Advertisement

ಸಮತೋಲಿತ ಶಿಕ್ಷಣ ಅಗತ್ಯ: ಜೆರಾಲ್ಡ್ ಲೋಬೋ

11:15 AM Jun 02, 2019 | sudhir |

ಮಲ್ಪೆ: ದೇಹದ ಆರೋಗ್ಯಕ್ಕೆ ಹೇಗೆ ಸಮತೋಲಿತ ಆಹಾರ‌ ಅಗತ್ಯವಿದೆಯೇ ಹಾಗೆಯೇ ಇಂದಿನ ವಿದ್ಯಾರ್ಥಿಗಳಿಗೆ ಪಾಠ, ಪಠ್ಯೇತರ ಜ್ಞಾನದ ಜತೆಗೆ ಮೌಲ್ಯಗಳುಳ್ಳ ನೈತಿಕ ಶಿಕ್ಷಣದ ಅಗತ್ಯವಿದೆ. ತರಗತಿ ಕೋಣೆಗಳಲ್ಲಿ ನಾಳಿನ ಉಜ್ವಲ ಭಾರತದ ಪ್ರಜ್ಞಾವಂತ ನಾಗರಿಕರು ರೂಪುಗೊಳ್ಳುತ್ತಿದ್ದಾರೆ ಎಂದು ಉಡುಪಿ ಧರ್ಮಪ್ರಾಂತ್ಯದ ಬಿಷಪ್‌ ಅತಿ ವಂದನೀಯ ಡಾ| ಜೆರಾಲ್ಡ್ ಐಸಾಕ್‌ ಲೋಬೋ ಹೇಳಿದರು.

Advertisement

ಕಲ್ಯಾಣಪುರ ಸಂತೆಕಟ್ಟೆಯ ಮೌಂಟ್ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ಸುಸಜ್ಜಿತ ನಾಲ್ಕು ಮಹಡಿಗಳ ನೂತನ ಶಾಲಾ ಕಟ್ಟಡವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಜಿ.ಪಂ. ಸದಸ್ಯ ಜನಾರ್ದನ ತೋನ್ಸೆ ಮಾತನಾಡಿ 1997ರಲ್ಲಿ ಕಲ್ಯಾಣಪುರ ಗ್ರಾ.ಪಂ. ಅಧ್ಯಕ್ಷನಾಗಿ ಶಾಲೆ ಆರಂಭಿಸಲು ಅನುಮತಿ ಪತ್ರ ನೀಡುವಾಗ ಕೇವಲ 16 ವಿದ್ಯಾರ್ಥಿಗಳು ಇದ್ದು, ಇಂದು ತನ್ನ 22 ವರ್ಷಗಳಲ್ಲಿ ಶಿಸ್ತು, ಪಠ್ಯ, ಕ್ರೀಡೆಗಳಲ್ಲಿ ಅದ್ಭುತ ಸಾಧನೆ ತೋರಿಸಿದೆ. ಪ್ರಸ್ತುತ 1,500ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಾರೆ ಎಂದರೆ ಆಡಳಿತ ಮಂಡಳಿ ಹಾಗೂ ಶಿಕ್ಷಕ ಬದ್ಧತೆ ತೋರಿಸುತ್ತದೆ ಎಂದವರು ತಿಳಿಸಿದರು.

ಶಾಲಾ ಕಟ್ಟಡದ ಗುತ್ತಿಗೆದಾರರು, ತಂತ್ರಜ್ಞರು, ಕಾರ್ಮಿಕರನ್ನು ಸಮ್ಮಾನಿಸ ಲಾಯಿತು.

ಶಾಲಾ ಸಂಚಾಲಕ ವಂದನೀಯ ಡಾ| ಲೆಸ್ಲಿ ಡಿ’ಸೋಜಾ ಅವರನ್ನು ಬಿಷಪರು ಸಮ್ಮಾನಿಸಿದರು.

Advertisement

ಶಾಲೆಯು ಸುಸಜ್ಜಿತ ತರಗತಿ, ಪ್ರಯೋಗಾಲಯ, ಗ್ರಂಥಾಲಯ, ಶಿಕ್ಷಕರ ಕೊಠಡಿ, ಕಂಪ್ಯೂಟರ್‌ ಲ್ಯಾಬ್‌, ಶೌಚಾಲಯ, ಪ್ರತಿ ಮಹಡಿಯಲ್ಲಿ ಸಂಸ್ಕರಿಸಿದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸಭಾಂಗಣ ಹೊಂದಿದೆ ಎಂದರು. ಸಮಾರಂಭದಲ್ಲಿ ಮುಖ್ಯ ಅತಿಥಿ ಡಾ| ಜೆರಿ ವಿನ್ಸೆಂಟ್ ಡಯಾಸ್‌, ಸಹಾಯಕ ಧರ್ಮಗುರು ಕ್ಲ್ಯಾನಿ ಡಿ’ಸೋಜಾ,ಚರ್ಚ್‌ ಪಾಲನ ಮಂಡಳಿಯಉಪಾಧ್ಯಕ್ಷ ಬ್ಯಾಪ್ಟಿಸ್ಟ್‌ ಡಯಾಸ್‌, ಕಾರ್ಯದರ್ಶಿ ರೊನಾಲ್ಡ್ ಡಿ’ಸೋಜಾ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಡಾ| ರವಿಶಂಕರ್‌ ಶೆಣೈ, ಧರ್ಮಗುರುಗಳು, ಧರ್ಮಭಗಿನಿಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.ಶಾಲಾ ಸಂಚಾಲಕ ಡಾ| ಲೆಸ್ಲಿ ಡಿ’ಸೋಜಾ ಸ್ವಾಗತಿಸಿದರು. ಶಿಕ್ಷಕಿಯರಾದ ವನಿತಾ, ಲವೀನಾ ನಿರೂಪಿಸಿದರು. ಶಾಲಾ ಮುಖ್ಯ ಶಿಕ್ಷಕಿ ವಂದಿತಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next