Advertisement

ಮಾಗುಂಡಿ ಗ್ರಾಮಸಭೆಯಲ್ಲಿ ಸಮಸ್ಯೆಗಳ ಅನಾವರಣ

04:04 PM Jul 31, 2019 | Naveen |

ಬಾಳೆಹೊನ್ನೂರು: ಮಾಗುಂಡಿ ಗ್ರಾಪಂನಲ್ಲಿ ನಡೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಸಮಸ್ಯೆಗಳ ಸರಮಾಲೆಯನ್ನೇ ಬಿಚ್ಚಿಟ್ಟರು.

Advertisement

ಕುಡಿಯುವ ನೀರು ಕಲುಷಿತಗೊಂಡು ಸಮಸ್ಯೆಯುಂಟಾಗಿದ್ದರೂ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ. ಕೂಡಲೇ ಕುಡಿಯುವ ನೀರಿನ ಟ್ಯಾಂಕ್‌ ಸ್ವಚ್ಛಗೊಳಿಸಿ ಶುದ್ಧ ನೀರನ್ನು ಪೂರೈಸಬೇಕು. ಕಸ ವಿಲೇವಾರಿ ಜಾಗದಲ್ಲಿ ದಿನೇ ದಿನೆ ಕಸದ ರಾಶಿ ಹೆಚ್ಚುತ್ತಿದ್ದು, ಸೊಳ್ಳೆ ಹಾಗೂ ನೊಣಗಳ ಕಾಟ ಜಾಸ್ತಿಯಾಗಿದೆ. ಇದರಿಂದ ಅಕ್ಕ-ಪಕ್ಕದ ಮನೆಗಳಿಗೆ ಬಹಳಷ್ಟು ತೊಂದರೆಯುಂಟಾಗಿದೆ ಎಂದು ದೂರಿದರು.

ವಿದ್ಯುತ್‌ ಲೈನ್‌ಗಳಿಗೆ ತಾಗುವಂತಿರುವ ಮರದ ಕೊಂಬೆಗಳನ್ನು ಕಡಿಸಬೇಕು. ಮನೆಗಳ ಮೇಲೆ ಹಾದು ಹೋಗಿರುವ ವಿದ್ಯುತ್‌ ಲೈನ್‌ಗಳನ್ನು ತೆರವುಗೊಳಿಸಬೇಕು. ಸಣ್ಣ ಪುಟ್ಟ ರೈತರಿಗೆ ಅರಣ್ಯ ಪ್ರದೇಶದಿಂದ ಸೌದೆ, ಸೊಪ್ಪುಗಳನ್ನು ತರಲು ಅವಕಾಶ ನೀಡಬೇಕು. ಬಹಳ ವರ್ಷಗಳಿಂದ ಅನುಭವದಲ್ಲಿದ್ದ ರೈತರ ಜಮೀನುಗಳು ಅರಣ್ಯ ಇಲಾಖೆಗೆ ಸೇರ್ಪಡೆಯಾಗುತ್ತಿರುವುದು ಸರಿಯಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಸಹಾಯಕಿ ಕೊರತೆಯಿದ್ದು ಸಮಸ್ಯೆಯುಂಟಾಗಿದೆ. ಗ್ರಾಪಂಗೆ ಒಳಪಡುವ ಕೆರೆಗಳನ್ನು ಅಭಿವೃದ್ಧಿಪಡಿಸಿ ಕೃಷಿ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.

ಜಿಪಂ ಸದಸ್ಯೆ ಚಂದ್ರಮ್ಮ ಮಾತನಾಡಿ, ಗ್ರಾಪಂ ವ್ಯಾಪ್ತಿಯ ವಸತಿ ಮನೆಗಳನ್ನು ಆದಷ್ಟು ಬೇಗ ನಿರ್ಮಿಸಿಕೊಡಬೇಕು. ಜಿಪಂ ವತಿಯಿಂದ ಗಂಗಾ ಕಲ್ಯಾಣ ಯೋಜನೆ ಮತ್ತು ಮಹಿಳಾ ಸಂಘಕ್ಕೆ ಸ್ವ ಉದ್ಯೋಗ ಕೈಗೊಳ್ಳಲು ಸುಮಾರು 2ರಿಂದ ಮೂರು ಲಕ್ಷ ಸಹಾಯಧನವಿದ್ದು, ಅದರ ಸದುಪಯೋಗ ಪಡೆಯಬೇಕೆಂದರು.

