Advertisement

ಟಿಕೆಟ್‌ ತಪ್ಪಲು ಕಾಂಗ್ರೆಸ್‌ ಮುಖಂಡರೇ ಕಾರಣ: ಆರತಿ

05:12 PM Apr 08, 2019 | Team Udayavani |

ಬಾಳೆಹೊನ್ನೂರು: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್‌ ಕೈತಪ್ಪಿದ್ದರೂ ಮೈತ್ರಿ ಧರ್ಮ ಪಾಲಿಸಿ ಜೆಡಿಎಸ್‌ ಅಭ್ಯರ್ಥಿ ಪರ ಮತ ಯಾಚಿಸುವುದಾಗಿ ಅನಿವಾಸಿ ಭಾರತೀಯ ಸಮಿತಿ ಮಾಜಿ ಉಪಾಧ್ಯಕ್ಷೆ ಆರತಿಕೃಷ್ಣ ತಿಳಿಸಿದರು.

Advertisement

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ನನಗೆ ಟಿಕೆಟ್‌ ನೀಡುವುದಾಗಿ ಭರವಸೆ ನೀಡಿದ್ದು, ಕೊನೆಯ ಕ್ಷಣದಲ್ಲಿ ಟಿಕೆಟ್‌ ಕೈ ತಪ್ಪಿತು.ಈ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ಗೆ ಉತ್ತಮ ಅವಕಾಶವಿದ್ದು, ಮೈತ್ರಿ ಅಭ್ಯರ್ಥಿಗೆ ಇದು ವರವಾಗಲಿದೆ ಎಂದರು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಮುಖಂಡರು ನನ್ನ ಪರ ಪ್ರಯತ್ನ ಮಾಡದೇ ಇರುವುದು ಟಿಕೆಟ್‌ ಕೈ
ತಪ್ಪಲು ಕಾರಣವಾಗಿದೆ. ಒಂದು ವೇಳೆ ಟಿಕೆಟ್‌ ದೊರೆತು ಚುನಾವಣೆಯಲ್ಲಿ ಜಯಗಳಿಸಿದ್ದಲ್ಲಿ ಮಹಿಳೆಯೊಬ್ಬಳು ಉನ್ನತ ಸ್ಥಾನಕ್ಕೇರುತ್ತಾರೆ ಎಂಬ ಭೀತಿಯಿಂದ ಪ್ರಯತ್ನ ಮಾಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅನಿವಾಸಿ ಭಾರತೀಯ ಕಾಂಗ್ರೆಸ್‌ನ ಸಮಿತಿಯ ಸದಸ್ಯರು ದೂರದ ಸೌದಿ ಅರೇಬಿಯಾ ಹಾಗೂ ದುಬೈನಿಂದ ತಂಡೋಪತಂಡವಾಗಿ ಬಂದು ಮೈತ್ರಿ ಅಭ್ಯರ್ಥಿಪರ ಮತ ಯಾಚನೆ ಮಾಡಲಿದ್ದಾರೆ ಎಂದರು.

ಈ ಹಿಂದೆ ದುಬೈನಲ್ಲಿ ನಡೆದ ಅನಿವಾಸಿ ಭಾರತೀಯ ಕಾಂಗ್ರೆಸ್‌ನ ಸಮಾವೇಶಕ್ಕೆ ರಾಹುಲ್‌ ಗಾಂಧಿ  ಬಂದಿದ್ದರು. ಆ ಸಮಾವೇಶದಲ್ಲಿ ಕೊಲ್ಲಿ ರಾಷ್ಟ್ರದ 60 ಸಾವಿರಕ್ಕೂ ಹೆಚ್ಚು ಅನಿವಾಸಿ ಭಾರತೀಯರು ಭಾಗವಹಿಸಿದ್ದರು ಎಂದು ತಿಳಿಸಿ ಲೋಕಸಭಾ ಚುನಾವಣೆಯಲ್ಲಿ ನನಗೆ ಬೆಂಬಲ ವ್ಯಕ್ತಪಡಿಸುವುದಾಗಿ ತಿಳಿಸಿದ್ದರು ಎಂದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷಕ್ಕೆ ನಮ್ಮ ತಂದೆ ಬೇಗಾನೆ ರಾಮಯ್ಯನವರ ಕೊಡುಗೆ ಅಪಾರ. ಕೃಷ್ಣ ಫೌಂಡೇಶನ್‌ ಮೂಲಕ ಹಲವಾರು ಸಮಾಜಮುಖೀ ಕಾರ್ಯಗಳನ್ನು ಮಾಡಿದ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅಪೇಕ್ಷೆ ನನ್ನದಾಗಿತ್ತು ಎಂದು ತಿಳಿಸಿದರು.

