್ಲಾ, ಪಿಡಿಒ ಸೋಮಶೇಖರ್‌ ಮತ್ತಿತರರು ಹಾಜರಿದ್ದರು.

ಸಂತ್ರಸ್ತರ ಆರೋಪ: ಮನೆ ಹಾನಿಗೀಡಾದ ಬಗ್ಗೆ ಪರಿಶೀಲನೆ ನಡೆಸಿದ ಅಧಿ ಕಾರಿಗಳು ತಮಗೆ
ಬೇಕಾದವರಿಗೆ ಮಾತ್ರ ಎ, ಬಿ ವರ್ಗಕ್ಕೆ ಸೇರಿಸಿ, ಉಳಿದವರನ್ನು ಸಿ ವರ್ಗಕ್ಕೆ ಸೇರ್ಪಡೆ ಮಾಡಿ ತಾರತಮ್ಯ ಮಾಡಿದ್ದಾರೆ. ಅಧಿಕಾರಿಗಳು ಜನಪ್ರತಿನಿಧಿ ಗಳಿಗೆ ಮಾಹಿತಿ ನೀಡದೆ ತಮ್ಮಷ್ಟಕ್ಕೆ ತಾವೇ ಪರಿಶೀಲನೆ ನಡೆಸಿ ವರ್ಗವಾರು ವಿಂಗಡಣೆ ಮಾಡಿದ್ದಾರೆ. ಜನಪ್ರತಿನಿಧಿಗಳನ್ನು ಸೌಜನ್ಯಕ್ಕೂ ಈ ಬಗ್ಗೆ ವಿಚಾರಿಸಿಲ್ಲ ಎಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next