Advertisement

ಗಣೇಶ ಹಬ್ಬ ಶಾಂತಿಯಿಂದ ಆಚರಿಸಿ

05:26 PM Aug 26, 2019 | Naveen |

ಬಾಳೆಹೊನ್ನೂರು: ಗಣಪತಿ ವಿಗ್ರಹ ಪ್ರತಿಷ್ಠಾಪನೆಯಿಂದ ವಿಸರ್ಜನೆ ಮಾಡು ವವರೆಗೆ ಯಾವುದೇ ಅಹಿತಕರ ಘಟನೆ ಗಳು ನಡೆದಲ್ಲಿ ಅದಕ್ಕೆ ಸಂಘಟಕರೇ ಸಂಪೂರ್ಣ ಜವಾಬ್ದಾರರು. ಹಾಗಾಗಿ, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗರೂಕತೆ ವಹಿಸಬೇಕೆಂದು ಡಿವೈಎಸ್ಪಿ ಜಾಗೀರ್‌ದಾರ್‌ ತಿಳಿಸಿದರು.

Advertisement

ಬಾಳೆಹೊನ್ನೂರು ಠಾಣೆಯಲ್ಲಿ ಗಣೇಶೋತ್ಸವದ ಪ್ರಯುಕ್ತ ಹಮ್ಮಿ ಕೊಂಡಿದ್ದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

ಗಣಪತಿ ಸೇವಾ ಸಮಿತಿ ಪದಾಧಿಕಾರಿಗಳ ವಿವರ, ಮೊಬೈಲ್ ನಂಬರ್‌ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಸರ್ಜನಾ ಕಾರ್ಯಕ್ರಮದ ಬಗ್ಗೆ ಮುಂಚಿತವಾಗಿಯೇ ಠಾಣೆಗೆ ಮಾಹಿತಿ ನೀಡಬೆಕು. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರ ವಹಿಸಿ, ಶಾಂತಿ- ಸುವ್ಯವಸ್ಥೆಯನ್ನು ಕಾಪಾಡಬೇಕು. ಹಬ್ಬವನ್ನು ಸಡಗರ- ಸಂಭ್ರಮದಿಂದ ಆಚರಿಸಬೇಕು. ಬಾಳೆಹೊನ್ನೂರು ಶಾಂತಿಯುತವಾಗಿ ಇರಲು ಕೋಮು ಸೌಹಾರ್ದತೆ ಕಾಪಾಡಬೇಕೆಂದು ತಿಳಿಸಿದರು.

ಬಾಳೆಹೊನ್ನೂರು ಠಾಣಾಧಿಕಾರಿ ತೇಜಸ್ವಿ ಮಾತನಾಡಿ, ಗಣಪತಿ ಪ್ರತಿ ಷ್ಠಾಪನೆ, ಸಾಂಸ್ಕೃತಿಕ ಕಾರ್ಯಕ್ರಮ, ವಿಸರ್ಜನಾ ಕಾರ್ಯಕ್ರಮದಲ್ಲಿ ಮುಂಜಾ ಗೃತಾ ಕ್ರಮಗಳನ್ನು ಕೈಗೊಂಡು ಕಾರ್ಯಕ್ರಮಗಳನ್ನು ಶಾಂತಿಯುತವಾಗಿ ಯಶಸ್ವಿಗೊಳಿಸಲು ಪೊಲೀಸ್‌ ಇಲಾಖೆ ಯೊಂದಿಗೆ ಸಂಘಟಕರು ಸಹಕರಿ ಸಬೇಕು ಎಂದರು.

ಯಾವುದೇ ಸಂದರ್ಭದಲ್ಲಿ ಸಮಸ್ಯೆ,ವ್ಯಾಜ್ಯ, ಕಾನೂನು ಬಾಹಿರ ಚಟುವಟಿಕೆ ಗಳು ಕಂಡುಬಂದಲ್ಲಿ ಕೂಡಲೇ ಪೊಲೀಸ್‌ ಠಾಣೆಗೆ ಮಾಹಿತಿ ನೀಡ ಬೇಕು. ತಕ್ಷಣವೇ ಪೊಲೀಸ್‌ ಅಧಿಕಾರಿ ಗಳು ಸಮಸ್ಯೆಗಳನ್ನು ಬಗೆಹರಿಸುತ್ತಾರೆ. ಸಾರ್ವಜನಿಕರು ಕಾನೂನು ಕೈಗೆತ್ತಿ ಕೊಂಡು ಶಾಂತಿ- ಸುವ್ಯವಸ್ಥೆಗೆ ಭಂಗ ವಾಗದಂತೆ ಎಚ್ಚರ ವಹಿಸಬೇಕು. ಪರಸ್ಪರ ಶಾಂತಿ- ಸಹಬಾಳ್ವೆ- ಸೌಹಾ ರ್ದತೆಯಿಂದ ಇತರರಿಗೆ ಮಾದರಿ ಯಾಗಬೇಕೆಂದು ಹೇಳಿದರು.

Advertisement

ಸಭೆಯಲ್ಲಿ ವೃತ್ತ ನಿರೀಕ್ಷಕ ಮಂಜು, ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಕೆ.ಎಸ್‌.ಹರೀಶ್‌, ನಾರಾಯಣಗೌಡ, ಸುರೇಂದ್ರ, ಸಿ.ವಿ.ಸುನಿಲ್, ಬನ್ನೂರುರಾಜಪ್ಪಗೌಡ, ತಾಪಂ ಉಪಾಧ್ಯಕ್ಷ ಹೊಳೆ ಬಾಗಿಲು ಮಂಜು, ಸುತ್ತಮುತ್ತಲಿನ ಹಲಸೂರು, ಇಟ್ಟಿಗೆಸೀಗೋಡು, ಸಂಗ ಮೇಶ್ವರಪೇಟೆ, ಕಡಬುಗೆರೆ,ಮಾಗುಂಡಿ, ಬನ್ನೂರು, ಗಡಿಗೇಶ್ವರ, ಮೇಲ್ಪಾಲ್,ಹುಣಸೇಕೊಪ್ಪ, ಅರಳಿಕೊಪ್ಪ, ಮೆಣಸು ಕುಡಿಗೆ, ಸೋಮೇಶ್ವರನಗರ, ವಾಟು ಕುಡಿಗೆ, ಅಕ್ಷರನಗರ, ಮುದುಗುಣಿ, ಜಕ್ಕಣಕ್ಕಿ ಬಾಳೆಹೊನ್ನೂರು ಸೇರಿ ದಂತೆ ಗಣೇಶೋತ್ಸವ ಸೇವಾ ಸಮಿತಿ ಪದಾಧಿಕಾರಿಗಳು ಹಾಗೂ ವಿವಿಧ ಸಂಘ-ಸಂಸ್ಥೆ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next