ಸೌದಿ ಅರೇಬಿಯಾದ ಅಬ್ದುಲ್‌ ಶಕೀಲ್‌ ಮಾತನಾಡಿ, ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವನಾದ ನಾನು ಇದೀಗ ಸೌದಿಅರೇಬಿಯಾದಲ್ಲಿ ನೆಲೆಸಿದ್ದೇನೆ. ಡಾ| ಆರತಿಕೃಷ್ಣ ಅವರು ಹಲವಾರು ಸಮಾಜಮುಖೀ ಕೆಲಸಗಳನ್ನು ಮಾಡಿದ್ದಾರೆ. ಅವರು ಈ ಬಾರಿಯ ಲೋಕಸಭಾ ಚುನಾವಣೆಲ್ಲಿ ಸ್ಪ ರ್ಧಿಸಲು ಅವಕಾಶ
ವಂಚಿತಾಗಿರುವುದು ಬೇಸರ ಮೂಡಿಸಿದೆ.

Advertisement

ಆದಾಗಿಯೂ ಸಹ ಆರತಿಕೃಷ್ಣರ ಮನವಿ ಮೇರೆಗೆ ತಂಡೋಪತಂಡವಾಗಿ ಆಗಮಿಸಿ ಮಂಗಳೂರು, ಉಡುಪಿ ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿ ಮತ್ತು ರಾಹುಲ್‌ ಗಾಂಧಿ  ಸ್ಪ ರ್ಧಿಸುವ ಕೇರಳದ ವೈನಾಡಿನಲ್ಲೂ ಪ್ರಚಾರ ಮಾಡುವುದಾಗಿ
ತಿಳಿಸಿದರು. ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಶೋಭಾ ಕರಂದ್ಲಾಜೆ ಅವರ ಕೊಡುಗೆ ಶೂನ್ಯ. ಅವರು ಕ್ಷೇತ್ರವನ್ನು ಅಭಿವೃದ್ಧಿ ಮಾಡಲಿಲ್ಲ, ಮೋದಿ ಹೆಸರಿನಲ್ಲಿ ಮತಯಾಚಿಸುತ್ತಿರುವುದು ವಿಷಾದಕರ ಅಭ್ಯರ್ಥಿಯು ತನ್ನ ಸಾಧನೆ ಏನೆಂದಬುದನ್ನು ತೋರಿಸಬೇಕಿತ್ತು ಎಂದು ವ್ಯಂಗ್ಯವಾಡಿದರು.

ಈ ಹಿನ್ನಲೆಯಲ್ಲಿ ಅವರ ಬೆಂಬಲಿಗರಾಗಿ ಕಾಂಗ್ರೆಸ್‌-ಜೆಡಿಎಸ್‌ ಪರ ಮತಯಾಚನೆಯಲ್ಲಿ ಪಾಲ್ಗೊಂಡು ರಾಹುಲ್‌ ಗಾಂಧಿ  ಅವರನ್ನು
ಪ್ರಧಾನಮಂತ್ರಿ ಮಾಡಬೇಕೆಂಬ ಮಹದಾಸೆಯನ್ನು ಹೊಂದಿದ್ದೇವೆ ಎಂದರು.

ಸೌದಿ ಅರೇಬಿಯಾದ ಮಹಮ್ಮದ್‌ ಇಕ್ಬಾಲ್‌, ಸಾಜಿದ್‌ ಸಾಮ್ರಾಣಿ, ದುಬೈನ ಮಹಮ್ಮದ್‌ ಸಾದಿಕ್‌, ಮಾಗುಂಡಿಯ ಅಬ್ದುಲ್‌ ವಹೀದ್‌
ಉಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next