Advertisement

ಅರಣ್ಯ ಸಂರಕ್ಷಣೆಗೆ ಶಾಶ್ವತ ಬೇಲಿಗೆ ಒತ್ತಾ

01:08 PM May 23, 2019 | Naveen |

ಬಾಳೆಹೊನ್ನೂರು: ಅರಣ್ಯ ಸಂರಕ್ಷಣೆಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಮರಗಳನ್ನು ಕಡಿದು ಬೇಲಿ ಮಾಡುವ ಬದಲು ಸಿಮೆಂಟ್ ಅಥವಾ ಕಲ್ಲುಕಂಬ ಬಳಸಿ ಶಾಶ್ವತವಾಗಿ ಬೇಲಿ ನಿರ್ಮಿಸಬೇಕೆಂದು ಅಂಡವಾನೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Advertisement

ಬೇಲಿ ಹಾಕುವಾಗ 10 ರಿಂದ 15 ವರ್ಷದ ಹಸಿ ಮರಗಳನ್ನು ಕಡಿದು ಬೇಲಿ ಕಂಬ ಮಾಡುತ್ತಿದ್ದು, ಇದರಿಂದಾಗಿ ಅರಣ್ಯ ನಾಶವಾಗಲಿದೆ. ಮರದ ಕಂಬವು ಕೇವಲ ನಾಲ್ಕೈದು ವರ್ಷ ಮಾತ್ರ ಬಾಳಿಕೆ ಬರುತ್ತಿದ್ದು, ನಂತರ ಗೆದ್ದಲು ತಿಂದು ಬೇಲಿ ನಾಶವಾಗಲಿದೆ. ತಂತಿ ಬೇಲಿಯು ಮಣ್ಣಲ್ಲಿ ಬಿದ್ದು ತುಕ್ಕು ಹಿಡಿದು ಹಾಳಾಗುತ್ತದೆ ಹಾಗೂ ಕೆಲವೆಡೆ ಗುಜಿರಿಗಾಗಿ ಕಳ್ಳರು ತಂತಿಯನ್ನು ಕಳ್ಳತನ ಮಾಡುತ್ತಾರೆ. ಹುಯಿಗೆರೆ ಗ್ರಾಪಂ ವ್ಯಾಪ್ತಿಯಲ್ಲಿ ಸಾವಿರಾರು ಮರಗಳನ್ನು ಕಡಿದು ಹಿಂದಿನಿಂದಲೂ ಬೇಲಿ ಹಾಕಲಾಗುತ್ತಿದೆ. ಆದರೆ ಕೆಲವೆಡೆ ಬೇಲಿಗಳು ಕಾಣೆಯಾಗಿದ್ದು, ಶಾಶ್ವತವಾಗಿ ಬೇಲಿ ಹಾಕುವಂತೆ ಅರಣ್ಯ ಸಚಿವರು ಹಾಗೂ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

ಬೇಲಿಗಾಗಿ ಮರಗಳನ್ನು ಕಡಿಯುವ ಬಗ್ಗೆ ಈ ಹಿಂದೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಮುಂದಾದರೂ ಸರ್ಕಾರ ಈ ಬಗ್ಗೆ ಗಮನಹರಿಸಿ ಅರಣ್ಯ ಸಂರಕ್ಷಣೆ ಮಾಡಬೇಕಿದೆ ಎಂದು ಗ್ರಾಮಸ್ಥರ ಅಭಿಪ್ರಾಯವಾಗಿದೆ. ನೀಲಗಿರಿ ಅಥವಾ ಅಕೇಶಿಯಾ ಕಂಬಗಳನ್ನು ಬಳಸುವುದರಿಂದ ಸುಮಾರು 10 ವರ್ಷ ಬಾಳಿಕೆ ಬರಲಿದೆ ಎಂದು ಬುಡಕಟ್ಟು ಕೃಷಿಕರ ಸಂಘದ ಜಿಲ್ಲಾಧ್ಯಕ್ಷ ಕೆ.ಎನ್‌.ವಿಠಲ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next