ಗ್ರಾಪಂ ಅಧ್ಯಕ್ಷ ಅಬ್ದುಲ್ ವಹೀದ್‌ ಮಾತನಾಡಿ, ಸಾರ್ವಜನಿಕರು ಉದ್ಯೋಗ ಖಾತ್ರಿ ಯೋಜನೆಯಡಿ ಹಲವಾವರು ಅಭಿವೃದ್ಧಿ ಕಾಮಗಾರಿಗಳ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಗ್ರಾಪಂಗೆ ಸಕಾಲದಲ್ಲಿ ಕಂದಾಯ ಮತ್ತು ತೆರಿಗೆ ಪಾವತಿಸಿ ಪಂಚಾಯಿತಿಯ ಅಭಿವೃದ್ಧಿಗೆ ಸಹಕರಿಸಬೇಕು. ಗ್ರಾಮಸ್ಥರ ಹಲವಾರು ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆಯವರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

ಗ್ರಾಪಂ ಅಭಿವೃದ್ಧಿ ಅಧಿಕಾರಿ ಪಿ.ಕೆ.ಪ್ರಕಾಶ್‌ ಗ್ರಾಮ ಸಭೆಯಲ್ಲಿ 2019-20ನೇ ಸಾಲಿನ ವಿವಿಧ ಯೋಜನೆ ಮತ್ತು ಇಲಾಖೆಗಳ ಫಲಾನುಭವಿಗಳ ಆಯ್ಕೆ, ಸರ್ಕಾರದ ಮಾರ್ಗಸೂಚಿಯಂತೆ ನಿವೇಶನ ಮತ್ತು ಕಟ್ಟಡಗಳ ತೆರಿಗೆಗಳ ವೈಜ್ಞಾನಿಕ ಪರಿಷ್ಕರಣೆ ವಿಚಾರ, 2018-19ನೇ ಸಾಲಿನ ಬಸವ ವಸತಿ ಯೋಜನೆ ಫಲಾನುಭವಿಗಳ ಆಯ್ಕೆ ಸೇರಿದಂತೆ ಇತರ ವಿಚಾರಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕೃಷಿ, ತೋಟಗಾರಿಕೆ, ಪಶುವೈದ್ಯ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ, ಕಂದಾಯ, ಅರಣ್ಯ, ಸಾಮಾಜಿಕ ಅರಣ್ಯ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗಳ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.

ಮಾರ್ಗದರ್ಶಿ ಅಧಿಕಾರಿ ಟಿ.ಎಸ್‌.ಈಶ್ವರ ಮಾತನಾಡಿ, ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.

ಗ್ರಾಪಂ ಉಪಾಧ್ಯಕ್ಷ ಅಣ್ಣಪ್ಪ, ಸದಸ್ಯರಾದ ಡೈನಾ ಲೋಬೋ, ಕಮಲಮ್ಮ, ಗ್ರಾಪಂ ಮಾಜಿ ಅಧ್ಯಕ್ಷ ಕೆ.ಟಿ.ಸುದೇಶ್‌, ಮಾಗುಂಡಿ ಸರಕಾರಿ ಪ್ರೌಢಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಅಭಿಷೇಕ್‌ ಸಮೃದ್ಧ್, ತಾಪಂ ಸದಸ್ಯೆ ಭಾಗ್ಯಲಕ್ಷಿ ್ಮೕ, ಬಾಳೆಹೊನ್ನೂರು ಪಶುವೈದ್ಯಾಧಿಕಾರಿ ಡಾ.ನಿಧಾ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next