ಶ್ರೀರಂಗಪಟ್ಟಣ: ಪ್ರವಾಸಿ ತಾಣ ಬಲಮುರಿ ದೇವಾಲಯದಲ್ಲಿ ಹುಂಡಿ ಒಡೆದು ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಬುಧವಾರ ರಾತ್ರಿ ಬೆಳಗೂಳ ಗ್ರಾಮದ ಬಳಿ ಇರುವ ಪ್ರಸಿದ್ದ ಪ್ರವಾಸಿ ತಾಣ ಬಲಮುರಿ ಅಗಸ್ತೇಶ್ವರ ಮತ್ತು ಪಾರ್ವತಿ ದೇವಸ್ಥಾನದ ಹುಂಡಿಯನ್ನು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಒಡೆದು ಹಣ ಕಳ್ಳತನ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳ್ಳತನ ಕುರಿತು ಬಲಮುರಿ ಅಭಿವೃದ್ದಿ ಸಮಿತಿ ಸದಸ್ಯ ಚೆಲವರಾಜು ಕೆಆರ್‌ಎಸ್ ಪೊಲೀಸ್ ಠಾಣೆ ದೂರು ನೀಡಿದ್ದು. ಸುಮಾರು 20 ರಿಂದ 25 ಸಾವಿರ ನಗದು ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕಳೆದ ಮೂರು ತಿಂಗಳ ಹಿಂದೆಯಷ್ಟೆ ಕಳ್ಳತನ ನಡೆದಿರುವ ಬಗ್ಗೆ ಸಮಿತಿ ಸದಸ್ಯರು ಪೊಲೀಸರಿಗೆ ಮಾಹಿತಿ ನೀಡಿ , ಇದು ಎರಡನೇ ಬಾರಿ ಕಳ್ಳತನವಾಗಿದೆ ಎಂದಿದ್ದಾರೆ.
ಇತ್ತಿಚಿಗೆ ಶಿವರಾತ್ರಿ ಮತ್ತು ಯುಗಾದಿಯಲ್ಲಿ ಹೆಚ್ಚಿನ ‘ಭಕ್ತಾದಿಗಳು ಬಂದು ದೇವರ ದರ್ಶನ ಕೂಡ ಮಾಡಿದ್ದರು. ಹುಂಡಿಗೆ ಈ ಬಾರಿ ಹೆಚ್ಚಿನ ಹಣ ಸಂಗ್ರವಾಗಿತ್ತು. ಇದನ್ನೇ ಗುರಿಯಾಗಿಟ್ಟುಕೊಂಡು ಕಳ್ಳತನ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಕೆಆರ್ ಎಸ್ ಪೊಲೀಸ್ ಠಾಣೆಯಲ್ಲಿ ಪ್ರರಣ ದಾಖಲಿಸಿಕೊಂಡ ಪೊಲೀಸರು ಕಳ್ಳರಿಗಾಗಿ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಮುಸ್ಲಿಮರು ಕೆತ್ತಿದ ವಿಗ್ರಹಗಳಿಂದ ಊರಿಗೆ ಕೇಡು : ಋಷಿ ಕುಮಾರ ಸ್ವಾಮೀಜಿ