Advertisement

ಅಕ್ಷರನಗರ ಹಿಂದೂ ರುದ್ರಭೂಮಿ ಅಭಿವೃದ್ಧಿಗೆ ನಿರ್ಧಾರ

01:04 PM Jun 07, 2020 | Naveen |

ಬಾಳೆಹೊನ್ನೂರು: ಬಿ. ಕಣಬೂರು ಗ್ರಾಪಂ ವ್ಯಾಪ್ತಿಯ ಅಕ್ಷರನಗರದಲ್ಲಿ ಸುಮಾರು ಎರಡು ಎಕರೆ ಪ್ರದೇಶವನ್ನು ಹಿಂದೂ ರುದ್ರಭೂಮಿಗಾಗಿಮಿಸಲಿರಿಸಿಕೊಂಡು ಬಂದಿದ್ದು, ಗಿಡಗಂಟಿಗಳು ಬೆಳೆದುಕೊಂಡ ಹಿನ್ನೆಲೆಯಲ್ಲಿ ಅ ಪ್ರದೇಶವನ್ನು ಅಬಿವೃದ್ಧಿಪಡಿಸಲಾಗುವುದೆಂದು ಅಕ್ಷರನಗರ ಹಿಂದೂ ರುದ್ರಭೂಮಿ ಸಮಿತಿ ಅಧ್ಯಕ್ಷ ಎಂ.ಎಸ್‌. ಜಯಪ್ರಕಾಶ್‌ ತಿಳಿಸಿದ್ದಾರೆ.

Advertisement

ಅವರು ಶುಕ್ರವಾರ ಅಕ್ಷರನಗರದ ಅಂಬೇಡ್ಕರ್‌ ಸಮುದಾಯ ಭವನದಲ್ಲಿ ಹಿಂದೂ ರುದ್ರಭೂಮಿ ಸಮಿತಿಯ ತುರ್ತು ಸಭೆಯಲ್ಲಿ ಮಾತನಾಡಿದರು. ಅಕ್ಷರನಗರ, ಇಳಾಲ್‌ಗ‌ದ್ದೆ, ಮೆಣಸುಕುಡಿಗೆ, ರೇಣುಕನಗರ, ಮಸೀದಿಕೆರೆ, ಮಾಗೋಡು, ವೀರಭದ್ರೇಶ್ವರ ನಗರ ಸೇರಿದಂತೆ ಸುತ್ತಮುತ್ತಲಲ್ಲಿ ಸಾವಿರಾರು ಮನೆಗಳಿದ್ದು ಏನಾದರೂ ಆಕಸ್ಮಿಕವಾಗಿ ಸಾವು ಸಂಭವಿಸಿದಲ್ಲಿ ಹಿಂದೂ ರುದ್ರಭೂಮಿಯ ಅವಶ್ಯಕತೆಯಿರುವ ಹಿನ್ನಲೆಯಲ್ಲಿ, ಹಲವಾರು ವರ್ಷಗಳ ಹಿಂದೆಯೇ ಎರಡು ಎಕರೆಯಷ್ಟು ಜಾಗವನ್ನು ಮೀಸಲಿಡಲಾಗಿತ್ತು,

ಕಾರಣಾಂತರದಿಂದ ಈ ಪ್ರದೇಶಕ್ಕೆ ಬೇಲಿ ನಿರ್ಮಿಸಿರಲಿಲ್ಲ, ಇದನ್ನೇ ಉದ್ದೇಶವಾಗಿಟ್ಟುಕೊಂಡು ಕೆಲವರು ಈ ಪ್ರದೇಶದಲ್ಲಿ ಕಸವನ್ನು ಎಸೆದು ಪರಿಸರ ಹಾಳು ಮಾಡುವುದಲ್ಲದೆ ಅಕ್ರಮವಾಗಿ ಶೆಡ್‌ ನಿರ್ಮಿಸಿಕೊಂಡು ರುದ್ರಭೂಮಿ ಜಾಗ ಅತಿಕ್ರಮಣ ಮಾಡಲು ಪ್ರಯತ್ನವೂ ನೆಡೆದಿದ್ದ ಹಿನ್ನಲೆಯಲ್ಲಿ ಅಕ್ರಮ ಶೆಡ್‌ಗಳನ್ನು ತೆರವು ಮಾಡಿಸಲಾಯಿತು ಎಂದರು. ಇನ್ನು ಮುಂದೆ ರುದ್ರಭೂಮಿ ಪ್ರದೇಶವನ್ನು ಅತಿಕ್ರಮಣ ಮಾಡದಂತೆ ಹಾಗೂ ಕಸ ಮತ್ತು ತ್ಯಾಜ್ಯ ವಸ್ತುಗಳನ್ನು ಎಸೆಯಬಾರೆದೆಂದು ಕ್ರಮ ಕೈಗೊಂಡು ಹಿಂದೂ ರುದ್ರಭೂಮಿಗೆ ಸೂಚನಾ ಪಲಕವನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಸಮಿತಿಯ ಖಜಾಂಚಿ ಎಂ.ಜೆ. ಮಹೇಶಾಚಾರ್‌, ಕಾರ್ಯದರ್ಶಿ ಸುನಿಲ್‌ ರಾಜ್‌ ಭಂಡಾರಿ, ಹಿರಿಯಣ್ಣ ಭಂಡಾರಿ, ಬಿ.ಸಿ. ಸಂತೋಷ್‌ ಕುಮಾರ್‌, ಅಶೋಕ, ಮಾಗೋಡು ರವಿಗೌಡ, ರಾಮಣ್ಣ ಪೂಜಾರಿ, ಶರಣು, ನಾಗೇಂದ್ರ, ಮುರುಗೇಶ್‌, ಗುತ್ತಿಗೆದಾರ ನಾಗರಾಜ್‌, ಎಲ್‌.ಪಿ. ಜಗದೀಶ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next