Advertisement

ಮರುಕಳಿಸೀತೇ ಗ್ರಂಥಾಲಯದ ಗತವೈಭವ

05:56 PM Oct 23, 2019 | Naveen |

ಬಾಳೆಹೊನ್ನೂರು: ಆಧುನಿಕತೆಯ ಭರಾಟೆ ಹಾಗೂ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಇಂದು ಗ್ರಂಥಾಲಯಗಳು ಘನತೆಯನ್ನು ಕಳೆದುಕೊಳ್ಳುತ್ತಿವೆ ಎಂಬುದಕ್ಕೆ ಬಾಳೆಹೊನ್ನೂರಿನ ಗ್ರಂಥಾಲಯವೇ ಸಾಕ್ಷಿಯಾಗಿದೆ.

Advertisement

ಒಂದು ಕಾಲದಲ್ಲಿ ಸದಾ ಓದುಗರಿಂದ ತುಂಬಿ ತುಳುಕುತ್ತಿದ್ದ ಪುಸ್ತಕ ಮನೆಯಲ್ಲಿಂದು ಬೆರಳೆಣಿಕೆಯ ಓದುಗರು ಬರುತ್ತಿದ್ದಾರೆ. ಆ ಪೈಕಿ ಕೆಲವರು ದಿನಪತ್ರಿಕೆ ಓದಲು ಬರುತ್ತಾರೆ. ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಬರುವುದೇ ಕಡಿಮೆಯಾಗಿದೆ. ಮಾಹಿತಿಗಾಗಿ ಸೈಬರ್‌ ಸೆಂಟರ್‌ಗಳಿಗೆ ತೆರಳುತ್ತಿರುವುದು ಕಂಡುಬರುತ್ತಿದೆ. ಪಟ್ಟಣದ ಗ್ರಂಥಾಲಯ ಕಟ್ಟಡ ಸುಣ್ಣ-ಬಣ್ಣ ಕಾಣದೆ, ದುರಸ್ತಿಯೂ ಇಲ್ಲದೇ ಶಿಥಿಲಗೊಳ್ಳುತ್ತಿದೆ. ಸ್ಥಳೀಯವಾಗಿ ಕ್ರಿಕೆಟ್‌ ಪಂದ್ಯಾವಳಿಗಳು ನಡೆದಾಗ ಗ್ರಂಥಾಲಯದ ಹೆಂಚುಗಳು ಒಡೆದು ಹೋಗಿ, ಮಳೆ ಬಂದಾಗ ಸೋರುತ್ತದೆ. ಇದರಿಂದ, ಕಟ್ಟದಲ್ಲಿನ ಅಮೂಲ್ಯ ಪುಸ್ತಕಗಳೆಲ್ಲಾ ಒದ್ದೆಯಾಗಿ ನಾಶವಾಗಿವೆ. ಜತೆಗೆ, ಕಟ್ಟಡ ಶಿಥಿಲಗೊಳ್ಳುತ್ತಿದೆ.

ಗ್ರಂಥಾಲಯದಲ್ಲಿ ಸ್ಥಳಾವಕಾಶ ಕಡಿಮೆಯಿದೆ. ಅಲ್ಲದೇ, ಬೇರೆ ಬೇರೆ ಗ್ರಂಥಾಲಾಯ ಗಳಿಗೆ ವಿತರಿಸಬೇಕಿದ್ದ ಗಾದ್ರೇಜ್‌ ಬೀರುಗಳು ನಮ್ಮ ಗ್ರಂಥಾಲಯದಲ್ಲಿಯೇ ಇವೆ. ಕಟ್ಟಡ ಶಿಥಿಲಗೊಂಡಿದ್ದು, ಸೋರುವಿಕೆ ಯಿಂದಾಗಿ ಗೋಡೆಗಳೆಲ್ಲಾ ತೇವಾಂಶದಿಂದ ಕೂಡಿವೆ. ಇಲ್ಲಿನ ಗ್ರಂಥಪಾಲಕರಿಗೆ ಕೊಡುವ ಸಂಬಳವೂ ಕಡಿಮೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

ರಾತ್ರಿ ವೇಳೆ ಕೆಲವರು ಗ್ರಂಥಾಲಯದ ಮೆಟ್ಟಿಲು ಮೇಲೆ ಕುಳಿತು ಮದ್ಯ ಸೇವಿಸಿ ಬಾಟಲಿಗಳನ್ನು ಒಡೆದು ಬಿಸಾಡಿ ಹೋಗುತ್ತಾರೆ. ಈ ಬಗ್ಗೆ ಹಲವಾರು ಬಾರಿ ಗ್ರಾಮ ಪಂಚಾಯಿತಿ ಹಾಗೂ ಪೊಲೀಸ್‌ ಠಾಣೆಗೆ ತಿಳಿಸಲಾಗಿದೆ. ಗೋಡೆಯ ಹಿಂಭಾಗದಲ್ಲಿ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next